ಡಿ.16 ಪ್ರತ್ಯಾಂಗೀರಾ ದೇವಿಯ ಉಪಾಸಕರಾದ ಬ್ರಹ್ಮಶ್ರೀ ಡಾ.ಸುಪ್ರೀತ್ ಗುರೂಜಿಯವರ ಹುಟ್ಟು ಹಬ್ಬ-December 16th is the birthday of Brahmashri Dr. Supreet Guruji

SUDDILIVE || SHIVAMOGGA

ಡಿ.16 ಪ್ರತ್ಯಾಂಗೀರಾ ದೇವಿಯ ಉಪಾಸಕರಾದ  ಬ್ರಹ್ಮಶ್ರೀ ಡಾ.ಸುಪ್ರೀತ್ ಗುರೂಜಿಯವರ ಹುಟ್ಟು ಹಬ್ಬ-December 16th is the birthday of Brahmashri Dr. Supreet Guruji, a devotee of Goddess Pratyangira

Brahmari, suprith

ನಗರದ ಏರ್ಪೋರ್ಟ್ ರಸ್ತೆಯಲ್ಲಿರುವ ಶ್ರೀ ಪ್ರತ್ಯಾಂಗೀರಾ ದೇವಿ ದೇವಸ್ಥಾನದ ಅರ್ಚಕರು ಮತ್ತು ದೇವಿ ಉಪಾಸಕರಾದ  ಬ್ರಹ್ಮಶ್ರೀ ಡಾ.ಸುಪ್ರೀತ್ ಗುರೂಜಿಯವರ ಹುಟ್ಟು ಹಬ್ಬದ ಪ್ರಯುಕ್ತ ,ಡಿಸೆಂಬರ್ 16 ರಂದು ದೇವಾಲಯದಲ್ಲಿ ಶ್ರೀಗಳ ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು  ಶ್ರೀ ಪ್ರತ್ಯಾಗೀರಾ ದೇವಿ ದೇವಾಲಯದ ಪ್ರಧಾನ ಕಾರ್ಯದರ್ಶಿ ಉದೀತ್ ವಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಶಿವಮೊಗ್ಗ ಸಮೀಪದ ಸೋಗಾನೆ ಬಳಿಯ ಶಿವಮೊಗ್ಗ  ವಿಮಾನ ನಿಲ್ದಾಣದ ಮುಂಭಾಗದಲ್ಲಿರುವ ಶ್ರೀ ಪ್ರತ್ಯಾಂಗೀರಾ ದೇವಿ ದೇವಸ್ಥಾನವು ನಾಡಿನ ಅಸಂಖ್ಯಾ ಭಕ್ತರ ಆಕರ್ಷಣೀಯ ತಾಣವಾಗಿದ್ದು, ರಾಜ್ಯದ ಮೂಲೆ ಮೂಲೆಗಳಿಂದಲೂ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಆ‌ ಮೂಲಕ ದೇವಿಯ ಉಪಾಸಕರಾಗಿರುವ  ಬ್ರಹ್ಮಶ್ರೀ ಡಾ. ಶ್ರೀ‌ ಸುಪ್ರೀತ್ ಗುರೂಜಿಯವರು ನಾಡಿನ ಮನೆ ಮಾತಾಗಿದ್ದು, ಆವರ ಹುಟ್ಟು ಹಬ್ಬದ ಪ್ರಯುಕ್ತ ಡಿ.೧೬ರಂದು ಗುರುವಂದನೆ ಸೇರಿ ಹಲವು ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಅಂದು ಬೆಳಗ್ಗೆ 11 ಗಂಟೆಗೆ ದೇವಾಲಯದಲ್ಲಿ ಗುರು ವಂದನಾ ಕಾರ್ಯಕ್ರಮ ಜರುಗಲಿದೆ.ಹಾಗೆಯೇ , ಆಶಾ ಜ್ಯೋತಿ ಸ್ವಯಂ ರಕ್ತ ದಾನ ಕೇಂದ್ರದ ವತಿಯಿಂದ ರಕ್ತದಾನ ಶಿಬಿರ ಮತ್ತು ವಾಸನ್ ಐ ಕೇರ್ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ದೇವಿಯ ಭಕ್ತರು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬಹುದು ಎಂದರು.

