ಸಂಸದರಿಗೂ ತಗುಲಿದ ಇಂಡಿಗೋ ಫ್ಲೈಟ್ ಸಮಸ್ಯೆ- IndiGo flight issue affects MPs too

SUDDILIVE || SHIVAMOGGA

ಸಂಸದರಿಗೂ ತಗುಲಿದ ಇಂಡಿಗೋ ಫ್ಲೈಟ್ ಸಮಸ್ಯೆ- IndiGo flight issue affects MPs too   

Indigo, flight

Indigo, flight

ಇಂಡಿಗೋ ವಿಮಾನ ಸಂಚಾರದಲ್ಲಿ ವ್ಯತ್ಯಯದಿಂದಾಗಿ ಸಂಸದರಿಗೂ ಬಿಸಿ ತಗುಲಿದೆ. ಕೇಂದ್ರ ಸರ್ಕಾರ ಮದ್ಯಪ್ರವೇಶಿಸದ ಹಿನ್ನಲೆಯಲ್ಲಿ ಉಲ್ಬಣಗೊಂಡಿರುವ ಸಮಸ್ಯೆಯಿಂದಾಗಿ ಜನರ ಓಡಾಟಕ್ಕೆ ಸಮಸ್ಯೆ ಉಂಟಾಗಿದೆ.  

ವಿಮಾನ ಹಾರಾಟ ತೊಂದರೆಯ ಕುರಿತು ಶಿವಮೊಗ್ಗದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಪ್ರತಿಕ್ರಿಯಿಸಿದ್ದು, ಇದು ತುಂಬಾ ಅನ್ಯಾಯವಾಗಿದೆ. ನಿನ್ನೆ ದೆಹಲಿಯಲ್ಲಿ ನಾನು, ಸುಧಾಮೂರ್ತಿ ಅವರೆಲ್ಲಾ ಏರ್ಪೋರ್ಟ್ ನಲ್ಲೇ ಕೂತಿದ್ವಿ. ಮಧ್ಯಾಹ್ನ 12 ಹಾಗೂ ಸಂಜೆ 4 ಗಂಟೆಗೆ ನಮ್ಮ ವಿಮಾನವೂ ಕ್ಯಾನ್ಸಲ್ ಆಯ್ತು.  ಸಂಜೆ 6 ಕ್ಕೆ ಹೊರಟು ಹೇಗೋ ರಾತ್ರಿ ಶಿಕಾರಿಪುರಕ್ಕೆ ಬಂದೆ ಎಂದರು. 

ಹೇಗ್ ಬಂದೆ ಎಂದು ಕೇಳ್ಬೇಡಿ, ವಿಮಾನ ಸಂಚಾರ ವ್ಯತ್ಯಯದಿಂದ ಸಾಕಷ್ಟು ಜನರಿಗೆ ಸಮಸ್ಯೆ ಅನುಭವಿಸಿದ್ದಾರೆ.ಸಾವು-ನೋವು, ಸಭೆ- ಸಮಾರಂಭ, ಶುಭ ಕಾರ್ಯಕ್ರಮ, ವಿದೇಶಕ್ಕೆ ಹೋಗುವವರಿಗೆ ಸಮಸ್ಯೆ ಆಗಿದೆ. ಹುಬ್ಬಳ್ಳಿಯಲ್ಲೇ ಮದುವೆ ರಿಸೆಪ್ಷನ್ ಆನ್‌ಲೈನ್‌ನಲ್ಲಿ ಮಾಡಿಕೊಂಡಿದ್ದಾರೆ. ಅನೇಕ ಮದುವೆ, ಧಾರ್ಮಿಕ ಕಾರ್ಯಕ್ರಮಗಳು ಕ್ಯಾನ್ಸಲ್ ಆಗಿವೆ ಎಂದರು. 

ಪ್ರವಾಸಕ್ಕೆ ಹೋಟೆಲ್ ರೂಂ ಬುಕ್ ಮಾಡಿದವರು ಸಮಸ್ಯೆ ಅನುಭವಿಸಿದ್ದಾರೆ. ಜನರಿಗೆ ಆಗಿರುವ ನಷ್ಟವನ್ನು ಇಂಡಿಗೋ ಅಥವಾ ಏರ್ಪೋರ್ಟ್ ಆಥಾರಿಟಿ ಪರಿಹಾರ ಭರಿಸಬೇಕು. ಇಂಡಿಗೋ ಮತ್ತು ಇಂಡಿಗೋ ಸಿಬ್ಬಂದಿ ನಡುವೆಯೇ ಕಲಹವಿದೆ. ಡಿಜಿಸಿಎ ಪೈಲಟ್ ಮತ್ತು ಇತರೆ ಇಂಡಿಗೋ ಸಿಬ್ಬಂದಿ ಕರ್ತವ್ಯ ಸಮಯದ ಬಗ್ಗೆ ನಿಯಮ ರೂಪಿಸಿದೆ. ವಾರಕ್ಕೆ ಇಷ್ಟು ಗಂಟೆ ಕೆಲಸ ಮಾಡಬೇಕು ನಿಯಮ ರೂಪಿಸಿದೆ. 

ಆದ್ರೆ, ಇಂಡಿಗೋ ಸಂಸ್ಥೆ ಸಿಬ್ಬಂದಿಯಿಂದ ಡಬಲ್ ಕೆಲಸ ಮಾಡಿಸ್ತಾ ಇದೆ. ಡಿಜಿಸಿಎ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಕೆಲವು ನಿಯಮ ರೂಪಿಸಿತ್ತು. ಈ ಗೊಂದಲ ಸೃಷ್ಟಿಯಾದ ನಂತರ ನಿಯಮ ಸಡಿಲಿಸಿ, ಕಾಲಾವಕಾಶ ಸಹ ನೀಡಿದೆ. ಆದ್ರೆ, ಈಗ ಇಂಡಿಗೋ ಸಿಬ್ಬಂದಿ ಸಂಸ್ಥೆಯ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಡಿಜಿಸಿಎ ನಿಯಮಕ್ಕೆ ವಿರುದ್ಧವಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ.ಇದೊಂದು ರೀತಿ ಪರೋಕ್ಷವಾಗಿ ಸರ್ಕಾರದ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸಿದಂತಿದೆ ಎಂದರು. 

ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಗುವ ರೀತಿ ಜನರಿಗೆ ಸಮಸ್ಯೆ ಅಗ್ತಿದೆ. ಪರಿಸ್ಥಿತಿ ಸುಧಾರಣೆಗೆ ಇನ್ನೂ 10 ದಿನ  ಬೇಕಾಗುತ್ತದೆ. ಈ ರೀತಿ ಸಮಸ್ಯೆ ಮತ್ತೆ ಆಗದಂತೆ ಸಂಸ್ಥೆ ಕ್ರಮ ಕೈಗೊಳ್ಳಬೇಕೆಂದು ಎಂಪಿ ಒತ್ತಾಯಿಸಿದರು. 

IndiGo flight issue affects MPs too 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close