ಶಾಮನೂರು ಶಿವಶಂಕರಪ್ಪನವರಿಗೆ ಹಲವೆಡೆ ಸಂತಾಪ ಸಭೆ-Condolences held in many places for Shamanur Shivashankarappa

SUDDILIVE || SHIVAMOGGA

ಶಾಮನೂರು ಶಿವಶಂಕರಪ್ಪನವರಿಗೆ ಹಲವೆಡೆ ಸಂತಾಪ ಸಭೆ-Condolences held in many places for Shamanur Shivashankarappa    

Shamnuru, condolence

ಶಿವಮೊಗ್ಗ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಗೌರವಾಧ್ಯಕ್ಷರು, ಹಿರಿಯ ನಾಯಕರು ಹಾಗೂ ಶಾಸಕರಾದ ಶ್ರೀ ಶಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸಚಿವ ಮಧು ಬಂಗಾರಪ್ಪ ಸಂತಾಪ ಸೂಚಿಸಿದ್ದಾರೆ.

ನಮ್ಮ ತಂದೆ ಬಂಗಾರಪ್ಪಾಜಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆತ್ಮೀಯ ಒಡನಾಡಿಗಳಾಗಿ, ರಾಜ್ಯಮಟ್ಟದಲ್ಲಿ ಅನೇಕ ಜನಪರ ಕಾರ್ಯಗಳನ್ನು ಮಾಡಿ ಪ್ರಖ್ಯಾತಿ ಹೊಂದಿದ್ದಾರೆ. ನಮ್ಮನ್ನು ಸಹ ಅತ್ಯಂತ ಆತ್ಮೀಯವಾಗಿ , ಪ್ರೀತಿವಿಶ್ವಾಸದಿಂದ ಮಾತನಾಡಿಸಿ ಮಾರ್ಗದರ್ಶನ ನೀಡುತ್ತಿದ್ದ ಹಿರಿಯರಾದ ಶಾಮನೂರು ಶಿವಶಂಕರಪ್ಪ ಅವರನ್ನು ನಮ್ಮ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಅವರ ನೆನಪುಗಳು ಮತ್ತು ಮಾರ್ಗದರ್ಶನ ಸದಾ ನಮ್ಮೊಂದಿಗೇ ಶಾಶ್ವತವಾಗಿ ಉಳಿಯುತ್ತವೆ.

ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವ ಮೂಲಕ ಸಮಾಜದ ಏಳಿಗೆಗೆ ಅಪೂರ್ವ ಕೊಡುಗೆ ನೀಡಿದ್ದಾರೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಾ, ಸಚಿವ ಸಂಪುಟದ ಸಹೋದ್ಯೋಗಿ ಎಸ್.ಎಸ್ ಮಲ್ಲಿಕಾರ್ಜುನ್ ಅವರ ಕುಟುಂಬ ವರ್ಗದವರಿಗೆ, ಬಂಧು ಮಿತ್ರರಿಗೆ ಹಾಗೂ ಅವರ ಅಭಿಮಾನಿಗಳಿಗೆ ದುಖಃ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಂತಾಪ ಸಭೆ

ಮಾಜಿ ಸಚಿವ ಹಾಲಿ ಶಾಸಕ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ದಿ.ಶಾಮನೂರು ಶಿವಶಂಕರಪ್ಪ ಅವರಿಗೆ ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಶಾಮನೂರು ಶಿವಶಂಕರಪ್ಪ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೌನಾಚರಣೆ ನಡೆಸಿ ನಂತರ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಶಾಮನೂರು ಶಿವಶಂಕರಪ್ಪ ಹೃದಯವಂತರಾಗಿದ್ದರು. ಎಲ್ಲರನ್ನು ಗೌರವಿಸುವ ಗುಣ ಅವರಲ್ಲಿ ಇತ್ತು. ನಿ?ರದ ಇ?ದ ರಾಜಕಾರಣಿ, ಅವರು ಕಾಂಗ್ರೆಸ್ ಪಕ್ಷದ ಶಕ್ತಿಯಾಗಿದ್ದರು ಎಂದರು.

