BUS ACCIDENT AT HULIKAL | ಹುಲಿಕಲ್ ಘಾಟ್ ಧರೆಗೆ ಗುದ್ದಿದ ಬಸ್ | ಮಗು ಸಾವು.. ಹಲವರು ಗಂಭೀರ

SUDDILIVE || HOSANAGARA

BUS ACCIDENT AT HULIKAL | ಹುಲಿಕಲ್ ಘಾಟ್ ಧರೆಗೆ ಗುದ್ದಿದ ಬಸ್ | ಮಗು ಸಾವು.. ಹಲವರು ಗಂಭೀರ

Accident, hulikal

ದಾವಣಗೆರೆಯಿಂದ ಮಂಗಳೂರು‌ ಕಡೆ ಹೋಗುತ್ತಿದ್ದ ಖಾಸಗಿ ದುರ್ಗಾಂಬ‌ ಬಸ್ಸು ಹುಲಿಕಲ್ ಘಾಟ್ ರಸ್ತೆಯ ಬದಿ ಧರೆಗೆ ಗುದ್ದಿದ ಪರಿಣಾಮ ಮಗುವೊಂದು ಸಾವು ಕಂಡಿದ್ದು, ಹಲವರು ಗಾಯಗೊಂಡ ಘಟನೆ ಸೋಮವಾರ ತಡರಾತ್ರಿ ನಡೆದ ಬಗ್ಗೆ ವರದಿಯಾಗಿದೆ.

ನಿದ್ದೆಯ ಮಂಪರು, ಚಾಲಕನ ನಿಯಂತ್ರಣ ತಪ್ಪಿ ದುರ್ಘಟನೆ ನಡೆದಿದೆ. ಗಂಭೀರ ಗಾಯಗೊಂಡವರಲ್ಲಿ ಶರೀಫಾಬಿ (57), ಇಮಾಮ್ ಸಾಬ್ (73), ಸಫಾನ (28) ಎಂಬುವರನ್ನು ಕೂಡಲೇ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ.

ಖಾಸಗಿ ಬಸ್ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಘಟನೆಯ ಸಂಪೂರ್ಣ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ. ಘಟನೆ ನಡೆಯುತ್ತಿದ್ದಂತೆ ನಗರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದಾರೆ. ಮಂಗಳವಾರ ಮುಂಜಾನೆ ಪೊಲೀಸ್ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

BUS ACCIDENT AT HULIKAL

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close