ಬಾಲಕಿಯರ ಶೌಚಾಲಯದಲ್ಲಿ ಅನಾಮಿಕ ಪ್ರತ್ಯಕ್ಷ, ಬಿತ್ತು ಧರ್ಮದೇಟು, ಆಗುತ್ತಾ ಪ್ರಕರಣ ದಾಖಲು?-Anonymous presence in girls' toilet, sowing seeds of dharma, will a case be registered?

SUDDILIVE || AGUMBE

ಬಾಲಕಿಯರ ಶೌಚಾಲಯದಲ್ಲಿ ಅನಾಮಿಕ ಪ್ರತ್ಯಕ್ಷ, ಬಿತ್ತು ಧರ್ಮದೇಟು, ಆಗುತ್ತಾ ಪ್ರಕರಣ ದಾಖಲು?-Anonymous presence in girls' toilet, sowing seeds of dharma, will a case be registered?

Girls, toilet


ನಿನ್ನೆ ರಾತ್ರಿ ನಡೆದ ಘಟನೆಯಲ್ಲಿ ಶಾಲೆಯ ಮಕ್ಕಳು ಭಯಭೀತಿಯಾಗಿದ್ದಾರೆ. ಅನಾಮಿಕ ವ್ಯಕ್ತಿಯೊಬ್ಬ ಮೇಗರವಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಬಾಲಕಿಯರ ಶೌಚಾಲಯದಲ್ಲಿ ಪ್ರತ್ಯಕ್ಷನಾಗಿ  ಬಾಲಕಿಯ ಬಾಯಿ ಒತ್ತಿಟ್ಟುಕೊಂಡು ವಿಷಯದಿಂದಾಗಿ ಧರ್ಮದೇಟು ತಿಂದಿದ್ದಾನೆ. ನಂತರ ಆಕ್ರೋಶಗೊಂಡ ಗ್ರಾಮಸ್ಥರೆ ಖುದ್ದು ಆಗುಂಬೆ ಪೊಲೀಸರಿಗೆ ಹಸ್ತಾಂತರಿಸಿರುವ ಘಟನೆ ವರದಿಯಾಗಿದೆ.

ನಿನ್ನೆ ತೀರ್ಥಹಳ್ಳಿ ತಾಲೂಕು ಮೇಗರವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೂನಿಯನ್ ಡೇ ಕಾರ್ಯಕ್ರಮ ನಡೆದಿದೆ. ಸುಮಾರು 10-30 ರ ಸಮಯದಲ್ಲಿ ಶಾಲೆಯ ಶೌಚಾಲಯದ ಒಳಗೆ ಇದ್ದ ಅನಾಮಿಕ ವ್ಯಕ್ತಿಯೊಬ್ಬ ಇದ್ದುದ್ದನ್ನ ಕಂಡ ಮೂವರು ಬಾಲಕಿಯರಲ್ಲಿ ಇಬ್ಬರು ಕಿಟಾರ್ ಎಂದು ಕಿರುಚಿಕೊಂಡು ಓಡಿ ಹೋಗಿದ್ದಾರೆ. 

ಮತ್ತೊಬ್ಬಳು ಸಹ ಕಿರಚಬಾರದು ಎಂದು ಅನಾಮಿಕ ವ್ಯಕ್ತಿ ಆಕೆಯ ಬಾಯಿ ಒತ್ತು ಹಿಡಿದಿದ್ದಾನೆ. ಆದರೂ ಕಿರುಚಿಕೊಂಡು ಹೊರಹೋದ ಇಬ್ಬರು ಬಾಲಕಿಯರ ಪೊಷಕರು ಬಂದು ನೋಡಿದಾಗ ಅನಾಮಿಕ ಬಾಲಕಿಯ ಬಾಯಿ ಒತ್ತಿಟ್ಟುಕೊಂಡಿದ್ದ‌ ಇದನ್ನ ಕಂಡ ಪೋಷಕರು ಅನಾಮಿಕನಿಗೆ ಧರ್ಮದೇಟು ನೀಡಿ ಖುದ್ದು ಆಗುಂಬೆ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. 

ಧರ್ಮದೇಟು ತಿಂದವನನ್ನ ದಿನೇಶ್ (35) ಎಂದು ಗುರುತಿಸಲಾಗಿದೆ. ದಿನೇಶ್ ಮೂಲತಃ ಕುಡುಕನಾಗಿರುವುದಾಗಿ ತಿಳಿದು ಬಂದಿದೆ. ಕುಡಿದು ಬಾಲಕಿಯರ ಶೌಚಾಲಯದಲ್ಲಿ ಅವಿತುಕೊಂಡಿದ್ದನು ಎನ್ನಲಾಗಿದೆ. ಆದರೆ ಕುಡಿದಾಗ ಆತನಿಗೆ ಶಾಲೆಯ ಬಾಲಕಿಯರ ಶೌಚಾಲಯವೇ ಕಂಡು ಬಂದಿದ್ದು ಏಕೆ ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ. ಈ ಪ್ರಕರಣ ಎಫ್ಐಆರ್ ಆಗುತ್ತಾ ಅಥವಾ ಇಲ್ಲವಾ ಎಂಬುದು ಪ್ರಶ್ನೆಯಾಗಿದೆ. 

Anonymous presence in girls' toilet, sowing seeds of dharma, will a case be registered?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close