SUDDILIVE || SHIVAMOGGA
ಓರ್ವ ಮಹಿಳೆಗೆ ಮದುವೆಯಾಗು ಎಂದು ಮನೆಯ ಟಾರ್ಪಲ್ ಗೆ ಬೆಂಕಿ ಹಚ್ಚಿದ ಭೂಪ! ಮತ್ತೋರ್ವ ಮಹಿಳೆಗೆ ಬ್ಯಾಂಕ್ ನ ಹಿ.ಅಧಿಕಾರಿಯಿಂದಲೇ ಲೈಂಗಿಕ ಕಿರುಕುಳ-A man set fire to the tarpaulin of a house saying he was going to marry the woman of the house! Another woman was harassed by a bank official
ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಬ್ಬರು ಮಹಿಳೆಯರಿಂದ ತಮಗೆ ಆಗಿರುವ ನೋವಿನ ವಿರುದ್ಧ ಪ್ರತ್ಯೇಕ ದೂರುಗಳು ದಾಖಲಾಗಿವೆ. ಒಬ್ಬರು ಬ್ಯಾಂಕ್ ಸಿಬ್ಬಂದಿಯಾಗಿದ್ದರೆ ಅವರ ಹಿರಿಯ ಅಧಿಕಾರಿಗಳಿಂದ ಲೈಂಗಿಕ ಕಿರುಕುಳದ ಬಗ್ಗೆ ದೂರು ದಾಖಲಿಸಿದರೆ.
ಮತ್ತೋರ್ವ ಮಹಿಳೆಗೆ ಸೀಗೆಹಟ್ಟಿ ನಿವಾಸಿಯಾಗಿದ್ದು ಇವರಿಗೆ ಸಾವರ್ ಲೈನ್ ನ ನಿವಾಸಿಯ ವ್ಯಕ್ತಿ ಮದುವೆಯಾಗು ಎಂದು ದುಂಬಾಲು ಬಿದ್ದು ಮನೆಯ ಟಾರ್ಪಲ್ ಗೆ ಬೆಂಕಿಹಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರಾಗಿ ದಾಖಲಾಗಿದೆ.
ಬೈಂದೂರಿನ ಮಹಿಳೆಯೊಬ್ಬರು ಶಿವಮೊಗ್ಗದಲ್ಲಿರುವಾಗ ನೆಹರೂ ರಸ್ತೆಯಲ್ಲಿರುವ Hdfc ಬ್ಯಾಂಕ್ ನಲ್ಲಿ ಪರ್ನಲ್ ಬ್ಯಾಂಕರ್ ಹುದ್ದೆಯಲ್ಲಿದ್ದಾಗ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಹಿರಿಯ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ. ಬ್ಯಾಂಕ್ ಕೆಲಸವಿದೆ ಎಂದು ಕರೆದು ಲೈಂಗಿಕ ಕಿರುಕುಳ ನೀಡಿರುವುದಾಗಿ ಪೋಶ್ ಕಮಿಟಿ ಮುಂದೆ ದೂರು ನೀಡಿದ್ದು ಅದು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸೀಗೆಹಟ್ಟಿಯಲ್ಲಿ 35 ವರ್ಷದ ಮಹಿಳೆಗೆ ಸವಾರ್ ಲೈನ್ ರಸ್ತೆಯ ನಿವಾಸಿಯ ವ್ಯಕ್ತಿ ಒಂದು ವರ್ಷದ ಹಿಂದೆ ಕಾಮಾಕ್ಷಿ ಬೀದಿಯಲ್ಲಿದ್ದಾಗ ಪರಿಚಯವಾಗಿದ್ದ. ಮಹಿಳೆಗೆ 3 ವರ್ಷದ ಹಿಂದೆ ಗಂಡ ತೀರಿಕೊಂಡಿದ್ದು, ಓರ್ವ ಮಗನಿದ್ದನು. ಈ ಮಹಿಳೆಗೆ ಪರಿಚಯವಾದ ವ್ಯಕ್ತಿ ಮದುವೆಯಾಗು ಎಂದು ಅವರು ವಾಸವಾಗಿದ್ದ ಮನೆಗೆ ನುಗ್ಗಲು ಯತ್ನಿಸಿದ್ದಾನೆ.
ಯಾವಾಗ ಮನೆಯ ಬಾಗಿಲು ತೆಗೆಯದಿದ್ದಾಗ ಮನೆಯ ಸೂರಿಗೆ ಹಾಕಿದ್ದ ಪ್ಲಾಸ್ಟಿಕ್ ಟಾರ್ಪಲ್ ಗೆ ಬೆಂಕಿಹಚ್ಚಿ ಹೋಗಿದ್ದಾನೆ. ಮಹಿಳೆಕೂಗಿಕೊಂಡಾಗ ಅಕ್ಕಪಕ್ಕದವರು ಬಂದು ಆಕೆಯನ್ನ ಬೆಂಕಿಯಿಂದ ಬಜಾವ್ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
woman was harassed
