SUDDILIVE || SHIVAMOGGA
20 ಕ್ವಿಂಟಾಲ್ ಭತ್ತ ಸುಟ್ಟು ಭಸ್ಮ-20 quintals of paddy burnt to ashes
ಭತ್ತದ ಹೊರೆ ತುಂಬಿಕೊಂಡು ಹೋಗ್ತಿದ್ದ ಟ್ರ್ಯಾಕ್ಟರ್‌ಗೆ ಜೋತು ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡು ಭತ್ತದ ಹೊರೆ ಸುಟ್ಟುಹೋಗಿರುವ ಘಟನೆ ಶಿವಮೊಗ್ಗ ತಾಲೂಕಿನ ಬಿಲ್ಗುಣಿ ಘಂಟೆತವರು ರಸ್ತೆಯಲ್ಲಿ ನಡೆದಿದೆ. ಈ ಅಗ್ನಿ ಅವಘಡದಲ್ಲಿ ಸುಮಾರು ಒಂದು ಎಕರೆ ಪ್ರದೇಶದ ಭತ್ತದ ಪೈರು ನಾಶವಾಗಿದ್ದು, ರೈತನಿಗೆ ಸಾವಿರಾರು ರೂಪಾಯಿ ನಷ್ಟವಾಗಿದೆ.
ಇಂದು ಮಧ್ಯಾಹ್ನ ಸಂಭವಿಸಿದ ಈ ಅನಾಹುತದಲ್ಲಿ ಒಬ್ಬ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯರು ಈ ದುರಂತಕ್ಕೆ ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ನೇರ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸ್ಥಳೀಯರ ಪ್ರಕಾರ , ರಸ್ತೆಯ ಮೇಲೆ ಜೋತು ಬಿದ್ದಿದ್ದ ವಿದ್ಯುತ್ ತಂತಿಯನ್ನು ಸರಿಪಡಿಸುವಂತೆ ಜೆಇಇ ಮತ್ತು ಎಇಇ ಅವರಿಗೆ ಒಂದು ತಿಂಗಳ ಹಿಂದೆಯೇ ಮನವಿ ಸಲ್ಲಿಸಲಾಗಿತ್ತು. ಆದರೆ, ಅಧಿಕಾರಿಗಳು ಈ ಮನವಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ನಿರ್ಲಕ್ಷ್ಯ ತೋರಿದ್ದೇ ಈ ದೊಡ್ಡ ಅನಾಹುತಕ್ಕೆ ಕಾರಣವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಾರು 1 ಎಕರೆಯಲ್ಲಿ ಬೆಳೆದಿದ್ದ 20 ಕ್ವಿಂಟಾಲ್ಗಿಂತಲೂ ಹೆಚ್ಚು ಭತ್ತ ಕೈಗೆ ಬಂದಿತ್ತಾದರೂ ಸಾಗಿಸುವಾಗ ವಿದ್ಯುತ್ ತಂತಿಯಿಂದಾಗಿ ಸುಟ್ಟುಹೋಗಿದೆ.
20 quintals of paddy burnt to ashes

