ಸಂಸದರ ಎದುರು ತಿಣುಕಾಡಿದ ಅಧಿಕಾರಿಗಳು

 SUDDILIVE || SHIVAMOGGA

ಸಂಸದರ ಎದುರು ತಿಣುಕಾಡಿದ ಅಧಿಕಾರಿಗಳು-Officials who were struggled in front of  MP

Officials, Mp

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಸದರ ನೇತೃತ್ವದಲ್ಲಿ ನಡೆದ ಮಳೆಮಾಪನ ಹಾನಿಕುರಿತು ನಡೆದ ಸಭೆಯಲ್ಲಿ ಅಧಿಕಾರಿಗಳು ಕಕ್ಕಾಬಿಕ್ಕಿ ಆಗಿರುವುದು ತಿಳಿದು ಬಂದಿದೆ. ಸಭೆಯ ಹೋಮ್ ವರ್ಕ್ ಇಲ್ಲದ ಕಾರಣ ಅಧಿಕಾರಿಗಳು ಸಂಸದರು, ರೈತರು, ಜನಪ್ರತಿನಿಧಿಗಳ ಎದುರು ಮಳೆಮಾಪನ ಅಳತೆಯ ವ್ಯತ್ಯಾಸ ಹೇಳಲು ತಿಣಕಾಡಿದ್ದಾರೆ. 

ಈ ತಿಣುಕಾಟ ವಿಸ್ತರಣಾ ಅಧಿಕಾರಿಗಳ ನಡುವೆ ಗೊಂದಲ ಉಂಟುಮಾಡಿದೆ. ನಿಟ್ಟೂರಿನಲ್ಲಿ ಎಕರೆಗೆ 13 ಸಾವಿರ ಬೆಳೆ ಪರಿಹಾರ ನೀಡಿದರೆ, ತುಮರಿಯಲ್ಲಿ ಕೇವಲ 3 ಸಾವಿರ ರೂ. ಹಣ ನೀಡಲಾಗಿದೆ. ಕರಿಮನೆಯಲ್ಲಿ 89 ಸಾವಿರ ರೂ. ಹಣ ಪರಿಹಾರದ ಬೆಳೆವಿಮೆ ಬಂದಿದೆ. ಇವೆಲ್ಲ ಅಕ್ಕಪಕ್ಕದ ಮಳೆ ಮಾಪನ ಕೇಂದ್ರವಿದ್ದರೂ ರೈತರಿಗೆ ಬೆಳೆ ವಿಮೆಯ ಬಗ್ಗೆ ಈ ಗೊಂದಲ ಏಕೆ ಎಂದಿದ್ದಕ್ಕೆ ವಿಸ್ತರಣಾ ಅಧಿಕಾರಿಗಳು ಖ್ಕಾಬಿಕ್ಕಿಯಾದರು. 


ಮಳೆ ಮಾಪನ ಜಿಲ್ಲೆಯಲ್ಲಿ 280 ಕೇಂದ್ರಗಳಿದ್ದು 214 ನ್ನ ಖಾಸಗಿ ನಿಯಂತ್ರಣಕ್ಕೆ ಕೊಡಲಾಗಿದೆ. 214 ರಲ್ಲಿ 112 ಕೆಲಸ ಮಾಡುತ್ತಿದೆ. ಉಳಿದವು ಹಾಳಾಗಿವೆ ಕಳುವಾಗಿದೆ. 66 ಮಳೆ ಮಾಪನ ಮಾತ್ರ ಕೆಲಸ ಮಾಡುತ್ತಿವೆ. ಇದು ರೈತರಿಗೆ ಅನ್ಯಾಯವಾಗುತ್ತಿದೆ ಮಳೆ ಮಾಪನವನ್ನ ರಿಪೇರಿಗೆ ತಡವಾಗುತ್ತಿದೆ ಎಂದು ಸಂಸದರು ಹೇಳಿದರು. 

ಪಂಚಾಯಿತಿಯ ಮಳೆ ಮಾಪನ ಹಾಳಾದಾಗ  ವೈಮಾನಿಕವಾಗಿ ಪಕ್ಕದ ಪಂಚಾಯಿತಿಯ ಗೇಜ್ ರೀಡ್ ಮಾಡಲಾಗುತ್ತದೆ. ಟರ್ಮ್ ಶೀಟ್ ತೆಗೆದುಕೊಳ್ಳುವ ಬಗ್ಗೆ ಗೊಂದಲವಿದೆ. ಮಳೆ ಹೆಚ್ಚಾದ ತಾಲೂಕಿನಲ್ಲಿ ಅಕ್ಕಪಕ್ಕದ ಮಳೆಮಾಪನಗಳಲ್ಲಿ ಅವೈಜ್ಞಾನಿಕವಾಗಿದೆ ಈ ಬಾರಿ ರೈತರಿಗೆ 22 ಸಾವಿರ ವರೆ ಕೋಟಿ ಹಣ ಕಟ್ಟಿದರೆ ಮೂರು ವರ್ಷದಲ್ಲಿ ಅತಿ ಕಡಿಮೆ ಹಣ ಬಂದಿದೆ ಎಂದರು. 