 ಮಹಾನಗರ ಪಾಲಿಕೆ ಮಾಜಿ ಸದಸ್ಯ ಹೆಚ್.ಸಿ. ಯೋಗೇಶ್ ಮಾತನಾಡಿ, ಶಿವಶಂಕರಪ್ಪ ಓದಿದ್ದು ೧೦ನೇ ತರಗತಿಯಾದರೂ ಸುಮಾರು ೨೦೦ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳ ಕಟ್ಟಿ ಆ ಮೂಲಕ ಲಕ್ಷಾಂತರ ಜನಕ್ಕೆ ಉನ್ನತ ಶಿಕ್ಷಣ ನೀಡಿದವರು, ಅಜಾತಶತ್ರು ಆಗಿದ್ದ ಅವರು ಕೊಡುಗೈ ದಾನಿಯಾಗಿದ್ದರು, ಜಾತ್ಯತೀತ ಮತ್ತು ಪಕ್ಷಾತೀತರೂ ಆಗಿಧ್ದರು ಎಂದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಎಸ್.ಟಿ. ಚಂದ್ರಶೇಖರ್, ಎಸ್ಸಿ ಎಸ್ಟಿ ವಿಭಾಗದ ಜಿಲ್ಲಾಧ್ಯಕ್ಷ ಶಿವಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್, ಜಿಲ್ಲಾ ಕಾಂಗ್ರೆಸ್ ಮಹಿಳಾ ವಿಭಾಗದ ಅಧ್ಯಕ್ಷೆ ಶ್ವೇತಾ ಬಂಡಿ, ಪ್ರಮುಖರಾದ ಯು. ಶಿವಾನಂದ್, ಅರ್ಚನಾ ನಿರಂಜನ್, ಸ್ಟೇಲಾ ಮಾರ್ಟಿನ್, ಸುವರ್ಣ ನಾಗರಾಜ್, ನೇತಾಜಿ ಇಕ್ಬಾಲ್, ಪ್ರಕಾಶ್, ಸೈಯದ್ ವಾಹಿದ್ ಅಡ್ಡು, ಡಿಸೋಜಾ ಸೇರಿದಂತೆ ಹಲವರಿದ್ದರು.

ಬೆಕ್ಕಿನ ಕಲ್ಮಠ ಮಠದಲ್ಲಿ ಸಂತಾಪ ಸಭೆ

ಶಿವಮೊಗ್ಗ: ನಗರದ ಬೆಕ್ಕಿನ ಕಲ್ಮಠದ ಸಭಾಭವನದಲ್ಲಿ ಇಂದು ಅಗಲಿದ ನಾಯಕ ಶಾಮನೂರು ಶಿವಶಂಕರಪ್ಪ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಶಿವಮೊಗ್ಗ ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಶ್ರದ್ಧಾಂಜಲಿ ಸಭೆಯ ಸಾನಿಧ್ಯ ವಹಿಸಿದ್ದ ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳು ಮಾತನಾಡಿ, ನಮ್ಮನಗಲಿದ ಅಜಾತಶತ್ರು ಶಾಮನೂರು ಶಿವಶಂಕರಪ್ಪನವರು ಶ್ರೀಮಂತರು ಎಂದು ಜನರು ಅವರನ್ನು ಪ್ರೀತಿಸಿಲ್ಲ. ಅವರು ಚಿನ್ನದ ಚಮಚ ಬಾಯಲ್ಲಿ ಹಿಡಿದು ಹುಟ್ಟಿದವರೂ ಅಲ್ಲ. ಗುಮಾಸ್ತನಾಗಿ ಕೆಲಸ ಪ್ರಾರಂಭಿಸಿ ಎಲ್ಲರ ವಿಶ್ವಾಸ ಗಳಿಸಿ ಬಾಪೂಜಿ ಸಂಸ್ಥೆಯಲ್ಲಿ ಸಂಬಂಧ ಬೆಳೆಸಿಕೊಂಡು ಅದನ್ನು ದೇಶದಲ್ಲೇ ಅತ್ಯುತ್ತಮ ವಿದ್ಯಾಸಂಸ್ಥೆಯಾಗಿ ಬೆಳೆಸಿದರು ಎಂದರು.

