SUDDILIVE || SHIVAMOGGA
ಹೊಟ್ಟೆನೋವಿಗೆ ವೇಲು ಕಟ್ಟಿಕೊಂಡಿದ್ದ ಯುವತಿ ಅದೇ ವೇಲಿನಿಂದ ಆತ್ಮಹತ್ಯೆ-A young woman who tied a rope to a stomach ache committed suicide with the same rope
ಕೋಟೆ ರಸ್ತೆಯ ಡಾ.ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿನಿಯೊಬ್ಬರು ಇಂದು ಬೆಳಿಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಭದ್ರಾವತಿ ತಾಲೂಕಿನ ದೊಡ್ಡೇರಿ ಗಂಗೂರು ಕ್ಯಾಂಪ್ ನ ನಿವಾಸಿ ಹಾಸ್ಟೆಲ್ ನಲ್ಲಿ ಕಳೆದ ಮೂರು ವರ್ಷದಿಂದ ವಾಸವಾಗಿದ್ದ ವನೀಶ ಟಿ.ಸಿ (21) ಎಂಬ ವಿದ್ಯಾರ್ಥನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ವನೀಶ ಡಿವಿಎಸ್ ಸೈನ್ಸ್ ಕೊನೆಯ ಪದವಿ ಕೊನೆಯ ವರ್ಷ ಓದುತ್ತಿದ್ದು, ಇಂದು ಬೆಳಿಗ್ಗೆ ಹಾಸ್ಟೆಲ್ ನಲ್ಲಿ ಮೇಲಗಡೆ ಬಟ್ಟೆ ಒಣಗಿಹಾಕುವ ಜಾಗದಲ್ಲಿ ನೇಣುಬಿಗಿದುಕೊಂಡಿದ್ದಾರೆ. ಹಾಸ್ಟೆಲ್ ನಲ್ಲಿ
390 ಮಕ್ಕಳು ಇದ್ದು ಈ ಹಾಸ್ಟೆಲ್ ನ್ನ ಸಮಾಜಕಲ್ಯಾಣ ಇಲಾಖೆಯ ಅಡಿ ನಡೆಯುತ್ತಿದೆ. ತಿಂಡಿ ತಿಂದು ಸೀದಾ ಮೇಲೆಗೆ ಚೇರಿನ ಸಮೇತ ಹೋಗಿದ್ದಾರೆ ವೇಲಿಗೆ ನೇಣು ಬಿಗಿದುಹಾಕಿಕೊಂಡಿದ್ದಾರೆ. ಈ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಬೆಳಗ್ಗಿಂದ ಹೊಟ್ಟೆನೋವು ಎನ್ನುತ್ತಿದ್ದ ವಿದ್ಯಾರ್ಥಿನಿ ಹೊಟ್ಟೆಗೆ ಬಟ್ಟೆಕಟ್ಟಿಕೊಂಡಿದ್ದಳು. ಅದೇ ವೇಲಿನಿಂದ ಯುವತಿ ನೇಣು ಬಿಗಿದುಕೊಂಡಿದ್ದಾರೆ.
A young woman who tied a rope to a stomach ache committed suicide with the same rope
