SUDDILIVE || SHIVAMOGGA
ಕೃಷಿ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್!-Great response to the agricultural fair!
ಕೃಷಿ ಮತ್ತು ತೋಟಗಾರಿಕಾ ಮೇಳ 25 ಇಂದಿಗೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಯಶಸ್ವಿಯಾಗಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ರೈತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ.
ಈ ದಿನ ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪಾಟೀಲ್ ಸರ್ ಅವರು ಮೇಳದ ಕೃಷಿ ವಿಜ್ಞಾನ ಕೇಂದ್ರದಲ್ಲಿರುವ ಪ್ರಾತ್ಯಕ್ಷಿಕ ತತ್ವಗಳಿಗೆ ಭೇಟಿ ನೀಡಿ ಅಣಬೆ, ಅಡಿಕೆ ಸಿಪ್ಪೆಯಿಂದ ಗೊಬ್ಬರ ತಯಾರು ಮಾಡುವುದು ಮತ್ತು ಮತ್ತು ಕೃಷಿ ವಿಜ್ಞಾನ ಕೇಂದ್ರದ ಹೂ ಮತ್ತು ತರಕಾರಿ ಪ್ರಾತ್ಯಕ್ಷತೆಗೆ ಭೇಟಿ ನೀಡಿದರು ಹಾಗೆಯೇ ಕೃಷಿ ವಿಜ್ಞಾನ ಕೇಂದ್ರದಿಂದ ಉದ್ಘಾಟನೆಗೊಂಡಿರುವ ಕೃಷಿ ಆನ ಕೇಂದ್ರಕ್ಕೂ ಭೇಟಿ ನೀಡಿ ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳು ಪ್ರಶಂಸೆಯನ್ನು ವ್ಯಕ್ತಪಡಿಸಿದರು
ಕೃಷಿ ಮತ್ತು ತೋಟಗಾರಿಕೆ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಅಡಿಕೆ ಸಿಪ್ಪೆಯಿಂದ ಗೊಬ್ಬರ ತಯಾರು ಮಾಡುವ ಬಗ್ಗೆ ವಿಶೇಷವಾಗಿ ಆಸಕ್ತಿವಹಿಸಿ ಅದರ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ ಈ ಅಡಿಕೆ ಸಿಪ್ಪೆಯಿಂದ ಗೊಬ್ಬರ ತಯಾರು ತಯಾರು ಮಾಡುವ ಬಗ್ಗೆ ಕೆವಿಕೆ ಕೃಷಿ ಕೆವಿಕೆ ಕೃಷಿ ವಿಜ್ಞಾನ ಕೇಂದ್ರದ ಪ್ರಾತ್ಯಕ್ಷಿತ ತಾಲೂಕುಗಳಲ್ಲಿ ಇದರ ಬಗ್ಗೆ ಪ್ರತ್ಯಕ್ಷತೆಯನ್ನು ಇರಿಸಲಾಗಿದೆ.
ನಿನ್ನೆ ನಡೆದ ಕೃಷಿ ಮತ್ತು ತೋಟಗಾರಿಕೆ ಮೇಳ 2025ರ ಎರಡನೇ ದಿನ ಸುಮಾರು ಒಂದುವರೆಯಿಂದ ಎರಡು ಲಕ್ಷದವರೆಗೂ ರೈತರು ಮತ್ತು ಜನರು ಭಾಗವಹಿಸಿ ಮಾಹಿತಿಯನ್ನ ಪಡೆದುಕೊಂಡಿದ್ದಾರೆ. ಅಲ್ಲದೆ, ಮೇಳದಲ್ಲಿ ಸುಮಾರು ಒಂದುವರೆ ಲಕ್ಷ ಮೊತ್ತದ ವಿವಿಧ ಬೀಜಗಳ ಮಾರಾಟವಾಗಿದ್ದು ಸುಮಾರು ಮೂರರಿಂದ ನಾಲ್ಕು ಲಕ್ಷದ ಮೊತ್ತದ ಸಸಿಗಳ ಮಾರಾಟ ಆಗಿದ್ದು ಇದರ ಪ್ರಯೋಜನವನ್ನು ರೈತರು ಪಡೆದುಕೊಂಡಿದ್ದಾರೆ.
Great response to the agricultural fair!