ಕಳೆದ ಬಾರಿ ನಮ್ಮ ಮಠದಿಂದ ಅವರಿಗೆ ಗುರುಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾಟನ್ ಸಿಟಿ ಮತ್ತು ಕಾರ್ಮಿಕ ನಗರ ಎಂದು ಹೆಸರುವಾಸಿಯಾಗಿದ್ದ ದಾವಣಗೆರೆಯನ್ನು ವಿದ್ಯ್ಯಾಕಾಶಿಯಾಗಿ ಬದಲಾಯಿಸಿ ದಾವಣಗೆರೆಯ ಧಣಿ ಎಂದು ಪ್ರಸಿದ್ಧರಾದರು. ನಿಷ್ಠುರವಾದಿ ನೇರ ನುಡಿ ಕೊಡುಗೈ ದಾನಿ ಅವರ ಆದರ್ಶಗಳು ಮತ್ತು ಅವರ ಕೆಲಸಗಳನ್ನು ನಾವೆಲ್ಲರೂ ಮುಂದುವರೆಸಿಕೊಂಡು ಹೋಗಬೇಕಾಗಿದೆ. ಸಮಾಜದ ವಿಚಾರದಲ್ಲಿ ಹೇಳುವುದಾದರೆ ಪಕ್ಷಾತೀತವಾಗಿ, ಜಾತ್ಯತೀತವಾಗಿ ಕಾರ್ಯನಿರ್ವಹಿಸಿದ ವ್ಯಕ್ತಿ, ಸಮಾಜದ ಒಗ್ಗಟ್ಟಿಗಾಗಿ ಶ್ರಮಿಸಿದವರು. ಪಂಚಪೀಠದ ಶ್ರೀಗಳನ್ನು ಒಟ್ಟು ಮಾಡಿ ಸಮಾವೇಶ ನಡೆಸಿ ಐತಿಹಾಸಿಕವಾಗಿ ಸಮಾಜಕ್ಕೆ ಮಾರ್ಗದರ್ಶನ ದೊರೆಯುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರು ಎಂದಿಗೂ ಕೂಡ ರಾಜಕೀಯದಲ್ಲಿ ಇದ್ದರೂ ಕೂಡ ರಾಜಕೀಯ ಲೇಪವನ್ನು ಮೈಗಂಟಿಸಿಕೊಂಡಿಲ್ಲ. ಒಳ್ಳೆಯ ಕೆಲಸ ಯಾವುದೇ ಪಕ್ಷದವರೂ ಮಾಡಿದರೂ ಸಹ ಅದನ್ನು ಹೊಗಳಿ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ. ಅದಕ್ಕೆ ಉದಾಹರಣೆ ಎಂದರೆ ಶಿವಮೊಗ್ಗದ ಎಂಪಿ ರಾಘವೇಂದ್ರ ಅವರು ಬೇರೆ ಪಕ್ಷದಲ್ಲಿದ್ದರೂ ಸಹ ಅವರ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಅದು ಅವರ ಗುಣಕ್ಕೆ ಉದಾಹರಣೆ ಎಂದರು. 

ಸಾವಿರಾರು ಸಮುದಾಯ ಭವನಗಳು, ಸಮಾಜದ ಕಟ್ಟಗಳಿಗೆ ದೇಣಿಗೆ ನೀಡಿ ಅವರನ್ನು ಪ್ರೋತ್ಸಾಹಿಸಿದ್ದಾರೆ ಎಂದರು.

