ಸೊರಬದಲ್ಲೊಂದು ರೋಚಕ ಕ್ರೈಂ ಸ್ಟೋರಿ- A thrilling crime story in Soraba

 SUDDILIVE || SHIVAMOGGA

ಸೊರಬದಲ್ಲೊಂದು ರೋಚಕ ಕ್ರೈಂ ಸ್ಟೋರಿ- A thrilling crime story in Soraba 


Crime, soraba

ಅಣ್ಣನ ಹೆಂಡತಿ ಜೊತೆ ಸಹೋದರ ಸಂಬಂಧ ಹೋದಿದ್ದ ಎಂಬ ಆರೋಪದ ಅಡಿ ಅಣನೇ ತಮ್ಮನನ್ನ ಕೊಲೆಮಾಡಿರುವ ಘಟನೆ ವರದಿಯಾಗಿದೆ. ತಮ್ಮನಿಗೆ ಮದ್ಯಪಾನ ಮಾಡಿಸಿ  ಅಣ್ಣ ಹೂತುಹಾಕಿರುವುದಾಗಿ ತಿಳಿದು ಬಂದಿದೆ. 

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಜೇಡಿಕೆರೆಯಲ್ಲಿ ಘಟನೆ ನಡೆದಿದ್ದು, ಒಂದು ತಿಂಗಳ ಬಳಿಕ ತಮ್ಮನ ಶವವನ್ನ  ಅಣ್ಣ ತೋರಿಸಿದ್ದಾನೆ. ರಾಮಚಂದ್ರ (28) ಕೊಲೆಯಾದ ದುರ್ದೈವಿಯಾಗಿದ್ದಾನೆ. 

ಅಣ್ಣ ಮಾಲತೇಶನಿಂದ (35) ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಕೂಲಿಕೆಲಸ ಮಾಡುತ್ತಿದ್ದ ರಾಮಚಂದ್ರ45 ದಿನದ ಹಿಂದೆ ಕಾಣೆಯಾಗಿದ್ದ, ಮಗ ಮನೆಗೆ ಬಾರದ ಹಿನ್ನೆಲೆ ಮಿಸಿಂಗ್ ಕಂಪ್ಲೇಂಟ್ ನ್ನ   ತಾಯಿ ಗೌರಮ್ಮ (52) ಸೊರಬ ಠಾಣೆಗೆ ನೀಡಿದ್ದರು. 

ಹಿಂದೆ ಕೂಡ ಇದೇ ರೀತಿ ರಾಮಚಂದ್ರ ಮನೆ ಬಿಟ್ಟು ಹೊಗಿದ್ದನು. ಮಗ ಕೊಲೆ ಆಗಿರುವ ಬಗ್ಗೆ ಅತ್ತೆಗೆ  ಅತ್ತಿಗೆ ಭಾಗ್ಯ ತಿಳಿಸಿದ್ದು, ನನ್ನ ಹಾಗೂ ರಾಮಚಂದ್ರನ ಸಂಬಂಧ ವಿಚಾರದಲ್ಲಿ ದ್ವೇಷದಿಂದ ಕೊಲೆಮಾಡಿದ್ದಾರೆ ಎಂದು ಹೇಳಿದ್ದಾರೆ. ರಾಮಚಂದ್ರನಿಗೆ ಜೇಡಿಕೆರೆ ತೋಟದಲ್ಲಿ ಕುಡಿಸಿ ಹಗ್ಗದಿಂದ ಬಿಗಿದು ಅಲ್ಲೆ ಹೂತು ಹಾಕಿ ಪತಿ ಕ್ರೈಂ ಮಾಡಿರುವ ಬಗ್ಗೆ ಭಾಗ್ಯ ತಿಳಿಸಿದ್ದಾರೆ. 

ನಂತರ ಮಾಲತೇಶನನ್ನು ವಿಚಾರಿಸಿದ ತಾಯಿ ಗೌರಮ್ಮ ಶಾಕ್ ಆಗಿದ್ದಾರೆ. ನನ್ನ ಮಗ ಎಲ್ಲಿ ಎಂದು ಕೇಳಿದಾಗ ಅವನ ಕಥೆ ಮುಗಿದಿದೆ ನನ್ನನ್ನು ಏನು ಕೇಳ ಬೇಡ ಎಂದ ಮಾಲತೇಶ್ ತಿಳಿಸಿದ್ದಾರೆ. ನಿನಗೆ ಬೇಗ ಮದುವೆ ಆಗಲಿ ಎಂದು ಒಂದು ಪೂಜೆ ಮಾಡಿಸುತ್ತಿದ್ದೇನೆ ಒಬ್ಬ ಸ್ವಾಮೀಜಿ ಹತ್ತಿರ ಕರೆದುಕೊಂಡು ಹೋಗುತ್ತೇನೆ ಎಂದು ರಾಮಚಂದ್ರನ ಮನವೊಲಿಸಿ ಮಾಲ್ತೇಶ್ ತೋಟದ ಮನೆಗೆ ಕರೆದುಕೊಂಡು ಹೋಗಿದ್ದನು. 

ಮಂಜುನಾಥ್ ಎಂಬುವವರಿಗೆ ಸೇರಿದ ತೋಟದಲ್ಲಿ ತಮ್ಮನ ಕಾಲು ಹಾಗೂ ಕೈ ಕಟ್ಟಿ ಚನ್ನಾಗಿ ಕುಡಿಸಿ ಕುಂಕುಮ ಲಿಂಬೆಹಣ್ಣು ನೀಡಿ ಹಗ್ಗದಲ್ಲಿ ಕತ್ತುಹಿಸುಕಿ ಕೊಲೆ ಮಾಡಿದ್ದಾನೆ. ರಾಮಚಂದ್ರನ್ನು ಗುಂಡಿ ತೆಗೆದು ಅರ್ಧ ಹೂತು ಹಾಕಲಾಗಿತ್ತು. 

ನಂತರ ಕೆಲಸಕ್ಕೆ ಆಳುಗಳನ್ನು ಕರೆಸಿ ಗುಂಡಿಯನ್ನು ಮುಚ್ಚಿಸಲಾಗಿದೆ. ನಂತರ ಮಾಲ್ತೇಶನೇ ಸೊರಬ ಪೊಲೀಸ್ ಠಾಣೆಗೆ ಬಂದು ಮಿಸಿಂಗ್ ದೂರನ್ನು ನೀಡದ್ದನು. ನಂತರ ಪ್ರತಿದಿನ ಪೊಲಿಸ್ ಠಾಣೆಗೆ ಬಂದು ಮಾಲ್ತೇಶ್ ವಿಚಾರಿಸುತ್ತಿದ್ದನು.

ಈ ಹಿಂದೆ ಕೂಡ ಇದೇ ವಿಚಾರವಾಗಿ ಹಲವಾರು ಬಾರಿ ರಾಮಚಂದ್ರನಿಗೆ  ಮಾಲತೇಶ್ ಬುದ್ಧಿಹೇಳಿದ್ದನು. ಆದರೇ ಹಳೆ ಚಾಳಿಯನ್ನು ರಾಮಚಂದ್ರ ಮುಂದುವರೆಸಿದ್ದ ಆರೋಪ ಕೇಳಿಬಂದಿದೆ. ಒಂದು ತಿಂಗಳ ನಂತರ ಪೊಲೀಸರು ಮೃತದೇಹ ಹೊರತೆಗೆದಿದ್ದಾರೆ. 

A thrilling crime story in Soraba 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close