ಬೆಳ್ಳಂಬೆಳಿಗ್ಗೆ ಸಾಗರದಲ್ಲಿ ಟಯರ್ ಗೆ ಬೆಂಕಿ-ಬಂದ್ ಯಶಸ್ವಿಗೆ ಸಕಲ ಸಿದ್ಧತೆ- Tire catches fire in Sagara at dawn - all preparations for successful bandh

 SUDDILIVE || SAGARA

ಬೆಳ್ಳಂಬೆಳಿಗ್ಗೆ ಸಾಗರದಲ್ಲಿ ಟಯರ್ ಗೆ ಬೆಂಕಿ-ಬಂದ್ ಯಶಸ್ವಿಗೆ ಸಕಲ ಸಿದ್ಧತೆ-  Tire catches fire in Sagara at dawn - all preparations for successful bandh   

Tire, Bandh

ಸಾಗರವನ್ನ ಜಿಲ್ಲಾ ಕೇಂದ್ರ ಮಾಡಬೇಕು ಎಂದು ಆಗ್ರಹಿಸಿ ಇಂದು ವಿವಿಧ ಸಂಘಟನೆಗಳ ನೃತೃತ್ವದಲ್ಲಿ ಸಾಗರ ಹೋರಾಟ ಸಮಿತಿ ಸಾಗರ ಬಂದ್‌ಗೆ ಕರೆ ನೀಡಿವೆ. ಬಂದ್‌ ಗೆ ಬೆಂಬಲಿಸಿ  ಈಗಾಗಲೆ ಸಾಗರ ಪಟ್ಟಣದ ವಿವಿಧೆಡೆ ರಸ್ತೆಗಳಲ್ಲಿ ಟೈರ್‌ಗೆ ಬೆಂಕಿ ಹಚ್ಚಲಾಗಿದೆ.

ಬೆಳ್ಳಂಬೆಳಗ್ಗೆ ಸಾಗರ ಪಟ್ಟಣದ ಕೋರ್ಟ್ ಸಮೀಪ, ಐತಪ್ಪ ಸರ್ಕಲ್ ಸೇರಿದಂತೆ ವಿವಿಧೆಡೆ ನಡು ರಸ್ತೆಯಲ್ಲಿ ಟೈರ್‌ಗೆ ಬೆಂಕಿ ಹಚ್ಚಲಾಗಿದೆ. ಸಾಗರ ಜಿಲ್ಲೆ ಹೋರಾಟ ಸಮಿತಿ ವತಿಯಿಂದ ಇವತ್ತು ಸಾಗರ ಬಂದ್‌ಗೆ ಕರೆ ನೀಡಲಾಗಿದೆ. ವಿವಿಧ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ

ಹೋಟೆಲ್ ಮಾಲೀಕರ ಸಂಘ, ಕಾರು ಮಾಲೀಕರ ಸಂಘ, ಖಾಸಗಿ ಬಸ್ ಮಾಲೀಕರ ಸಂಘ, ರೈತ ಸಂಘ, ವರ್ತಕರ ಸಂಘ, ಚಿನ್ನಬೆಳ್ಳಿ ವ್ಯಾಪಾರಿ, ವೀರಶೈವ ಸಮಾಜ, ಸೇರಿ 20 ಕ್ಕೂ ಹೆಚ್ಚು ಸಂಘಟನೆಗಳು ಬಂದ್ ಗೆ ಕರೆ ನೀಡಿದೆ. ಬಂದ್ ಹಿನ್ನಲೆಯಲ್ಲಿ ಬೆಳಿಗ್ಗೆ 10 ಗಂಟೆಗೆ ಸಾಗರದ ಗಣಪತಿ ದೇವಸ್ಥಾನದಿಂದ, ಅಂಬೇಡ್ಕರ್ ವೃತ್ತ, ಮಾರ್ಕೆಟ್ ರಸ್ತೆ, ಎಸ್ ಎನ್ ಸರ್ಕಲ್,ಬಿ.ಹೆಚ್ ರಸ್ತೆ ಅಶೋಕ ರಸ್ತೆ, ಖಾಸಗಿ ಬಸ್ ನಿಲ್ದಾಣದ ಮೂಲಕ ಎಸಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಬಂದು ಮುಕ್ತಾಯವಾಗಲಿದೆ. 

ಹೋರಾಟ ಸಮಿತಿಯ ಸುಂದರ್ ಸಿಂಗ್,  ತೀನಾ ಶ್ರೀನಿವಾಸ್, ಮಂಜನಾಥ್ ಆಚಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಬಂದ್ ಹಿನ್ನಲೆಯಲ್ಲಿ ಬೆಳಿಗ್ಗೆಯಿಂದಲೇ ಖಾಸಗಿ ಬಸ್ ಗಳು ರಸ್ತೆಗೆ ಇಳಿದಿಲ್ಲ. ಹೋಟೆಲ್ ಗಳು ಬಾಗಿಲು ತೆರೆದಿಲ್ಲ. ಈ ಹಿನ್ನಲೆಯಲ್ಲಿ ಸ್ವಯಂ ಬಂದ್ ನಡೆಯುವ ಎಲ್ಲಾ ಸಾಧ್ಯತೆಗಳಿಗೆ. 

ಆದರೆ KSRTC ಬಸ್ ಗಳು ಮಾತ್ರ ಬೀದಿಗಿಳಿದಿವೆ. ಬಂದ್ ಯಶಸ್ವಿಗೆ ಎಲ್ಲಾ ಸಿದ್ಧತೆಗಳು ನಡೆದಿವೆ. 

ಸಿಎಂ ಗೆ ಪತ್ರ


ಕಳೆದ ನಾಲ್ಕು ತಿಂಗಳ ಹಿಂದೆ ಶಾಸಕ ಗೋಪಾಲ ಕೃಷ್ಣ ಬೇಳೂರು ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯರಿಗೆ ಪತ್ರ ಬರೆದು ಸಾಗರದ ಸರ್ವತೋಮುಖ ಹಿನ್ನಲೆಯಲ್ಲಿ ಸಿದ್ದಾಪುರ, ಶಿಕಾರಿಪುರ, ಸೊರಬ ಮತ್ತು ಹೊಸನಗರ ಸೇರಿಸಿ ಜಿಲ್ಲೆಯನ್ನಾಗಿ ಮಾಡುವಂತೆ ಪತ್ರಬರೆದಿದ್ದರು. ಈ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ಇದುವರೆಗೂ ಸಿಕ್ಕಿಲ್ಲ. ಆದರೆ ಸಾಗರವನ್ನ ಜಿಲ್ಲಾ ಕೇಂದ್ರವನ್ನಾಗಿ ಮಾಡುವಂತೆ ಆಗ್ರಹಿಸಿ ಬಂದ್ ಗೆ ಕರೆ ನೀಡಲಾಗಿದೆ. 

Tire catches fire in Sagara at dawn - all preparations for successful bandh   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close