ಬಸ್ ಚಾಲಕನ ಬೇಜವಾಬ್ದಾರಿಯಿಂದ ಅಪಘಾತ - ಬೈಕ್ ಸವಾರನ ಸ್ಥಿತಿ ಗಂಭೀರ..! Accident due to bus driver's irresponsibility - Biker's condition is serious..!

SUDDILIVE || THIRTHAHALLI

ಬಸ್ ಚಾಲಕನ ಬೇಜವಾಬ್ದಾರಿಯಿಂದ ಅಪಘಾತ - ಬೈಕ್ ಸವಾರನ ಸ್ಥಿತಿ ಗಂಭೀರ..! Accident due to bus driver's irresponsibility - Biker's condition is serious..!   

Accident, bus

ಖಾಸಗಿ ಶಾಲಾ ವಾಹನ ಹಾಗೂ ಬೈಕ್ ನಡುವೆ   ಕುಶಾವತಿ ಸಮೀಪ ಅಪಘಾತ ಸಂಭವಿಸಿದ್ದು ಬೈಕ್ ಸವಾರನಿಗೆ ಗಂಭೀರ ಪೆಟ್ಟಾಗಿದ್ದು ತೀರ್ಥಹಳ್ಳಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಕುಶಾವತಿ ರಸ್ತೆ ತಿರುವಿನಲ್ಲಿ ಶಿವಮೊಗ್ಗದಿಂದ ದಾವಣಗೆರೆಯ ಹೊನ್ನಾಳಿಯ ಶಾಲಾ ಪ್ರವಾಸದ ವಿದ್ಯಾರ್ಥಿಗಳು ಪಯಣಿಸುತ್ತಿದ್ದ ಬಸ್ಸು ಚಾಲಕ ಅತೀ ವೇಗದಿಂದ ಅಪಾಯಕಾರಿ ತಿರುವಿನಲ್ಲಿ ನಿಯಂತ್ರಕ್ಕೆ ಬಾರದೇ  ಬೈಕ್ ಸವಾರನ ಮೇಲೆ ಹತ್ತಿದೆ. ಕನಿಷ್ಠ 10ಮೀಟರ್ ತನಕ ಬಸ್ಸಿನ ಅಡಿಯಲ್ಲೇ ಬೈಕ್ ರಸ್ತೆ ಉಜ್ಜಿದ್ದು , ಬೈಕ್ ಸವಾರ ಗಂಭೀರ ಸ್ಥಿತಿಯಲ್ಲಿದ್ದು, ತಕ್ಷಣವೇ ಸ್ಥಳೀಯರು ಆಸ್ಪತ್ರೆ ದಾಖಲಿಸಿದ್ದಾರೆ.

ಬಸ್ ಚಾಲಕನ ಅತಿ ವೇಗದ ಚಾಲನೆಯೇ ಒಂದು ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಶಾಲಾ ಮಕ್ಕಳು ಇರುವಂತಹ ಸಂದರ್ಭದಲ್ಲಿ ಇಂತಹ ವೇಗದ ಅವಶ್ಯಕತೆ ಇತ್ತಾ ಎಂಬ ಪ್ರಶ್ನೆ ಸಹ ಮೂಡಿದೆ. ಇದು ಪ್ರಭಾಸದ ಖಾಸಗಿ ಬಸ್ ಆಗಿದ್ದು ತೀರ್ಥಹಳ್ಳಿಯಲ್ಲೂ ಸಹ ಖಾಸಗಿ ಶಾಲೆಯ ಬಸ್ಗಳು ಅತಿ ವೇಗದಿಂದ ಬಸ್ಗಳನ್ನ ಚಲಾಯಿಸುತ್ತಿದ್ದಾರೆ . ಈ ಬಗ್ಗೆ ಶಾಲಾ ಆಡಳಿತ ಮಂಡಳಿ ಹಾಗೂ ತೀರ್ಥಹಳ್ಳಿ ಪೊಲೀಸರು ಎಚ್ಚರಿಕೆ ವಹಿಸಬೇಕಿದೆ.

Accident due to bus driver's irresponsibility - Biker's condition is serious..! 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close