ಮಹಿಳೆಯ ಖಾಸಗಿ ಫೊಟೊ ವಿಡಿಯೊ ಇಟ್ಟಕೊಂಡು ಹಣಕ್ಕೆ ಬೇಡಿಕೆ-Woman's private photos and videos were taken and money was demanded

 SUDDILIVE || SHIVAMOGGA

ಮಹಿಳೆಯ ಖಾಸಗಿ ಫೊಟೊ ವಿಡಿಯೊ ಇಟ್ಟಕೊಂಡು ಹಣಕ್ಕೆ ಬೇಡಿಕೆ-Woman's private photos and videos were taken and money was demanded

Money, demand


ಶಿವಮೊಗ್ಗ ಜಿಲ್ಲೆಯ ಮಹಿಳೆಯೊಬ್ಬರ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ದುರುಪಯೋಗಪಡಿಸಿಕೊಂಡು, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ, ಬರೋಬ್ಬರಿ 10 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ವರದಿಯಾಗಿದೆ.ಈ ಕುರಿತು ಸಂತ್ರಸ್ತ ಮಹಿಳೆಯು ಶಿವಮೊಗ್ಗದ ಸಿಇಎನ್  ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅಕ್ಟೋಬರ್ 31 ರಂದು ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯ ಫೋನ್ ನಂಬರ್‌ಗೆ ಅವರ ಖಾಸಗಿ ವಿಡಿಯೋಗಳು ಮತ್ತು ಫೋಟೋಗಳನ್ನು ಕಳುಹಿಸಿ, ತನಗೆ 10 ಲಕ್ಷ ಹಣ ನೀಡದಿದ್ದರೆ, ಈ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಅವರ ಗಂಡ ಹಾಗೂ ಸಂಬಂಧಿಕರಿಗೆ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಬೆದರಿಕೆಯಿಂದ ಭಯಗೊಂಡ ಮಹಿಳೆ ಅಂದು ಆ ಸಂದೇಶಗಳನ್ನು ಡಿಲಿಟ್​ ಮಾಡಿದ್ದಾರೆ.

ಆದರೂ ಬಿಡದ ಆ ವ್ಯಕ್ತಿ ನವೆಂಬರ್ 03 ರಂದು ಪುನಃ ಮಹಿಳೆಗೆ ಕರೆ ಮಾಡಿ, ಹಣ ವರ್ಗಾಯಿಸಲು ವಿವಿಧ ಬ್ಯಾಂಕ್ ಖಾತೆಗಳ ವಿವರಗಳನ್ನು ಕಳುಹಿಸಿದ್ದು, ಹಣ ಹಾಕದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಮತ್ತೆ ಬೆದರಿಕೆ ಹಾಕಿದ್ದಾನೆ. ಇದರಿಂದಭಯಭೀತರಾದ ಮಹಿಳೆ, ಕೊನೆಗೆ ವ್ಯಕ್ತಿಯ ವಿರುದ್ಧ ಶಿವಮೊಗ್ಗದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. 

Woman's private photos and videos were taken and money was demanded

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close