ವಿಶೇಷವೆಂದರೆ ಕೊನೆಯ ಗಳಿಗೆವರೆಗೆ ಅವರು ಲಿಂಗಪೂಜೆ ಬಿಡಲಿಲ್ಲ. ಇದನ್ನು ನಮ್ಮ ವೀರಶೈವ ಲಿಂಗಾಯತ ಸಮಾಜ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಮಾತನಾಡಿ, ಶಾಮನೂರು ಶಿವಶಂಕರಪ್ಪ ಸಮಾಜದ ಮೇರು ಪರ್ವತ. ಅಜಾತಶತ್ರು. ಸಾರ್ವಜನಿಕ ಬದುಕಿನಲ್ಲಿ ಅವರು ಮಾಡಿದ ಕೆಲಸಗಳನ್ನು ಊಹಿಸಲು ಸಾಧ್ಯವಿಲ್ಲ. ಅವರ ಯೋಗ್ಯತೆಗೆ ಎರಡು ಬಾರಿ ಸಿಎಂ ಸ್ಥಾನ ಸಿಗುವ ಸಂದರ್ಭವಿತ್ತು. ಆದರೆ, ಅಧಿಕಾರಕ್ಕೆ ಅವರು ಅಂಟಿಕೊಂಡಿರಲಿಲ್ಲ. ಅವರ ವಿಚಾರಧಾರೆ ಸಮಾಜಕ್ಕೆ ಮತ್ತು ಯುವ ಶಕ್ತಿಗೆ ಪ್ರೇರಕ ಎಂದರು.

ಹೆಚ್.ಸಿ. ಯೋಗೀಶ್ ಮಾತನಾಡಿ, ಸುಮಾರು ೨೦೦ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಜಾತಿ ಮತ ಬೇಧವಿಲ್ಲದೇ ಒಳ್ಳೆಯ ಶಿಕ್ಷಣ ನೀಡಿದ್ದಾರೆ. ಶಿವಮೊಗ್ಗದಲ್ಲಿ ಅವರನ್ನು ಕರೆಸಿ ಸನ್ಮಾನಿಸಿದ್ದು ಶಿವಮೊಗ್ಗದಲ್ಲಿ ಅವರ ಕೊನೆಯ ಕಾರ್ಯಕ್ರಮವಾಗಿತ್ತು ಎಂದರು.

ಸಮಾಜದ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್ ಮಾತನಾಡಿ, ಮೂರು ಬಾರಿ ಸಮಾಜದ ರಾಷ್ಟ್ರೀಯ ಅಧ್ಯಕ್ಷರಾಗಿ ಯಶಸ್ವಿಯಾಗಿ ಮುನ್ನಡೆಸಿದ್ದರು. ಗಟ್ಟಿ ಮಾತಿನ ವ್ಯಕ್ತಿ. ಸರ್ಕಾರ ಅವರದೇ ಆಗಿದ್ದರೂ ತಪ್ಪಾದಾಗ ನಿರ್ಧಾಕ್ಷಿಣ್ಯವಾಗಿ ಖಂಡಿಸುತ್ತಿದ್ದರು. ಅಧಿಕಾರ ಶಾಶ್ವತವಲ್ಲ, ಮಂತ್ರಿ ಸ್ಥಾನ ಹೋದರೆ ಹೋಗಲಿ, ಹೆಲಿಕಾಪ್ಟರ್ ಹತ್ತಿ ದಾವಣಗೆರೆಗೆ ಹೋಗಿ ಬಿಡುತ್ತೇನೆ ಎಂದು ಮುಖ್ಯಮಂತ್ರಿಗೇ ನೇರವಾಗಿ ಹೇಳುವ ಧೈರ್ಯ ಅವರಲ್ಲಿತ್ತು ಎಂದರು.

ಈ ಸಂದರ್ಭದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಣೆ ಮಾಡಲಾಯಿತು. ಸಭೆಯಲ್ಲಿ ಪ್ರಮುಖರಾದ ತಾರಾನಾಥ್, ಸಂತೋಷ್ ಬಳ್ಳೆಕೆರೆ, ಬಸವರಾಜಪ್ಪ, ಎಸ್.ಪಿ. ದಿನೇಶ್, ಮಹಾಲಿಂಗ ಶಾಸ್ತ್ರಿ, ರೇಣುಕಾರಾಧ್ಯ, ವಾಗ್ದೇವಿ, ಮಲ್ಲಿಕಾರ್ಜುನಸ್ವಾಮಿ, ಸಮಾಜದ ಮುಖಂಡರು ಉಪಸ್ಥಿತರಿದ್ದರು.

Condolences held in many places for Shamanur Shivashankarappa    

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close