ಮಹಾವೀರ ವೃತ್ತದಲ್ಲಿ ಆಟೋ ಕಾರು ಡಿಕ್ಕಿ, ಆಟೋ ಚಾಲಕ ಸ್ಥಳದಲ್ಲಿಯೇ ಸಾವು- Auto-car collision at Mahaveer Circle, auto driver dies on the spot

 SUDDILIVE || SHIVAMOGGA

ಮಹಾವೀರ ವೃತ್ತದಲ್ಲಿ ಆಟೋ ಕಾರು ಡಿಕ್ಕಿ, ಆಟೋ ಚಾಲಕ ಸ್ಥಳದಲ್ಲಿಯೇ ಸಾವು- Auto-car collision at Mahaveer Circle, auto driver dies on the spot   

Auto Car


ಶಿವಮೊಗ್ಗ ನಗರದ ಮಹಾವೀರ ವೃತ್ತದಲ್ಲಿ ಆಟೋ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.  ಮೃತ ವ್ಯಕ್ತಿಯನ್ನು ಅಣ್ಣಾನಗರದ ನಿವಾಸಿ ಆಲ್ತಾಪ್​ ಪಾಷಾ (30) ಎಂದು ಗುರುತಿಸಲಾಗಿದೆ.

ಕಳೆದ ರಾತ್ರಿ ಆಲ್ತಾಪ್​ ಪಾಷಾ ಆಟೋದಲ್ಲಿ ಗೋಪಿ ವೃತ್ತದಿಂದ 4 ಮಂದಿ ಪ್ರಯಾಣಿಕರನ್ನು  ರೈಲ್ವೇ ನಿಲ್ದಾಣಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಾವೇರಿಯಿಂದ ಧರ್ಮಸ್ಥಳಕ್ಕೆ ಹೊರಟಿದ್ದ ಸ್ವಿಫ್ಟ್​ ಡಿಸೈರ್​ ಕಾರೊಂದು ಮಹಾವೀರ ವೃತ್ತದ ಬಳಿ ಆಟೋಗೆ ಡಿಕ್ಕಿ ಹೊಡೆದಿದೆ. 

ಡಿಕ್ಕಿ ಹೊಡೆದ ಪರಿಣಾಮ ಆಟೋ ಮುಂಬಾಗ ಸಂಪೂರ್ಣ ಜಖಂ ಆಗಿದ್ದು, ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪಿದ್ದಾರೆ. ಇನ್ನುಳಿದಂತೆ ಆಟೋದಲ್ಲಿದ್ದ 4 ಮಂದಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಬಂಧ ಶಿವಮೊಗ್ಗದ ಪೂರ್ವ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Auto-car collision at Mahaveer Circle, auto driver dies on the spot   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close