ವೋಟ್ ಚೋರಿ ಕಾಂಗ್ರೆಸ್ ನ ಚುನಾವಣೆ ಗಿಮಿಕ್-ಆರಗ-Vote stealing is Congress' election gimmick - Araga

SUDDILIVE || SHIVAMOGGA

ವೋಟ್ ಚೋರಿ ಕಾಂಗ್ರೆಸ್ ನ ಚುನಾವಣೆ ಗಿಮಿಕ್-ಆರಗ-Vote stealing is Congress' election gimmick - Araga

Araga, gimmick

ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷದ ವಿರುದ್ಧ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೋಟ್ ಚೋರಿ ಕುರಿತು ರಾಹಯಲ್ ಗಾಂಧಿ ಹೇಳಿಕೆ ವಿರುದ್ಧ ಅವರು ಕಿಡಿಕಾರಿದ್ದಾರೆ. 

ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹರಿಯಾಣದಲ್ಲಿ 25 ಲಕ್ಷಕ್ಕೂ ಹೆಚ್ಚಿನ ಮತಗಳ ಕಳವು ಆರೋಪ ಮಾಡಿರುವ ರಾಹುಲ್ ಗಾಂಧಿ ಅವರು ಹಿಟ್ ಅಂಡ್‌ ರನ್ ರೀತಿ ನಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ತನ್ನ ನಿಲುವಿನ ಕುರಿತು ಅಫಿಡವಿಟ್ ಹಾಕಿ ಎಂದು ಚುನಾವಣಾ ಆಯೋಗ ಹೇಳುತ್ತಿದೆ. ಆದರೆ ರಾಹುಲ್ ಗಾಂಧಿ ಆ ರೀತಿ ನಡೆದುಕೊಳ್ಳುತ್ತಿಲ್ಲ. ಬದಲಿಗೆ ವೃಥಾ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು. 

ಅವರಿಗೆ ಸುಪ್ರೀಂ ಕೋರ್ಟ್ ಗೆ ಹೋಗುವ ಅವಕಾಶವೂ ಇದೆ. ಅದರ ಬದಲು ಬಿಹಾರ ಚುನಾವಣೆ ಹೊತ್ತಿನಲ್ಲಿ ಈ ರೀತಿ ಆರೋಪ ಚುನಾವಣೆ ಗಿಮಿಕ್ ಎಂದಿರುವ ಆರಗ ಕೆಎಂಎಫ್ ನಿಂದ ತುಪ್ಪ ದರ ಹೆಚ್ಚಳ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿದರು. 

ಕೇಂದ್ರ ಸರ್ಕಾರ ಜಿಎಸ್‌ಟಿ ಇಳಿಸುವ ಮೂಲಕ ಜನರಿಗೆ ಅನುಕೂಲ ಮಾಡಿದೆ. ಜನಸಾಮಾನ್ಯರಿಗೆ ಇದರಿಂದ ಅನುಕೂಲ ಆಗಿತ್ತು. ಜನರಿಗೆ ತೆರಿಗೆ ಲಾಭ ಸಿಗಬೇಕು ಎಂಬ ಉದ್ದೇಶ ಕೇಂದ್ರದಾಗಿತ್ತು. ಆದರೆ ರಾಜ್ಯ ಸರ್ಕಾರ ತುಪ್ಪದ ದರವನ್ನ ಹೆಚ್ಚಿಸಿ ಜನರನ್ನು ಸುಲಿಗೆ ಮಾಡುತ್ತಿದೆ ಎಂದು ಆಕ್ಷೇಪಿಸಿದರು. 

ರಾಹುಲ್ ಗಾಂಧಿಯವರ ಹೇಳಿಕೆಯನ್ನೇ ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಪ್ರಿಯಾಂಕ ಖರ್ಗೆ ಮುಂದುವರಿಸಿದ್ದಾರೆ. ಈ ಮೂಲಕ ರಾಹುಲ್ ಗಾಂಧಿಯ ಹೇಳಿಕೆಗಳನ್ನು ಅವರು ಪುಷ್ಟೀಕರಿಸುತ್ತಿದ್ದಾರೆ ಎಂದು ಸಹ ಚಾಟಿ ಬೀಸಿದ್ದಾರೆ. 

