'ಝೀಬ್ರಾ ಭಗಾವ್ ದೇಶ್ ಬಜಾವ್' ಪೊಸ್ಟ್ ಗೆ ಬಿತ್ತು ಕೇಸ್-Case lodged against Zebra Bhagav Desh Bajau post

 SUDDILIVE || SHIVAMOGGA

'ಝೀಬ್ರಾ ಭಗಾವ್ ದೇಶ್ ಬಜಾವ್' ಪೊಸ್ಟ್ ಗೆ ಬಿತ್ತು ಕೇಸ್-Case lodged against Zebra Bhagav Desh Bajau post   

Cale, zebra



ಶಿವಮೊಗ್ಗದಲ್ಲಿ ಮುಸ್ಲೀಂನಲ್ಲಿ ಒಳಪಂಗಡಗಳಾದ ಶಿಯಾ ಮತ್ತು ಸುನ್ನಿಗಳ ಸಾಮಾಜಿ ಜಾಲತಾಣದ ವಾರ್ ಫೈಟ್ ನಡೆದಿದ್ದು ಮೂವರ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದೌಲತ್ ಆಲಿಖಾನ್, ಮಿರ್ಜಾ‌ಹುಸೇನ್ ಮತ್ತು ರಬ್ಬಾನಿ ಹುಸೇನ್ ಇವರುಗಳು ಶಿಯಾ ಮತ್ತು ಸುನ್ನಿ ವಿಚಾರದಲ್ಲಿ ತಮ್ಮ ಮೊಬೈಲ್ ಗಳಲ್ಲಿನ ಸಾಮಾಜಿಕ ಜಾಲತಾಣದಲ್ಲಿ ಬಿತ್ತಿಚಿತ್ರದಲ್ಲಿ ಝೀಬ್ರಾಪ್ರಾಣಿಯನ್ನ ರಚಿಸಿ ಅದನ್ನ ಮಸೀದಿಯ ಗುಂಬಜ್ ಪಕ್ಕ ನಿಲ್ಲಿಸಿದ ಚಿತ್ರಕ್ಕೆ ಝೀಬ್ರಾ ಭಗಾವ್ ದೇಶ್ ಬಜಾವ್ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಇದರ ಜೊತೆ ಧರ್ಮಗುರುಗಳಿಗೆ ಮತ್ತು ಮಸೀದಿಯ ಪೋಸ್ಟ್ ಗಳಿಗೆ ಕೆಂಪು ಬಣ್ಣ ಕ್ರಾಸ್ ಚಿಹ್ನೆ ಬಳಸಲಾಗಿದೆ.  ಝೀಬ್ರಾ ಪ್ರಾಣಿಯ ಕೆಳಗೆ ಕೆಂಪು ಅಕ್ಷರದಲ್ಲಿ ಯಜೀದಿಗಳನ್ನ ಓಡಿಸಿ ಎಂದು ಮತ್ತು ಶಿಯಾ ಸುನ್ನಿ ಜಾತಿಗಳ ನಡುವೆ ಕೋಮುಭಾವನೆ ಉಂಟಾಗುವಂತೆ ಬರೆದಿರುವ ಬಗ್ಗೆ ಆರ್ ಎಂ ಎಲ್ ನಿವಾಸಿ ಕೋಟೆ ಠಾಣೆಗೆ ನೀಡಿದ ದೂರಿನ ಆಧಾರದ ಮೇರೆಗೆ ಎಫ್ಐಆರ್ ದಾಖಲಾಗಿದೆ. 

Case lodged against Zebra Bhagav Desh Bajau post

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close