ಡಿಸಿ ಕಚೇರಿ ಎದುರು ನಡೆಯುತ್ತಿರುವ ಅಹೋರಾತ್ರಿ ಉಪವಾಸ ಧರಣಿಯಲ್ಲಿ ಇಬ್ಬರು ಶಿಕ್ಷಕರು ಅಸ್ವಸ್ಥ- Two teachers fall ill during overnight hunger strike in front of DC's office

 SUDDILIVE || SHIVAMOGGA

ಡಿಸಿ ಕಚೇರಿ ಎದುರು ನಡೆಯುತ್ತಿರುವ ಅಹೋರಾತ್ರಿ ಉಪವಾಸ ಧರಣಿಯಲ್ಲಿ ಇಬ್ಬರು ಶಿಕ್ಷಕರು ಅಸ್ವಸ್ಥ-Two teachers fall ill during overnight hunger strike in front of DC's office

Hunger, strike

ಜಿಲ್ಲಾಧಿಕಾರಿ ಕಚೇರಿ ಎದುರು ಕನ್ನಡ ಶಾಲೆಯ ಶಿಕ್ಷಕರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಇಬ್ಬರು ಶಿಕ್ಷಕರು ಅಸ್ವಸ್ಥರಾಗಿದ್ದು, ಅವರನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗ್ಗಿನಿಂದ ನಾಳೆ ಬೆಳಿಗ್ಗೆಯ ವರೆಗೆ ನಡೆಯುವ ಅಹೋರಾತ್ರಿ  ಉಪವಾಸ  ಪ್ರತಿಭಟನೆಯಲ್ಲಿ ಕನ್ನಡ ಶಾಲಾ ಶಿಕ್ಷಕರನ್ನ ಕೇಳುವರು ಇಲ್ಲದಂತಾಗಿದೆ. 

ರಾಜ್ಯದಲ್ಲಿ ಮೂರು ರೀತಿ ಶಾಲೆಗಳಿದ್ದು, ಸರ್ಕಾರಿ,  ಅನುದಾನಿತ ಶಾಲೆ ಮತ್ತು ಖಾಸಗಿ ಶಾಲೆಗಳಂತಿದ್ದು  ಸರ್ಕಾರಿ ಮತು ಅನುದಾನಿತ ಶಾಲೆಗಳಿಗೆ ಕೊಡುವ ಸವಲತ್ತನ್ನ, ವೇತನವನ್ನ ಖಾಸಗಿ ಶಾಲೆ ಶಿಕ್ಷಕರಿಗೂ ನೀಡುವಂತೆ ಆಗ್ರಹಿಸಿ ನಿರಂತರವಾಗಿ ಶಿಕ್ಷಕರು ಪ್ರತಿಭಟನೆ ನಡೆಸುತ್ತಾ ಬಂದಿದ್ದರೂ, ಯಾವುದೇ ಆಶ್ವಾಸನೆಗಳು ಈಡೇರದ ಹಿನ್ನಲೆಯಲ್ಲಿ ಇಂದು ಡಿಸಿ ಕಚೇರಿ ಎದುರು ರಾಜ್ಯದ ವಿವಿಧ ಜಿಲ್ಲೆಯ ಶಿಕ್ಷಕರು ಶಿವಮೊಗ್ಗ ಡಿಸಿ ಕಚೇರಿ ಎದುರು ಉಪವಾಸ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. 


ಶಿಕ್ಷಣ ಮಂತ್ರಿ ಅವರ ತವರು ಜಿಲ್ಲೆಯಲ್ಲಿ ಕನ್ನಡ ಶಾಲೆಯ ಶಿಕ್ಷಕರ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಯಾವುದೇ ಕ್ರಮ‌ಕೈಗೊಳ್ಳದ ಬಗ್ಗೆ ಪ್ರತಿಭಟನಾಕಾರರು ಬೇಸರ ವ್ಯಕ್ತಪಡಿಸಿದ್ದಾರೆ. ಡಿಸಿ ಕಚೇರಿಯಲ್ಲಿ ಶಿಕ್ಷಕರ ಪ್ರತಿಭಟನೆ ನಡೆಯುತ್ತಿದ್ದರೂ ಲೈಟು ಇಲ್ಲದೆ ಇರುವುದು ಸರ್ಕಾರ ಸ್ಥಿತಿಗತಿಗಳ ವಿರುದ್ಧ ಶಿಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. 


ಗದಗ ಜಿಲ್ಲೆಯ ನಾಗಯ್ಯ ಮುಂಡರಗಿ ಮತ್ತು ಕಲ್ಬುರ್ಗಿಯ ಶಿವಕುಮಾರ್ ಕಲ್ಬುರ್ಗಿ ಎಂಬ ಶಿಕ್ಷಕರು ಅಸ್ವಸ್ಥರಾಗಿದ್ದಾರೆ. ಬೆಳಗ್ಗಿನಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದ ಶಿಕ್ಷಕರು ಉಪವಾಸ, ಉರಿಬಿಸಿಲಿನಿಂದ ಬಳಲಿ ಅಸ್ವಸ್ಥರಾಗಿದ್ದಾರೆ. ಅವರನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ. ಅಂತೂ ಇಂತೂ ಕನ್ನಡ ಶಾಲೆಯ ಶಿಕ್ಷಕರನ್ನ ಸರ್ಕಾರ ಬೀದಿಗೆ ತಂದಿದೆ. 

Two teachers fall ill during overnight hunger strike in front of DC's office

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close