ಲೋಕಸಭೆಯಲ್ಲಿ ನಿಮಗೆ  ಕಡಿಮೆ ಮತ ಸಿಕ್ಕಿದೆ ಆದರೆ ವಿಧಾನಸಭೆಯಲ್ಲಿ ೧೩೧ ಸ್ಥಾನ ಗಳಿಸಿದ್ದೀರಿ. ಹಾಗಿದ್ದೂ ಮಾಧ್ಯಮಗಳಲ್ಲಿ ಮತ ಕಳುವಿನ ಆರೋಪ ಮಾಡುತ್ತಿದ್ದೀರಿ. ಯಾರ ಸರ್ಕಾರ ಇದ್ದಾಗ ಈ ರೀತಿ ಆಗಿದೆ. ದಿಲ್ಲಿಯಲ್ಲಿರುವ ಚುನಾವಣಾ ಆಯೋಗದ ಆಯುಕ್ತರು ಮತಪಟ್ಟಿ ಸಿದ್ದ ಪಡಿಸುವುದಿಲ್ಲ. 

ಆಯಾ ರಾಜ್ಯದ ಚುನಾವಣಾ ಅಧಿಕಾರಿಗಳು ಮತ ಪಟ್ಟಿ ತಯಾರಿಸುತ್ತಾರೆ. ಇದಕ್ಕೆ ಚುನಾವಣಾ ಆಯೋಗ ಮಾರ್ಗದರ್ಶನ ಮಾಡುತ್ತದೆ. ಹೀಗಿರುವಾಗ ನಿಮ್ಮ ಸರ್ಕಾರ ಏನು ಮಣ್ಣು ತಿನ್ನುತ್ತಿದೆಯಾ? ಎಂದು ಕಿಡಿಕಾರಿದರು. 

ಸರ್ಕಾರದ ಅಧಿಕಾರಿಗಳು ಮತ್ತು ನೌಕರರ ಮೂಲಕ ನೀವು ಏನು ಮಾಡಿಸಿದ್ದೀರಿ?139 ಸ್ಥಾನ ಪಡೆದ ನೀವು ಎಷ್ಟು ಮತಗಳನ್ನು ಕಳ್ಳತನ ಮಾಡಿಸಿದ್ದೀರಾ?ಇದೇ ವಿಷಯವನ್ನು ಹಿಂದೆ ರಾಜಣ್ಣ ಪ್ರಸ್ತಾಪಿಸಿದ್ದರು. ಆದರೆ ಇದೇ ಕಾರಣಕ್ಕೆ ಅವರು ಸಚಿವ ಸ್ಥಾನ ಕಳೆದುಕೊಂಡರು. ರಾಹುಲ್ ಗಾಂಧಿ ವಿರುದ್ಧ ಮಾತನಾಡಿದ್ದಕ್ಕೆ ಮಂತ್ರಿ ಪದವಿಯನ್ನೇ ಕಳೆದುಕೊಂಡರು ಎಂದರು. 

ರಾಹುಲ್ ಗಾಂಧಿ ಹೇಳಿದ ಸುಳ್ಳನ್ನೇ ಎಲ್ಲರೂ ಹೇಳಬೇಕು. ಇಲ್ಲದಿದ್ದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ವಾತಾವರಣ ಇದೆ. ಇದೀಗ ಚುನಾವಣಾ ಆಯೋಗ ಮತದಾರರ ವಿಶೇಷ ಪರಿಷ್ಕರಣೆಗೆ ಮುಂದಾದರೆ ಅದನ್ನು ಸರ್ಕಾರ ಒಪ್ಪುತ್ತಿಲ್ಲ. ಹಾಗಾದರೆ ಇದರ ಹಿನ್ನೆಲೆ ಏನು?ಇವರು ಎಷ್ಟೆಷ್ಟು ವಿದೇಶಿಗರನ್ನು ಸೇರಿಸಿದ್ದಾರೆ. ಹಾಗಾಗಿ ಜನಕ್ಕೆ ಈ ಬಗ್ಗೆ ಸ್ಪಷ್ಟತೆ ನೀಡುವ ಅಗತ್ಯ ಇದೆ ಎಂದು ಆರಗ ಜ್ಞಾನೇಂದ್ರ ತಿಳಿಹೇಳಿದರು. 

Vote stealing is Congress' election gimmick - Araga

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close