ಅಡಿಕೆ ತೋಟ ಹಾಳಾಗಿದೆ. ಮಳೆಮಾಪನದಲ್ಲಿ ತೊಂದರೆ ಉಂಟಾಗಿದೆ. ಹೊಸನಗರ ತಾಲೂಕಿನ ರೈತ ಮಾತನಾಡಿ ಅವರ ತಾಲೂಕಿನಲ್ಲಿ 28 ಮಳೆಮಾಪನದಲ್ಲಿ 25 ಹಾಳಾಗಿವೆ. ಹೊಸೂರ್ ಪಂಚಾಯಿತಿಯಲ್ಲಿ ಹಾಳಾಗಿದೆ.  ನಿಟ್ಟೂರು ನಾಗೋಡಿ ಯಲ್ಲಿ 13 ಸಾವಿರ ರೂ ಎಕರೆಗೆ ಪರಿಹಾರ ಕೊಡಲಾಗಿದೆ. ಸಂಪೆಕಟ್ಟೆಯಲ್ಲಿ ಎಕರೆಗೆ ಮೂರು ಸಾವಿರ ರೂ ಪರಿಹಾರ ಬಂದಿದೆ ಎಂದರು. 

ಕರಿಮನೆಯಲ್ಲಿ ಎಕರೆಗೆ 89 ಸಾವಿರ ರೂ. ಪರಿಹಾರ ಬಂದಿದೆ ಎಂದು ಹೊಸನಗರ ರೈತರು ಸಭೆಗೆ ತಿಳಿಸಿದರು. ಈ ಸಭೆಯಲ್ಲಿ ವಿಸ್ತರಣಾ ಅಧಿಕಾರಿಗಳು ಗೊಂದಲಮಯವಾಗಿ ಹೇಳಿದ್ದಾರೆ. ಸಂಸದರು  ಕರಿಮನೆ ಮಳೆಮಾಪನ ಸರಿಯಿದೆ.  ನಿಟ್ಟೂರಿನಲ್ಲಿ ಮಳೆಮಾಪನ ಸರಿಯಿಲ್ಲ. ಬ್ಯಾಕ್ ಅಪ್ ಆಗಿ ತುಮರಿ ಮಳೆ ಮಾಪನ ಕೇಂದ್ರವನ್ನ  ತೆಗೆದುಕೊಳ್ಳಲಾಗಿದೆ. ನಾಗೋಡಿಗೆ ಮಳೆ ಮಾಪನ ಕೇಂದ್ರ ಇದೇ ಹೇಗೆ ಹೆಚ್ಚಾಗಿದೆ ಎಂದು ಸಂದರು ಕೇಳಿದರು. 

ಸಂಪೆಕಟ್ಟೆಯಲ್ಲಿ 13 ಸಾವಿರ ರೂ. ಹಣ ಪರಿಹಾರ ನೀಡಲಾಗಿದೆ. ಪಕ್ಕದ ಕರಿಮನೆಯಲ್ಲಿ 89 ಸಾವಿರ ಪ್ರತಿ ಎಕರೆಗೆ ನೀಡಲಾಗಿದೆ. ಸಂಪೆಕಟ್ಟೆಗೆ ಬ್ಯಾಕ್ ಅಪ್ ಸ್ಟೇಷನ್ ನಿಟ್ಟೂರು ಆಗಿತ್ತು. ಆದರೆ ಜೇನಿ ತೆಗೆದುಕೊಂಡಿದ್ದು ಯಾಕೆ ಎಂದು ಕೇಳಿದಾಗ ವಿಸ್ತರಣಾ ಅಧಿಕಾರಿಗಳ ಕಕ್ಕಾಬಿಕ್ಕಿ ಎದ್ದುಕಾಣುತ್ತಿದೆ. 

ಡಿಸಿ ಈ ಬಗ್ಗೆ ಮಾತನಾಡಿ,  ಮಳೆ ಮಾಪನ ಸರಿಮಾಡಿಸಲಾಗುವುದು ಇನ್ಸುರೆನ್ಸ್ ನವರು ಸ್ಥಳೀಯವಾಗಿರುಲು ಸೂಚಿಸಲಾಗುವುದು ಎಂದರು ಆದರೆ ಗರಂ ಆದ ಸಂಸದ 2022-23 ರಲ್ಲಿ ಬೆಳೆವಿಮೆ 160 ಕೋಟಿ ಬಂದಿದೆ ಈ ಬಾರಿ 2023-24 ರ ಬೆಳೆ ವಿಮೆ 113 ಕೋಟಿ ಬಂದಿರುವುದು ರೈತರಿಗೆ ಅನ್ಯಾವಾಗಿದೆ. ಇದು ಬೇಸರದ ಸಂಗತಿ ಎಂದರು. 

ಟಿಡಿ ಮೇಘರಾಜ್ ಮಾತನಾಡಿ, ನಾಲ್ಕು ಹಂತದಲ್ಲಿ ಮಳೆ ಮಾಪನ ಅಳತೆ ಮಾಡಲಾಗುತ್ತದೆ. ಇದು ಶಿರಸಿಯಲ್ಲಿದೆ. ಅದನ್ನ ಶಿವಮೊಗ್ಗದಲ್ಲಿಯೂ ಅಳವಡಿಕೆಯಾಗಬೇಕು. ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, 2023-24 ರಲ್ಲಿ 3864 ಎಂ ಎಂ ಮಳೆ ಬಿದ್ದಿದೆ ವಾಡಿಕೆ ಮಳೆಗಿಂತ ಹೆಚ್ಚು ಮಳೆ ಬಿದ್ದಿದೆ. 2022-23 ರಲ್ಲಿ  1338 ಎಂ ಎಂ ಮಳೆ ವಾಡಿಕೆ ಮಳೆಗಿಂತ ಕಡಿಮೆಯಾಗಿದೆ ಎಂದು ಹಕ್ರೆ ಹೇಳಿದ್ದಾರೆ.

Officials who were struggled in front of  MP

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close