ಗಣಪತಿ ವಿಸರ್ಜನಾ ಮೆರವಣಿಗೆಯ ವೇಳೆ ಗಲಾಟೆ ಪೊಲೀಸರ ಮೇಲೆ ಹಲ್ಲೆ-Riot police attacked during Ganpati immersion procession

 SUDDILIVE || BHADRAVATHI

ಗಣಪತಿ ವಿಸರ್ಜನಾ ಮೆರವಣಿಗೆಯ ವೇಳೆ ಗಲಾಟೆ ಪೊಲೀಸರ ಮೇಲೆ ಹಲ್ಲೆ-Riot police attacked during Ganpati immersion procession

Ganpati, Immersion
ಚಿತ್ರ-ಸಾಂಧರ್ಭಿಕ

ಭದ್ರಾವತಿಯ ಸುರಗೀತೋಪಿನಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಗಲಾಟೆಯಾಗಿದ್ದು ಗಲಾಟೆ ಬಿಡಿಸಲು ಹೋದ ಎಎಸ್ಐನ್ನ ಎಳೆದಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ. ಮತ್ತೋರ್ವ ಪೊಲೀಸ್ ಗೆ ಮೂಗಿನಲ್ಲಿ ರಕ್ತಬರುವಂತೆ ಹಲ್ಲೆ ನಡೆಸಿರುವ ಘಟನೆ ಬೆಳಗಿನ ಜಾವ 1 ಗಂಟೆಗೆ ನಡೆದಿದೆ. 

ನಿನ್ನೆ ಸುರಗೀತೋಪಿನ ಅನ್ನಪೂರ್ಣೇಶ್ವರಿ ಸಂಘದ ವಿನಾಯಕ ಮಂಡಳಿಯ ಗಣಪತಿ ವಿಸರ್ಜನೆ ಕಾರ್ಯಕ್ರಮ ನಡೆದಿದೆ. ಈ ಘಟನೆಯ ವೇಳೆ ಮನು ಮತ್ತು ಯೋಗೀಶ್ ಎಂಬುವರು ಬೈಕ್ ನಲ್ಲಿ ಬಂದಿದ್ದಾರೆ. ಮೆರವಣಿಗೆಯಲ್ಲಿದ್ದ ಜೀವನ್ ಎಂಬುವರು ನೀವು ಯಾಕೆ ಇಲ್ಲಿಗೆ ಬಂದಿದ್ದೀರಿ ಎಂದು ಪ್ರಶ್ನಿಸಿದ್ದಾರೆ. 

ಇಬ್ವರ ನಡುವೆ ಮಾತಿಗೆ ಮಾತು ಬೆಳೆದು ಹೊಕೈ ಹಂತ ತಲುಪಿದೆ. ಕರ್ತವ್ಯದಲ್ಲಿದ್ದ ಎಎಸ್ಐ ಕೃಷ್ಣಮೂರ್ತಿ ಗಲಾಟೆ ಬಿಡಿಸಲು ಮುಂದಾಗಿದ್ದಾರೆ. ಆದರೆ ಕೃಷ್ಣಮೂರ್ತಿಯವರ ಶರ್ಟ್ ಹರಿದಿದ್ದಾರೆ. ಅವರನ್ನ ಎಳೆದಾಡಲಾಗಿದೆ. 

ಇದೇ ವೇಳೆ ಗಣಪತಿ ವಿಸರ್ಜಿಸುವ ಮೆರವಣಿಗೆ ಕಾರ್ಯಕ್ರಮವನ್ನ ಶೂಟಿಂಗ್ ಮಾಡುತ್ತಿದ್ದ ಅಜಿತ್ ಎಂಬುವರಿಗೂ ಹೊಡೆತಬಿದ್ದಿದೆ. ಇವರ ಮೂಗಿನಲ್ಲಿ ರಕ್ತ ಬರುವಂತೆ ಹಲ್ಲೆ ನಡೆಸಿದ್ದು, ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ನಂತರ ಜೀವನ್ ಎಂಬುವರನ್ನ ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಲಾಗಿದೆ. ಈ ಘಟನೆ ಪೇಪರ್ ಟೌನ್ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದೆ.

ಭದ್ರಾವತಿಯಲ್ಲಿ ಗಣಪತಿ ಹಬ್ಬ ಮುಗಿದು ಎರಡು ತಿಂಗಳು ಕಳೆದರೂ ಇನ್ನೂ ವಿಸರ್ಜನ ಮೆರವಣಿಗೆ ನಡೆಯುತ್ತಿದೆ. ದಸರಾ, ದೀಪಾವಳಿ ಹಬ್ಬ ಮುಗಿದರೂ ಇನ್ನೂ ಗಣಪತಿ ವಿಸರ್ಜನಾ ಮೆರವಣಿಗೆ ಮುಂದುವರೆದಿದೆ.

Riot police attacked during Ganpati immersion procession


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close