ಎಎಸ್ಐ ವಿರುದ್ಧ 35 ವರ್ಷದ ಮಹಿಳೆ ದೂರು-35-year-old woman files complaint against ASI

 SUDDILIVE || SHIVAMOGGA

ಎಎಸ್ಐ ವಿರುದ್ಧ 35 ವರ್ಷದ ಮಹಿಳೆ ದೂರು-35-year-old woman files complaint against ASI    

Woman, ASI


ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್ಐ ಹಾಲಪ್ಪ ಕೆ.ಎನ್ ವಿರುದ್ಧ ಮಹಿಳೆಗೆ ದೈಹಿಕ ಮತ್ತು ಮಾನಸಿಕ ಹಿಂಸೆ, ಲೈಂಗಿಕ ದೌರ್ಜನ್ಯ, ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. 

2025 ರಲ್ಲಿ ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಯ ಎಎಸ್ಐ ಹಾಲಪ್ಪ ಕೆ.ಎನ್ 35 ವರ್ಷದ ಮಹಿಳೆಯೊಬ್ಬರಿಗೆ ಪರಿಚಯವಾಗಿದ್ದರು. ಈ ವೇಳೆ ಮಹಿಳೆ ನೀಡಿದ ಮೊಬೈಲ್ ನಂಬರ್ ಬಳಸಿಕೊಂಡ ಹಾಲಪ್ಪ ಮೊದಲಿಗೆ ಮಹಿಳೆಯ ಸ್ನೇಹ ಬಯಸಿದ್ದರು ಎಂದು ಆರೋಪಿಸಲಾಗಿದೆ. 

ಮಹಿಳೆಯ ಪತಿ ಮನೆಯಿಂದ ಡ್ಯೂಟಿಗೆ ಹೋಗುವುದನ್ನ ಗಮನಿಸಿಕೊಂಡು ಹಾಲಪ್ಪ ಒಮ್ಮೆ ಕರೆ ಮಾಡಿ ನಂತರ ಪ್ರತಿದಿನ ಕರೆ ಮಾಡಲು ಆರಂಭಸಿದರು. ಮೊದಲಿಗೆ ಬೆದರಿಕೆಹಾಕಿ ಸ್ನೇಹ ಮಾಡುವಂತೆ ಒತ್ತಾಯಿಸಿದ್ದಾರೆ. ಬೆದರಿಕೆಗೆ ಹೆದರಿದ ಮಹಿಳೆ ಸ್ನೇಹ ಬೆಳೆಸಿದಾಗ ಲೈಂಗಿಕವಾಗಿ ಬಳಸಿಕೊಂಡು ಚಿತ್ರ ಹಿಂಸೆ ನೀಡಿ ಜಾತಿ ನಿಂದನೆ ಮಾಡಿರುವುದಾಗಿ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. 

ದೂರಿನ ಆಧಾರದ ಮೇರೆಗೆ ಎಎಸ್ಐ ಹಾಲಪ್ಪರವರ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನ.26 ರಂದು ದೈಹಿಕ ಮತ್ತು ಮಾನಸಿಕ ಹಿಂಸೆ, ಲೈಂಗಿಕ ದೌರ್ಜನ್ಯ, ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. 

35-year-old woman files complaint against ASI 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close