ಕಂಬನಿ ಮಿಡಿದ ಬಿ.ಎಸ್ ವೈ-BSY condolence

SUDDILIVE || SHIVAMOGGA

ಕಂಬನಿ ಮಿಡಿದ ಬಿ.ಎಸ್ ವೈ-BSY condolence

BSY, condolence


ಶಾಮನೂರು ಶಿವಶಂಕರಪ್ಪ ಅಗಲಿಕೆ ಬಹಳ ನೋವು ತಂದಿದೆ ಎಂದು  ಮಾಜಿ ಸಿಎಂ ಯಡಿಯೂರಪ್ಪ ಕಂಬನಿ ಮಿಡಿದಿದ್ದಾರೆ. 

ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,  ಶಾಮನೂರು ಅವರ ಅಗಲಿಕೆ ಇಡೀ ಸಮಾಜಕ್ಕೆ ದೊಡ್ಡ ಆಘಾತವಾಗಿದೆ. ಬಹಳ ದೊಡ್ಡ ವ್ಯಕ್ತಿ ಅವರಾಗಿದ್ದರು. ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿರುವುದಾಗಿ ತಿಳಿಸಿದರು. 

ಅವರ ಆತ್ಮಕ್ಕೆ ಶಾಂತಿ ಶಾಂತಿ ಸಿಗಲಿ,ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಕೊಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ನಾನು ಈಗ ದಾವಣಗೆರೆಗೆ ಅವರ ಅಂತಿಮ ದರ್ಶನ ಪಡೆಯಲು ತೆರಳುತ್ತಿದ್ದೆನೆ. ಅವರ ಮತ್ತು ನನ್ನ ನಡುವೆ ಬಹಳ ವರ್ಷಗಳ ಆತ್ಮೀಯ ಸಂಬಂಧ ಇದೆ ಎಂದರು.

ಇತ್ತೀಚಿಗೆ ಆಸ್ಪತ್ರೆಗೆ ತೆರಳಿ ಅವರ ಆರೋಗ್ಯ ಸಹ ವಿಚಾರಿಸಿದ್ದೆ ಎಲ್ಲಾ ಸಮಯದಲ್ಲೂ ಎಲ್ಲ ರೀತಿಯ ಸಹಕಾರ ನೀಡಿದಂತಹ ವ್ಯಕ್ತಿ ಅವರು. ಅವರ ಬಗ್ಗೆ ಹೇಳಲು ಬಹಳಷ್ಟು ವಿಷಯವಿದೆ. ಅವರ ಆತ್ಮಕ್ಕೆ ಶಾಂತಿ ಕೋರಿ ಬರುತ್ತೇನೆ. ವೀರಶೈವ ಸಮಾಜ ಸೇರಿದಂತೆ ಎಲ್ಲಾ ಸಮಾಜಕ್ಕೂ ಅವರ ಕೊಡುಗೆ ಇದೆ. ಅವರು ಹಿರಿಯ ವ್ಯಕ್ತಿಯಾಗಿದ್ದಾರೆ.

BSY condolence


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close