ಜಿಲ್ಲೆಯಲ್ಲಿ ಮಕ್ಕಳಿಗೆ 91% ಪೊಲಿಯೋ ಲಸಿಕೆ-91% of children in the district have been vaccinated against polio

 SUDDILIVE || SHIVAMOGGA

ಜಿಲ್ಲೆಯಲ್ಲಿ ಮಕ್ಕಳಿಗೆ 91% ಪೊಲಿಯೋ ಲಸಿಕೆ-91% of children in the district have been vaccinated against polio     

Polio, Vaccination


ಶಿವಮೊಗ್ಗ ಜಿಲ್ಲೆಯಲ್ಲಿ ಪೊಲೀಯೋ ಲಸಿಕೆಯನ್ನ ಯಶಸ್ವಿಯಾಗಿ ನಡೆಸಲಾಗಿದೆ. ಜಿಲ್ಲೆಯಲ್ಲಿ 1016 ಬೂತ್ ಗಳಲ್ಲಿ 91% ಪೊಲಿಯೋ ಲಸಿಕೆ ಹಾಕಲಾಗಿದೆ. 5 ವರ್ಷದ ಒಳಗಿನ ಮಕ್ಕಳಿಗೆ ಪೊಲಿಯೋ ಲಸಿಕೆ ಹಾಕುವ ಈ ಅಭಿಯಾನದಲ್ಲಿ ಶಿವಮೊಗ್ಗ ಜಿಲ್ಲೆ ಮೈಲಿಗಲ್ಲನ್ನೇ ನಿರ್ಮಿಸಿದೆ. 

ಶಿವಮೊಗ್ಗ ಜಿಲ್ಲೆಯಲ್ಲಿ 1,45,245 ಮಕ್ಕಳಿಗೆ ಲಸಿಕೆಯ ಗುರಿ ಹೊಂದಲಾಗಿತ್ತು. ಈ ಅಭಿಯಾನದಲ್ಲಿ ಇಂದು 1,32,196 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸಂಘ ಸಂಸ್ಥೆಗಳು, ಸಾರ್ವಜನಿಕ ಆಸ್ಪತ್ರೆ ಸೇರಿ  ಹಲವೆಡೆ ಬೂತ್ ಗಳನ್ನ ನಿರ್ಮಿಸಿ ಲಸಿಕೆ ಹಂಚಲಾಗಿದೆ. 

ಶಿವಮೊಗ್ಗದಲ್ಲಿ 42230 ಮಕ್ಕಳಿಗೆ ಲಸಿಕೆ ಹಾಕಲು ಗುರಿಹೊಂದಲಾಗಿತ್ತು ಇದರಲ್ಲಿ 41074 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಇಲ್ಲಿಗೆ ತಾಲೂಕು ಮತ್ತು ನಗರ ಸೇರಿ 97.26% ಗುರಿ ಸಾಧಿಸಲಾಗಿದೆ. 26418 ಮಕ್ಕಳಿಗೆ ಭದ್ರಾವತಿಯಲ್ಲಿ ಗುರಿ ಹೊಂದಲಾಗಿತ್ತು, ಈಗ 25813 ಮಕ್ಕಳಿಗೆ ಲಸಿಕೆ ಹಾಕಲಾಗಿದ್ದು 97.7% ಲಸಿಕೆಯ ಗುರಿ ಸಾಧಿಸಲಾಗಿದೆ. 

ಹೊಸನಗರ ತಾಲೂಕಿನಲ್ಲಿ  9893 ಮಕ್ಕಳಿಗೆ ಗುರಿ ಹೊಂದಲಾಗಿದ್ದು 8226 ಮಕ್ಕಳಿಗೆ ಲಸಿಕೆ ಹಾಕಲಾಗಿದ್ದು 83.15% ಗುರಿ ಸಾಧಿಸಲಾಗಿದೆ. ಸಾಗರ ತಾಲೂಕಿನಲ್ಲಿ 17,739 ಲಸಿಕೆ ಗುರಿಹೊಂದಲಾಗಿದ್ದು, 14934 ಮಕ್ಕಳಿಗೆ ಲಸಿಕೆಹಾಕಲಾಗಿದ್ದು 84.19% ಗುರಿ ಸಾಧಿಸಲಾಗಿದೆ. ಶಿಕಾರಿಪುರ ತಾಲೂಕಿನಲ್ಲಿ  20693 ಮಕ್ಕಳಿಗೆ ಲಸಿಕೆಯ ಗುರಿ ಹೊಂದಲಾಗಿತ್ತು. ಇದರಲ್ಲಿ 19016 ಮಕ್ಕಳಿಗೆ ಲಸಿಕೆ ಹಾಕಲಾಗಿದ್ದು 91.9% ಗುರಿ ಹೊಂದಲಾಗಿದೆ. 

ಸೊರಬ ತಾಲೂಕಿನಲ್ಲಿ 16957 ಮಕ್ಕಳಲ್ಲಿ 13988 ಜನ ಮಕ್ಕಳಿಗೆ ಲಸಿಕೆ ಹಾಕಿ 82.49% ಗುರಿ ಸಾಧಿಸಲಾಗಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ 11325 ಮಕ್ಕಳಲ್ಲಿ 9145 ಮಕ್ಕಳಿಗೆ ಲಸಿಕೆ ಹಾಕಲಾಗಿದ್ದು 80.75% ಗುರಿ ಸಾಧಿಸಲಾಗಿದೆ. 1016 ಬೂತ್ ಗಳನ್ನ ಜಿಲ್ಲೆಯಲ್ಲಿ ನಿರ್ಮಿಸಿ  3960 ಸಿಬ್ಬಂದಿಗಳು ಅಭಿಯಾನದಲ್ಲಿ ಪಾಲ್ಗೊಂಡಿದ್ದರು. 

91% of children in the district have been vaccinated against polio

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close