ಎರಡು ತಿಂಗಳಲ್ಲಿ ಗಾಂಜಾ ಸೀಜ್ ಆಗಿದ್ದು ಬರೋಬ್ಬರಿ 13 ವರೆ ಕೆಜಿ-Nearly 13.5 kg of marijuana seized in two months

SUDDILIVE || SHIVAMOGGA

ಎರಡು ತಿಂಗಳಲ್ಲಿ ಗಾಂಜಾ ಸೀಜ್ ಆಗಿದ್ದು ಬರೋಬ್ಬರಿ 13 ವರೆ ಕೆಜಿ-Nearly 13.5 kg of marijuana seized in two months   

marijuana, seized

ಶಿವಮೊಗ್ಗ ಜಿಲ್ಲೆಯಾದ್ಯಂತ ನವೆಂಬರ್ ಮತ್ತು ಡಿಸೆಂಬರಚ ಮಾಹೆಯಲ್ಲಿ ಗಾಂಜಾ ವಿಶೇಷ ಕಾರ್ಯಾಚರಣೆ ನಡೆದಿದೆ. ಈ ವಿಶೇಷ ಕಾರ್ಯಾಚರಣೆಯಲ್ಲಿ 177 ಪ್ರಕರಣಗಳು ದಾಖಲಾಗಿದ್ದು 166 ಜನರ ವಿರುದ್ಧ ದೂರು ದಾಖಲಾಗಿದೆ. 13.ಕೆ.ಜಿ 445 ಒಣ, ಹಸಿ ಹಾಗೂ ಪೌಡರ್ ಗಾಂಜಾವನ್ನ ವಶಕ್ಕೆ ಪಡೆಯಲಾಗಿದೆ.‌

ಶಿವಮೊಗ್ಗ ಜಿಲ್ಲೆಯಾದ್ಯಂತ  ನವೆಂಬರ್ ಮತ್ತು ಡಿಸೆಂಬರ್ ಮಾಹೆಯಲ್ಲಿ ಮಾದಕ ವಸ್ತು ಗಾಂಜಾ ವಿರುದ್ಧ ವಿಶೇಷ ಕಾರ್ಯಾಚರಣೆ (Special Drive) ನಡೆಸಿದ್ದು, ನವೆಂಬರ್ ಮಾಹೆಯಲ್ಲಿ ಒಟ್ಟು   82 ಪ್ರಕರಣಗಳನ್ನು ದಾಖಲಿಸಿ ದ್ದು, ಮಾದಕ ವಸ್ತು ಗಾಂಜಾ ಸೇವನೆ ಮಾಡಿದ ಒಟ್ಟು 76 ಜನ ಆರೋಪಿತರ ವಿರುದ್ಧ 27(b) NDPS ಕಾಯ್ದೆಯಡಿ ಒಟ್ಟು 74 ಪ್ರಕರಣಗಳನ್ನು, ಹಾಗೆಯೇ ಮಾದಕ ವಸ್ತು ಗಾಂಜಾ ಮಾರಾಟ, ಸಾಗಾಟ ಹಾಗೂ ಹಸಿ ಗಾಂಜಾ ಬೆಳೆದಿದ್ದ 12 ಜನ ಆರೋಪಿತರ ವಿರುದ್ಧ 8(c), 20(b), 20(a) NDPS ಕಾಯ್ದೆಯಡಿ  8 ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟು 4,91,500/- ರೂ ಮೌಲ್ಯದ 4 ಕೆಜಿ 476 ಗ್ರಾಂ ಒಣ ಗಾಂಜಾ, 370 ಗ್ರಾಂ ಹಸಿ ಗಾಂಜಾ, 26 ಗ್ರಾಂ MDMAಅನ್ನು ವಶ ಪಡಿಸಿ ಕೊಳ್ಳಲಾಗಿದೆ. 





ಡಿಸೆಂಬರ್ ಮಾಹೆಯಲ್ಲಿ ಒಟ್ಟು 95 ಪ್ರಕರಣಗಳನ್ನು ದಾಖಲಿಸಿದ್ದು,  ಮಾದಕ ವಸ್ತು ಗಾಂಜಾ ಸೇವನೆ ಮಾಡಿದ ಒಟ್ಟು 90 ಜನ ಆರೋಪಿತರ ವಿರುದ್ಧ 27(b) NDPS ಕಾಯ್ದೆಯಡಿ ಒಟ್ಟು 86 ಪ್ರಕರಣಗಳನ್ನು, ಹಾಗೆಯೇ ಮಾದಕ ವಸ್ತು ಗಾಂಜಾ ಮಾರಾಟ ಹಾಗೂ ಸಾಗಾಟ ಮಾಡುತ್ತಿದ್ದ 15 ಜನ ಆರೋಪಿತರ ವಿರುದ್ಧ 8(c), 20(b) NDPS ಕಾಯ್ದೆಯಡಿ  9 ಪ್ರಕರಣಗಳನ್ನು ದಾಖಲಿಸಿದ್ದು, 4.476 ಗಾಂಜಾವಶಕ್ಕೆ ಪಡೆಯಲಾಗಿದೆ.  ಒಟ್ಟು 4,51,500/- ರೂ ಮೌಲ್ಯದ 8 ಕೆಜಿ 969 ಗ್ರಾಂ ಒಣ ಗಾಂಜಾ ಅನ್ನು ವಶ ಪಡಿಸಿ ಕೊಂಡು ಕ್ರಮ ಕೈ ಗೊಳ್ಳಲಾಗಿದೆ. 

Nearly 13.5 kg of marijuana seized in two months

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close