SUDDILIVE || SHIVAMOGGA
ವೀರಸಾವರ್ಕರ್ ನ್ನ ಡಿಪಿಗೆ ಹಾಕಿಕೊಂಡಿದ್ದಕ್ಕೆ ಜೀವಬೆದರಿಕೆ-Life threat for putting Veera Savarkar on DP
ವಾಟ್ಸಪ್ ಡಿಪಿಯಲ್ಲಿ ವೀರ ಸಾವರ್ಕರ್ ಫೋಟೊ ಬಳಸಿದ್ದಕ್ಕೆ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಿ ಕಾನೂನು ವಿದ್ಯಾರ್ಥಿ ಚಂದನ್ ಎಂಬುವರು ದೂರು ನೀಡಿದ್ದಾರೆ.
ನ.6ರಂದು ಅಪರಿಚಿತ ನಂಬರ್‌ನಿಂದ ವಾಟ್ಸಪ್ ಕರೆ ಬಂದಿದ್ದು ವ್ಯಕ್ತಿಯೊಬ್ಬ ತನ್ನನ್ನು ಪ್ರವೀಣ್ ಎಂದು ಪರಿಚಯಿಸಿಕೊಂಡಿದ್ದ. ವೀರ ಸಾರ್ವಕರ್ ಫೋಟೊವನ್ನು ಡಿಪಿಯಲ್ಲಿ ಬಳಸಿದ್ದೇಕೆ ಎಂದು ವಿಚಾರಿಸಿ, ಕೊನೆಗೆ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ. ಚಂದನ್ ಅವರು ವಾಟ್ಸಪ್ ಪರಿಶೀಲಿಸಿದಾಗ ಶೇಖ್ ಎಂಬ ಹೆಸರು ತೋರಿಸುತ್ತಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Life threat for putting Veera Savarkar on DP
