4 ಕೋಟಿ ರೂ ವೆಚ್ಚದ ನಂತರವೂ ಭದ್ರ ಜಲಾಶಯ ಸೋರಿಕೆ, ತನಿಖೆಗೆ ಆಗ್ರಹ-Bhadra reservoir leaks even after spending Rs 4 crore, demand for investigation

 SUDDILIVE || BHADRAVATHI

4 ಕೋಟಿ ರೂ ವೆಚ್ಚದ ನಂತರವೂ ಭದ್ರ ಜಲಾಶಯ ಸೋರಿಕೆ, ತನಿಖೆಗೆ ಆಗ್ರಹ-Bhadra reservoir leaks even after spending Rs 4 crore, demand for investigation

Bhadra, rerservoir



ಭದ್ರಾ ಎಡದಂಡೆ ಕಾಲುವೆ ನೀರು ನಿಲ್ಲಿಸುವ ಪ್ರಯತ್ನದಲ್ಲಿ  ಅಧಿಕಾರಿಗಳು ವಿಫಲರಾಗಿದ್ದಾರೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಭದ್ರಾ ಜಲಾಶಯದಿಂದ ಭದ್ರಾ ಎಡದಂಡೆ ಕಾಲುವೆಗೆ ಸೋರಿಕೆ  ನೀರು ಸೋರಿಕೆಯಾಗುತ್ತಿದ್ದರು ಅಧಿಕಾರಿಗಳು ತಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. 

ಭದ್ರಾ ಜಲಾಶಯದಿಂದ ಎಡದಂಡೆ ಕಾಲುವೆಗೆ ಕಾಮಗಾರಿ ಮುಗಿದಿದ್ದು ಆದರೂ ಕೂಡ ಹರಿಸುತ್ತಿರುವ ನೀರನ್ನು ತಡೆಗಟ್ಟಲು ವಿಫಲರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯದಿಂದ ಆಗ್ರಹಿಸಲಾಗಿದೆ. 

ಎಡದಂಡೆ ನಾಲೆ ಭದ್ರಾವತಿ ಹಾಗೂ ತರೀಕೆರೆ ತಾಲ್ಲೂಕುಗಳಲ್ಲಿ ಅಚ್ಚುಕಟ್ಟು ಪ್ರದೇಶ ಹೊಂದಿದ್ದು, ಭದ್ರಾ ಜಲಾಶಯದಿಂದ ಪ್ರತಿ ನಿತ್ಯ 380ಕ್ಕೂ ಹೆಚ್ಚು ಕ್ಯುಸೆಕ್ ನೀರು ಹರಿದು ಹೋಗುತ್ತಿದೆ ಎಂದು ಅಂದಾಜಿಸಲಾಗಿದೆ. 

ಮೇ ತಿಂಗಳಲ್ಲಿ ಕಾಮಗಾರಿಯನ್ನ ಎತ್ತಿಕೊಂಡ ಅಧಿಕಾರಿಗಳು ಸೆಪ್ಟಂಬರ್ ತಿಂಗಳಲ್ಲಿ ಸಂಪೂರ್ಣಗೊಳಿಸಿದ್ದಾರೆ.  ನಾಲ್ಕು ತಿಂಗಳಲ್ಲೇ ಕೆಲಸ ಮುಗಿಸಿರುವ ಅಧಿಕಾರಿಗಳು ಭದ್ರಾ ಎಡದಿಂದ ಎಡದಂಡೆ ನಾಳೆ ಕಾಮಗಾರಿ ಯಶಸ್ವಿ ಎಂದು ಪತ್ರಿಕಾ ಹೇಳಿಕೆಯನ್ನು ನೀಡಿದ್ದರು,  ಈಗಲೂ ಕೂಡ ಭದ್ರ ಎಡದಂಡೆ ನಾಲೆಯ ಕಳಪೆ ಕಾಮಗಾರಿ ಆಗಿದೆ ಎಂಬುದಕ್ಕೆ ಉದಾಹರಣೆ ನಾಲೆಯಲ್ಲಿ ಹರಿಯುತ್ತಿರುವ ಎದೆ ಮಟ್ಟದ ಕಣ್ಣಿಗೆ ಕಾಣುವಂತೆ ನೀರೇ ಸಾಕ್ಷಿ ಎಂದು ಸ್ಥಳೀಯರು ಆರೋಪಿಸಿದ್ದಾರೆ. 

 ಈ ಕಾಮಗಾರಿಗೆ 4,23,64,750.44 ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡಿದ್ದರೂ ನೀರು ಜಲಾಶಯದ ಸೋರಿಕೆಯನ್ನ ತಡೆಯುವಲ್ಲಿ ಅಧಿಕಾರಿಗಳ ವಿಫಲರಾಗಿದ್ದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರ ಆಗ್ರಹಿಸಿದ್ದಾರೆ.

