ಭರದಿಂದ ಸಾಗಿದ ಕ್ರಿಮಿನಲ್ ಕನ್ನಡ ಸಿನಿಮಾ-A successful criminal Kannada movie

 SUDDILIVE || SHIVAMOGGA

ಭರದಿಂದ ಸಾಗಿದ ಕ್ರಿಮಿನಲ್ ಕನ್ನಡ ಸಿನಿಮಾ-A successful criminal Kannada movie   

Criminal, Kannada


ನಗರದ ಶಿವಮೊಗ್ಗದ ಹಳೇ ಜೈಲಿನಲ್ಲಿ ಕನ್ನಡ ಚಲನಚಿತ್ರದ ಶೂಟಿಂಗ್ ವೊಂದು ಭರದಿಂದ ಸಾಗಿದೆ. ಸಹ ನಟರ ಶೂಟಿಂಗ್ ನಲ್ಲಿ ಚಿತ್ರತಂಡ ಬ್ಯೂಸಿಯಾಗಿದೆ. 

ಧೃವಸರ್ಜಾ ಮತ್ತು ರಚಿತಾ ರಾಮ್ ನಟನೆ ಕ್ರಿಮಿನಲ್ ಸಿನಿಮಾದ ಶೂಟಿಂಗ್ ನಿನ್ನೆಯಿಂದ ನಡೆಯುತ್ತಿದೆ. ಇನ್ನೂ  ಎರಡು ದಿನಗಳ ಶೂಟಿಂಗ್ ನಡೆಯುವ ನಿರೀಕ್ಷೆಯಿದೆ. ಗೋಲ್ಡ್ ಮೈನ್ಸ್ ಪ್ರೈವೇಟ್ ಲಿಮಿಟೆಡ್ ಅಡಿ ಸಿನಿಮಾ ನಿರ್ಮಾಣವಾಗುತ್ತಿದೆ. ಮಲೆನಾಡಿನ ಕೆರೆಭೇಟೆ ಸಿನಿಮಾ ನಿರ್ದೇಶಿಸಿದ್ದ ರಾಜ್ ಗುರು ಈ ಸಿನಿಮಾದ ಡೈರೆಕ್ಟರ್ ಆಗಿದ್ದಾರೆ. 

ನಿನ್ನೆ ಇಂದ ಶೂಟಿಂಗ್ ನಡೆಯುತ್ತಿದೆ. ಸಹ ನಟರ ಒಬ್ಬರು ಮೊಬೈಲ್ ಹಿಡಿದು ಜೈಲಿನಿಂದ ಹೊರಬರುವ ಶೂಟಿಂಗ್ ನಡೆಯಿತ್ತಿದೆ. ನಟ ಧೃವಸರ್ಜಾ ಶಿವಮೊಗ್ಗದಲ್ಲಿದ್ದರೂ ಶೂಟಿಂಗ್ ನಲ್ಲಿ ಇರಲಿಲ್ಲ. ಆದರೂ ಸಿನಿಮಾ ಮಾತ್ರ ಭರದಿಂದ ಸಾಗುತ್ತಿದೆ. 

ಪ್ಯಾನ್ ಇಂಡಿಯಾ ಸಿನಿಮಾವಾಗಿ ಈ ಕ್ರಿಮಿನಲ್ ಸಿನಿಮಾವನ್ನ ತಯಾರಿಸಲಾಗುತ್ತಿದೆ ಎಂಬ ಸುದ್ದಿಯಿದೆ. ಓಂ ಮತ್ತು 'ಆ ದಿನಗಳ' ರೀತಿಯಲ್ಲಿ ಈ ಸಿನಿಮಾದ ಲವ್ ಸ್ಟೋರಿ ವಿತ್ ರೌಡಿಸಂ ಸಿನಿಮಾದಲ್ಲಿ ಮೂಡಿ ಬರಬಹುದು ಎಂಬ ಗುಸುಗುಸು ಸಹ ಇದೆ. ಉತ್ತರ ಕರ್ನಾಟಕದ ಪ್ರಾಮಾಣಿಕ ಲವ್ ಸ್ಟೋರಿ ಸಿನಿಮಾದಲ್ಲಿ ಹೆಣೆಯಲಾಗಿದೆ ಎಂಬ ಮಾತು ಸಹಯಿದೆ. 

ಶಿವಮೊಗ್ಗ ಹಳೇ ಜೈಲಿಗೆ ಕಾರಾಗೃಹ ಇಲಾಖೆ ಹಾವೇರಿ ಎಂಬ ಬೋರ್ಡ್ ಬರೆಯಲಾಗಿದೆ. ಹಾವೇರಿ ಜಿಲ್ಲೆಯ ರಿಯಲ್ ಲವ್ ಸ್ಟೋರಿ ಸಿನಿಮಾ ಆಗುತ್ತಿದೆ. 2026 ರಲ್ಲಿ ಬಿಡುಗಡೆಯಾಗಲಿರುವ ಕ್ರಿಮಿನಲ್ ಕನ್ನಡ ಸಿನಿಮಾ ಶಿವಮೊಗ್ಗ ಹಳೇ ಜೈಲಿನಲ್ಲಿ ಭರದಿಂದ ಸಾಗಿದೆ.

A successful criminal Kannada movie 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close