ದ್ವೇಷಭಾಷಣ ವಿಧೇಯಕಕ್ಕೆ ಬಿಜೆಪಿ ಬಿಲದಿಂದ ಹೊರಗೆ ಬಂದಂತೆ ಆಡ್ತಯಿದೆ-ಯೋಗೀಶ್-BJP is reacting to the hate speech bill as if it has come out of its burrow - Yogish

 SUDDILIVE || SHIVAMOGGA

ದ್ವೇಷಭಾಷಣ ವಿಧೇಯಕಕ್ಕೆ ಬಿಜೆಪಿ ಬಿಲದಿಂದ ಹೊರಗೆ ಬಂದಂತೆ ಆಡ್ತಯಿದೆ-ಯೋಗೀಶ್-BJP is reacting to the hate speech bill as if it has come out of its burrow - Yogish

Hate, speech


ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ಕಾನೂನನ್ನ ಬೆಳಗಾವಿ ಸದನದಲ್ಲಿ ಕಾಂಗ್ರೆಸ್ ಪಾಸ್ ಮಾಡಿದೆ. ದ್ವೇಷ ಮಾಲು ಅನೇಕ ಕಾರಣ ಸಿಗಲಿದೆ. ಪ್ರೀತಿ ಕಟ್ಟಲು ಕಾರಣ ಬೇಕಾಗಿಲ್ಲ. ಹಾಗಾಗಿ ದ್ವೇಷ ಭಾಷಣ ವಿಧೇಕ ಮಂಡಿಸಲಾಗಿದೆ ಎಂದು ಕಾಂಗ್ರೆಸ್ ನ ಹೆಚ್ ಸಿ ಯೋಗೀಶ್ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ್ವೇಷ ಭಾಷಣ ಮಾಡಿಕೊಂಡು ಬಂದವರಿಗೆ ಇದು ಸಹಿಸಲಾಗುತ್ತಿಲ್ಲ. ಜಿಲ್ಲೆಯಲ್ಲಿ ಬಿಜೆಪಿ ಪ್ರತಿಭಟಿಸಿದೆ. ಗೌವರ್ನರ್ ಗೆ ಒತ್ತಾಯ ಮಾಡಿದ್ದರು. ಅಂದು ಚೆನ್ನಬಸಪ್ಪ ಅವರು ಸಿದ್ದರಾಮಯ್ಯನವರ ತಲೆ ಕಡಿಯುವುದಾಗಿ ಹೇಳಿದ್ದರು. ಈಶ್ವರಪ್ಪನವರು ಇದರಿಂದ ಹೊರತಾಗಿಲ್ಲ. 25 ವರ್ಷ ಈಶ್ವರಪ್ಪ ಶಾಸಕರಾಗಿದ್ದಾರೆ. ನಗರವನ್ನ ಅಭಿವೃದ್ಧಿ ಮಾಡಲಿಲ್ಲ. ದ್ವೇಷವನ್ನೇ ಬಿತ್ತುಕೊಂಡು ಬಂದಿದ್ದರು ಎಂದು ದೂರಿದರು. 

ಈ ಕಾನುನು ಬಿಜೆಪಿ ಮತ್ತು ಇತರೆಗೆ ಮಾತ್ರ ಸೀಮಿತವಾಗೋದಿಲ್ಲ. ಸಮಸ್ತ ಕರ್ನಾಟಕ ರಾಜ್ಯದಲ್ಲಿ ಜಾರಿಯಾಗುತ್ತಿದೆ. ಹಿಂದೂಸ್ತಾನ, ಮುಸ್ಲಿಂ, ಪಾಕಿಸ್ತಾನ್ ಬಗ್ಗೆ ಮಾತನಾಡುತ್ತಾರೆ ವಿನಃ ಬೇರೆ ಅಭಿವೃದ್ಧಿ ಮಾಡಲಿಲ್ಲ ಬಿಜೆಪಿ. ಒಂದು ಎಂದು ಕರೆದುಕೊಂಡು ಹೋಗಿಲ್ಲ. ನಮ್ಮ ಪಕ್ಷದ ಕಚೇರಿಯಲ್ಲಿ ದ್ವೇಷ ಭಾಷಣ ಮಾಡಲಿಲ್ಲ. ಆದರೆ ವಿರೋಧ ಪಕ್ಷದ ದ್ವೇಷ ಭಾಷಣ ಮಾಡಿದ್ದಾರೆ. ಆದುದರಿಂದ ಬಿಲದಿಂದ ಹೊರಬಂದು ವಿಧೇಯಕ ಬೇಡ ಎನ್ನುತ್ತಾರೆ ಎಂದರು.

ಬಿಜೆಪಿ ನಾಯಕರಿಗೆ ಸೀಮಿತವಾದ ಜೈಲು ನಿರ್ಮಿಸಬೇಕಿದೆ. ಆರ್ ಎಂ ಎಲ್ ನಗರದ ಪ್ರಕರಣದಲ್ಲಿ ಶಾಸಕರು ಹೇಗೆ ನಡೆದುಕೊಂಡರು.  ಸೀಗಹಟ್ಟಿಯ ದೇವಸ್ಥಾನದಲ್ಲಿ ಅನ್ಯ ಕೋಮಿನವರು ಮುರಿದಿದ್ದಾರೆ ಎಂದು ಗಲಭೆನಡೆಸಲು ಮುಂದಾಗಿದ್ದು ಎಲ್ಲವೂ ಬಿಜೆಪಿಯ ದ್ವೇಷದ ಕಾರಣವಾಗಿದೆ. ಇದನ್ನೆಲ್ಲ ಬಿಟ್ಟು ಬಿಜೆಪಿ ಅಭಿವೃದ್ಧಿ ಬಗ್ಗೆ ಮಾತನಾಡಲಿ ಎಂದರು.

BJP is reacting to the hate speech bill as if it has come out of its burrow - Yogish

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close