ತುರ್ತು ಗೇಟ್‌ನ ಸಿಲ್ ಬೀಮ್ ಗ್ರೂವ್ ಭಾಗದ ದುರಸ್ತಿ ಸೇರಿದಂತೆ ಭದ್ರಾ ಅಣೆಕಟ್ಟಿನ ಎಡದಂಡೆ ಕಾಲುವೆಯ ವಿವಿಧಕಾಮಗಾರಿ,  ತುರ್ತು ಮತ್ತು ಸೇವಾ ಗೇಟ್‌ನ ನಡುವಿನ ಬ್ಯಾರೆಲ್ ಭಾಗದ ದೇಹದ ಗೋಡೆಗೆ ದುರಸ್ತಿ- ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ಪಡೆದು ಕೆಲಸ ಮಾಡಲಾಗಿತ್ತು. 

ಗುತ್ತಿಗೆದಾರರಿಗೆ ಯಾವುದೇ ಕಾರಣಕ್ಕೂ ಬಿಲ್ ಸ್ಯಾಂಕ್ಷನ್  ಮಾಡಬಾರದು ಎಂದು ಆಗ್ರಹಿಸಿ ಎಇಇಗೆ ಸ್ಥಳೀಯರು ಮನವಿ ಮಾಡಿದ್ದಾರೆ. 

ಪ್ರತಿ ವರ್ಷ 5ಕ್ಕೂ ಹೆಚ್ಚು ಟಿಎಂಸಿ ನೀರು ಭದ್ರಾ ಎಡದಂಡೆ ಕಾಲುವೆ ನಾಲೆಯಲ್ಲಿ ಹರಿದು ಹೋಗುತ್ತಿದೆ ಇದನ್ನ ತಡೆಗಟ್ಟುವ ನಿಟ್ಟಿನಲ್ಲಿ ಈ ಕಾಮಗಾರಿಯನ್ನು ಕೈಗೆ ಎತ್ತಿಕೊಂಡಿದ್ದು ಈ ಕಾಮಗಾರಿಯ ಸಂಪೂರ್ಣ ಕಳಪೆ ಕಾಮಗಾರಿ ಆಗಿದ್ದು ಕೆಲಸ ಮಾಡಿದ ಸಂಸ್ಥೆ ಹಾಗೂ ಕಂಟ್ರಾಕ್ಟರ್ ಬ್ಲಾಕ್ ಲಿಸ್ಟ್ ಗೆ ಸೇರಿಸಿ  ತನಿಕೆ ಮಾಡಬೇಕು ಎಂದು  ಆಗ್ರಹಿಸಿದ್ದಾರೆ. 

ಕಾಮಗಾರಿಗೂ ಮುಂಚೆ ಇದೇ ಕಾಲುವೆಯಲ್ಲಿ ಕೇವಲ 2 ರಿಂದ 3 ಅಡಿ ನೀರು ಸೋರಿಕೆ ಆಗುತ್ತಿತ್ತು.4,23,64,750.44 ಕೋಟಿಗೂ ಹೆಚ್ಚು ಕಾಮಗಾರಿಗೆ ಹಣವನ್ನು ಖರ್ಚು ಮಾಡಿ ಪ್ರತಿದಿನ ಈಗ ಐದರಿಂದ ಎಂಟು ಅಡಿ ನೀರು ಹರಿದು ಹೋಗುತ್ತಿದೆ.  ಕಣ್ಣಿಗೆ ಕಾಣುವಂತೆ ಈ ನೀರು ಹರಿದು ಹೋಗುತ್ತಿದ್ದು ಇದು ಕಾಮಗಾರಿ ಕಳಪೆಗೆ ಸಾಕ್ಷಿಯಾಗಿದೆ. 

 ಭದ್ರಾ ಎಡದಂಡೆ ನಾಳೆಯ ಕಾಮಗಾರಿಗೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಕಾಮಗಾರಿ ಕೆಲಸವನ್ನು ಮಾಡಿದ ಸಂಸ್ಥೆ ಹಾಗೂ ಕಂಟ್ರಾಕ್ಟರ್ ವಿರುದ್ಧ ಉನ್ನತ ಮಟ್ಟದ ತನಿಖೆಯನ್ನು ಮಾಡಲೇಬೇಕು ಎಂಬ ಸ್ಥಳೀಯರ ಅಗ್ರಹಿಸಿದ್ದಾರೆ. 

Bhadra reservoir leaks even after spending Rs 4 crore, demand for investigation

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close