SUDDILIVE || SHIVAMOGGA
ಜಿದ್ದಿಗೆ ಬಿದ್ದು ಮಹಿಳೆಯ ಮನೆಗೆ ಹೋಗುವ ದಾರಿಯನ್ನೇ ಬಂದ್ ಮಾಡುದ್ರ ಗ್ರಾಮಸ್ಥರು? Will the villagers be stubborn enough and block the road leading to the woman's house?
ಶಿವಮೊಗ್ಗ ತಾಲ್ಲೂಕು ತಮಡಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಸಿನಹೊಂಡ-ಕೋಡಿ ಗ್ರಾಮದಲ್ಲಿ ಟ್ರಂಚ್ ತೆಗೆಸಿದ್ದಕ್ಕೆ ರೊಚ್ಚಿಗೆದ್ದುಗ್ರಾಮಸ್ಥರು ಮಹಿಳೆಯ ಮನೆಯ ದಾರಿಯನ್ನ ಬಂದ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೆಲ ವರ್ಷದ ಹಿಂದೆ ರೈತರ ಜಮೀನಿಗೆ ಆನೆಗಳು ದಾಟಬಾರದೆಂಬ ದೃಷ್ಟಿಯಿಂದ ಅರಣ್ಯ ಇಲಾಖೆ ಸುತ್ತಲು ಟ್ರಂಚ್ ತೆಗೆಸಲಾಗಿತ್ತು.
ಕೆಲ ದಿನದ ಹಿಂದೆ ಊರಿನ ಕೆಲವರು ಸೇರಿಕೊಂಡು ಆನೆ ಟ್ರಂಚ್ ನ್ನ ಇಲಾಖೆ ಗಮನಕ್ಕೆ ತಾರದೆ ಮುಚ್ಚಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ನಂತರ ಅರಣ್ಯ ಇಲಾಖೆಯವರಿಗೆ ಮಾಹಿತಿ ಗೊತ್ತಾಗಿ ಮುಚ್ಚಿರುವ ಟ್ರಂಚ್ ಅನ್ನು ತೆರವುಗೊಳಿಸಿದ್ದಾರೆ, ಈ ಘಟನೆಯನ್ನ ಅರಣ್ಯ ಇಲಾಖೆಗೆ ಮಾಹಿತಿ ನೀಡಿರುವುದು ಟ್ರಂಚ್ ನ ಪಕ್ಕದಲ್ಲಿರುವ ಮಹಿಳೆಯ ಮನೆಯವರೇ ಎಂದು ಕೆಲ ಗ್ರಾಮಸ್ಥರು ಮಹಿಳೆಯ ಮನೆಗೆ ಹೋಗುವ ದಾರಿಯಲ್ಲೇ ಮಣ್ಣೇರಿಸಿ ಕಲ್ಲು ನೆಟ್ಟು ಬಂದ್ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ.
ಮನೆಗೆ ಹೋಗುವ ರಸ್ತೆಯನ್ನ ಇದೇ ಊರಿನ ಕೆಲ ಗ್ರಾಮಸ್ಥರು ಹಾಗೂ ತಮಡಿಹಳ್ಳಿ ಗ್ರಾಮ ಪಂಚಾಯತ್ ಸದಸ್ಯ ಸೇರಿಕೊಂಡು ಹಲವು ವರ್ಷಗಳಿಂದ ಇದ್ದ ರಸ್ತೆಯನ್ನು ಬಂದ್ ಮಾಡಿಸಿದ್ದಾರೆ,ಬೇರೆ ಹಳ್ಳಿಗಳಿಗೂ ಸಂಪರ್ಕ ಇರುವುದರಿಂದ ಇಲ್ಲಿ ಇರುವ ಕೆಲ ಮನೆಗಳಿಗೆ ಓಡಾಡಲು ಯಾವುದೇ ರಸ್ತೆ ಇಲ್ಲದೆ ಮೂರ್ನಾಲ್ಕು ದಿನದಿಂದ ಪರದಾಡುವ ಸ್ಥಿತಿ ಉಂಟಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಗಮನ ಹರಿಸಬೇಕಿದೆ, ಈ ವಿಚಾರಕ್ಕೆ ಸಂಬಂಧಪಟ್ಟಂತೆ ಆನೆ ಟ್ರಂಚ್ ಗೂ ಇಲ್ಲಿರುವ ಕೆಲ ಮನೆಗಳಿಗೆ ಯಾವುದೇ ಸಂಬಂಧ ಇಲ್ಲ ಎಂದು ಹೆಸರನ್ನ ಹೇಳಲು ಬಯಸದ ಮಹಿಳೆ ಕೇಳಿಕೊಂಡಿದ್ದಾರೆ. ಇಲ್ಲಿನ ಸ್ಥಳೀಯ ಮುಖಂಡನ ಕೈವಾಡದಿಂದ ಸಾವಿರಾರು ವರ್ಷಗಳಿಂದ ದಿನನಿತ್ಯ ಓಡಾಡುವ ರಸ್ತೆ ಮುಚ್ಚಿರುವುದು ಎಷ್ಟರಮಟ್ಟಿಗೆ ಸರಿ ಎಂಬುದು ಮಹಿಳೆಯ ಪ್ರಶ್ನೆಯಾಗಿದೆ.
block the road leading to the woman's house
