ಸಂಭ್ರಮದ ಹುಟ್ಟುಹಬ್ಬ ಆಚರಣೆ- A festive birthday celebration

SUDDILIVE || SHIVAMOGGA

ಸಂಭ್ರಮದ ಹುಟ್ಟುಹಬ್ಬ ಆಚರಣೆ-  A festive birthday celebration 

Birthday, celebration

ನಿರಂತರವಾಗಿ ಕೆಲ  ಹೋರಾಟದಲ್ಲಿ ಹಾಗೂ ಸಮಾಜ ಸೇವೆಯಲ್ಲಿ ತೊಡಗಿರುವಂತಹ ಹೋರಾಟಗಾರರು ಎಂದೆ ಪ್ರಸಿದ್ಧಿ ಪಡೆಯುತ್ತಿರುವ ಪ್ರಫುಲ್ಲ ಚಂದ್ರ ಎಚ್ ರವರ 48ನೇ ವರ್ಷದ ಹುಟ್ಟುಹಬ್ಬವನ್ನು ಅವರ ಅಭಿಮಾನಿ ಬಳಗ ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಿತು.  

ಈ ದಿನ ಸಾಗರ ರಸ್ತೆಯ ಎಪಿಎಂಸಿ ಮುಂಭಾಗದಲ್ಲಿರುವ ಪುರಾತನವಾದ ಶ್ರೀ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಪೂಜೆ ಹಾಗೂ ಅಭಿಷೇಕದೊಂದಿಗೆ ಸಾರ್ವಜನಿಕರಿಗೆ ಭಕ್ತರಿಗೆ ಹಾಗೂ ಆಟೋ ಚಾಲಕರಿಗೆ ಪ್ರಸಾದ ಪುಳಿಯೋಗರೆ ಹಾಗೂ ಕೇಸರಿಬಾತ್ ಹಂಚುವ ಮೂಲಕ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. 

ಹಾಗೂ ಸಂಜೆ ಅದೇ ಸನ್ನಿಧಿಯಲ್ಲಿ ಗೋಪಾಲದಲ್ಲಿರುವ ರಂಗನಾಥ್ ತಂಡದವರಿಂದ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಹಾಗೂ ಸುಮಾರು ವರ್ಷದಿಂದ ತಮ್ಮ ಹುಟ್ಟುಹಬ್ಬವನ್ನು ಶ್ರೀ ಶಾರದ ದೇವಿ ಅಂಧರ ವಿಕಾಸ ಕೇಂದ್ರದಲ್ಲಿ ಅಂಧ (ಕುರುಡು) ಮಕ್ಕಳಿಗೆ ಹಾಗೂ ಶಿಕ್ಷಕ ವೃಂದದವರಿಗೆ ಮಧ್ಯಾಹ್ನದ ಊಟ ಹಾಗೂ ಸಿಹಿ ಹಂಚುವ ಮೂಲಕ ಆಚರಣೆ ಮಾಡಲಾಯಿತು. 

ಈ ಒಂದು ಕಾರ್ಯಕ್ರಮದಲ್ಲಿ ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಮಾಲ್ತೇಶ್. ಎನ್ ಹಾಗೂ ಹೋರಾಟಗಾರರಾದ ಜೀವನ್. ಡಿ ಹಾಗೂ ಪ್ರಮುಖರಾದ ನಾಗರಾಜ್. ವಸಂತಣ್ಣ ಮಂಜುನಾಥ ಬಸ್ ಮಾಲೀಕರು. ಮಂಜಣ್ಣ ಹೋಟೆಲ್ ಮಾಲೀಕರು  ಹಾಗು ಮುಖಂಡರುಗಳಾದ ಚಂದ್ರಪ್ಪ. ಪ್ರಕಾಶ್. ಭಾಷಾ. ಆಕಾಶ್. ಪ್ರೇಮ್ ಕುಮಾರ್. ಪರಶುರಾಮ್, HH.ಮಂಜುನಾಥ್ ಗೌಡ, ರಿಜ್ವಾನ್, ಹೊನ್ನಪ್ಪ, ಕುಮಾರ್ ಚೆಂದನಕೆರೆ  ಇನ್ನು ಹಲವಾರು ಭಕ್ತಾದಿಗಳು ಹಾಗೂ ಆಟೋ ಚಾಲಕರು ಈ ಒಂದು ಶುಭ ಕಾರ್ಯದಲ್ಲಿ ಪಾಲ್ಗೊಂಡು ಶಿವಮೊಗ್ಗ ಜಿಲ್ಲಾ ಪತ್ರಿಕಾ ಒಕ್ಕೂಟದ ಜಿಲ್ಲಾಧ್ಯಕ್ಷರು ಹಾಗೂ ಜೀವನ್ ನಾಗರಾಜ್ ರವರು ಪ್ರಫುಲ್ಲ ಚಂದ್ರ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಪ್ರಫುಲ್ಲಚಂದ್ರ ರವರು ಮಲೆನಾಡು ಆರ್ ಎಂ ಸಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರು. ಹಿಂದೂ ಜನಜಾಗೃತಿ ವೇದಿಕೆ ಸದಸ್ಯರು. ಹಿಂದೂ ಸಮನ್ವಯ ಸಮಿತಿ ಸದಸ್ಯರು. ಹಾಗೂ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಪ್ರಧಾನ ಕಾರ್ಯದರ್ಶಿಯಾಗಿ ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು ಇವರು ಸಕ್ರಿಯವಾಗಿ ಕೆಲ ಹೋರಾಟಗಳಲ್ಲಿ ಭಾಗವಹಿಸಿ ನಗರದಲ್ಲಿಡೆ  ಚಿರಪರಿಚಿತರಾಗಿದ್ದು ಇವರ ಈ ಸೇವೆ ಹೀಗೆ ಸದಾ ಮುಂದುವರೆಯಲಿ ಎಂದು ಸನ್ಮಾನಿಸಿ ಹಾರೈಸಲಾಯಿತು.

 A festive birthday celebration 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close