Brahmasri, Suprith

 ಶಿವಮೊಗ್ಗ ನಗರದ ಹೊಳ ಬಸ್ ಸ್ಟಾಪ್ ಬಳಿ ಸಂಜೆ 7 ಗಂಟೆಗೆ ಸುಮಾರು 5 ಸಾವಿರ ಜನರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಶತ್ರು ಸಂಹಾರಿಣಿ ಶ್ರೀ ಪ್ರತ್ಯಾಂಗೀರಾ ದೇವಿಗೆ ದೇವಾಲಯ ಹೊಂದಿದ ಏಕಮಾತ್ರ ನೆಲೆ  ಇದಾಗಿದ್ದು, ಭಕ್ತರು ಇಲ್ಲಿ ದೇವಿಗೆ ಒಣ ಮೆಣಸಿನಕಾಯಿ ಯಾಗ  ಸಮರ್ಪಣೆ ಮಾಡುವುದೇ ಇಲ್ಲಿನ ವಿಶೇಷವಾಗಿದೆ. ಬ್ರಹಶ್ರೀ ಡಾ. ಶ್ರೀ ಸುಪ್ರೀತ್ ಗುರೂಜಿ ಅವರು ದೇವಾಲಯದ ಅಭಿವೃದ್ದಿಗೆ ಅವಿರತವಾಗಿ ಶ್ರಮಿಸಿದ್ದು, ಇಡೀ ನಾಡಿನಲ್ಲಿ ಇವತ್ತು ದೇವಾಲಯ ಮನೆ ಮಾತು ಆಗುವಂತೆ ಮಾಡಿದ್ದಾರೆ ಎಂದು ಉದೀತ್ ತಿಳಿಸಿದರು.

ದೇವಿಗೆ ಇಲ್ಲಿ  ವಿಶೇಷವಾಗಿ ನಡೆಯುವ ಒಣ ಮೆಣನಸಿಕಾಯಿ ಯಾಗದ ಮೂಲಕ ಭಕ್ತರು ತಮ್ಮ ಇಷ್ಡಾರ್ಥಗಳನ್ನು ಈಡೇರಿಸಿಕೊಳ್ಳುವ ಮೂಲಕ ಬ್ರಹ್ಮಶ್ರೀ ಡಾ. ಶ್ರೀ  ಸುಪ್ರೀತ್ ಗುರೂಜಿಯವರ ಅನುಗ್ರಹಕ್ಕೆ ಪಾತ್ರರಾ ಗುತ್ತಿದ್ದಾರೆ.  ಭಕ್ತರು ನಾನಾ ಸಮಸ್ಯೆಗಳನ್ನು ಹೊತ್ತು ಇಲ್ಲಿಗೆ ಬರುತ್ತಾರೆ. ಎಲ್ಲರಿಗೂ ದೇವಿಯ ವಿಶೇಷ ದರ್ಶನದ ಜತೆಗೆ ಶ್ರೀಗಳ ಆಶೀರ್ವಾದ ವೂ ಕೂಡ ಸಿಗುತ್ತದೆ. ಭಕ್ತರ ಮೂಲಕವೇ ಅಭಿವೃದ್ಧಿ ಕಂಡ ಶ್ರೀ ಪ್ರತ್ಯಾಂಗೀರಾ ದೇವಿ ದೇವಾಲಯವು, ಲೋಕ‌ ಕಲ್ಯಾಣವನ್ನು ಬಯಸಿಯೇ  ವಿಶೇಷ ಪೂಜೆ ಪುನಸ್ಕಾರಗಳನ್ನು ನಡೆಸುತ್ತಾ ಬರುತ್ತಿದೆ ಎಂದ ಅವರು ತಿಳಿಸಿದರು.

ಗುರೂಜಿಗಳ ಸಾಮಾಜಿಕ ಕಾರ್ಯಕ್ರಮಗಳ ಅಂಗವಾಗಿ ಅನಾಥ ಮಕ್ಕಳಿಗೆ ಸಹಾಯಧನ, ಶಾಲಾ ಶುಲ್ಕಗಳಿಲ್ಲದವರಿಗೆ ಧನಸಹಾಯ, ರಾಜ್ಯದ ಸಣ್ಣಪುಟ್ಟ ದೇವಸ್ಥಾನಕ್ಕೆ ಧನಸಹಾಯ ಮಾಡಿದ್ದಾರೆ ಎಂದು ತಿಳಿಸಿದ ಅವರು ಹುಟ್ಟುಹಬ್ವದ ಪ್ರಯುಕ್ತ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶಾರದಾ ಪೂರ್ಯನಾಯ್ಕ್, ಶಾಸಕ ಚೆನ್ನಬಸಪ್ಪ, ಸಂಸದರು ಮೊದಲಾದವರು ಭಾಗಿಯಾಗುವ ನಿರೀಕ್ಷೆಯಿದೆ. ಸಿನಿಮಾ ನಟರು ಭಾಗಿಯಾಗುವ ನಿರೀಕ್ಷಿಸಲಾಗಿದೆ. ಗುರೂಜಿ ಅವರ 28 ನೇ ಹುಟ್ಟುಹಬ್ಬದ ಪ್ರಯುಕ್ತ ಚಂಡಿಕಾ ಮಹಾಯೋಗ, ಗಣಪತಿ ಪೂಜೆ ನಡೆಯಲಿದೆ ಎಂದರು.

December 16th is the birthday of Brahmashri Dr. Supreet Guruji

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close