ಕಳ್ಳ ಮಾರ್ಗವೂ ಜ್ಯಾಮ್ ಜ್ಯಾಮ್...! The thief's path is also jam-jam...!

 SUDDILIVE || SHIVAMIGGA

ಕಳ್ಳ ಮಾರ್ಗವೂ ಜ್ಯಾಮ್ ಜ್ಯಾಮ್...! The thief's path is also jam-jam...!   

Thief, Path

ಶಿವಮೊಗ್ಗದ ಹೊನ್ನಾಳಿ ರಸ್ತೆಯ ರೈಲ್ವೆ ಓವರ್ ಬ್ರಿಡ್ಜ್ ಮೇಲೆ ವಾಹನಗಳ ಓಡಾಟವನ್ನ ರದ್ದುಗೊಳಿಸಿ ಬದಲೀ ವ್ಯವಸ್ಥೆಯನ್ನ ಕಲ್ಪಿಸಿದ ಮೇಲೆ ಅಲ್ಲಿನ ಚಿತ್ರಣ ಹೇಗಿದೆ ಎಂಬುದನ್ನ ನೋಡಲು ಹೋದರೆ ಪರಿಸ್ಥಿತಿ ಇನ್ನೂ ಖರಾಬ್ ಆಗಿ ಆಗಿದೆ. 

ಈ ಮಾರ್ಗದಲ್ಲಿ ಜಿಲ್ಲಾಧಿಕಾರಿಗಳು ನ.10 ರಂದು ವಾಹನಗಳ ಪರ್ಯಾಯ ಮಾರ್ಗವನ್ನ ಬಂದ್ ಮಾಡಿ ಆದೇಶಿಸಿದ್ದಾರೆ. ಆದರೆ ನ.16 ರಂದು ಅಪಘಾತ ಸಂಭವಿಸಿ ಓರ್ವನ ಸಾವಿಗೆ ಕಾರಣವಾಗಿತ್ತು. ಖಾಸಗಿ ಬಸ್ಸೊಂದು ಇದೇ ನಿಷೇಧಿತ ಮಾರ್ಗದಲ್ಲಿ ಸಂಚರಿಸಿ ರಾಗಿಗುಡ್ಡದಲ್ಲಿ ಇತ್ತೀಚೆಗೆ ವಿವಾಹಿತನಾಗಿದ್ದ ಮೊಹಮದ್ ಅಹಮದ್ ಅವರ ಸಾವಿಗೆ ಕಾರಣವಾಗಿತ್ತು. 


ಅಲ್ಲಿಂದ ಮಣ್ಣು ಹಾಕಿ ಬ್ಯಾರಿಕೇಡ್ ನಿರ್ಮಿಸಿ ಬಂದ್ ಮಾಡಲಾಗಿದೆ.  ಶಿವಮೊಗ್ಗ – ಹೊನ್ನಾಳಿ – ಹೊಸಪೇಟೆ ಕಡೆಗೆ ಸಂಚರಿಸುವ ವಾಹನಗಳು ಶಿವಮೊಗ್ಗದ ಸವಳಂಗ ರಸ್ತೆ, ಉಷಾ ನರ್ಸಿಂಗ್‌ ಹೋಂ, ಜೆಎನ್‌ಎನ್‌ಸಿಇ ಕಾಲೇಜು ಬಳಿ ಬಲಕ್ಕೆ ತಿರುಗಿ ಕುವೆಂಪು ನಗರ, ಶಾಂತಿನಗರ ಮೂಲಕ ಶಿವಮೊಗ್ಗ – ಹೊನ್ನಾಳಿ ರಸ್ತೆಗೆ ತಲುಪಲು ಅವಕಾಶ ಮಾಡಿಕೊಟ್ಟ ಮಾರ್ಗದಲ್ಲಿಯೇ ಈಗ ಭಾರಿ ವಾಹನಗಳು ಈಗ ಸಂಚಾರಿಸುತ್ತಿದ್ದರೂ ಈ ಮಾರ್ಗದಲ್ಲೂ ಕಳ್ಳ ಮಾರ್ಗವನ್ನ ಹುಡುಕಲಾಗಿದೆ.

ಈ ದೃಶ್ಯ ಈಗ ದ್ವಿಚಕ್ರ ವಾಹನಗಳ ಕಳ್ಳಮಾರ್ಗವಾಗಿದೆ.  ಈ ಮಾರ್ಗದಲ್ಲಿ ಮಣ್ಣು ಏರಿಸಿ ಬ್ಯಾರಿಕೇಡ್ ನಿರ್ಮಿಸಿದರೂ ಸಣ್ಣದೊಂದು ಜಾಗ ಮಾಡಿಕೊಙಡು ದ್ವಿಚಕ್ರ ವಾಹನ ಸವಾರರು ಸಂಚರಿಸುತ್ತಿದೆ. ಇಂದು ಸಂಜೆ ಈ ಮಾರ್ಗದಲ್ಲೂ ದ್ವಿಚಕ್ರ ವಾಹನ ಸವಾರರು ಸಂಚರಿಸಲು ಸರದಿ ಸಾಲಿನಲ್ಲಿ ನಿಂತು ಸಂಚರಿಸುತ್ತಿರುವ ದೃಶ್ಯ ಇದಾಗಿದೆ. 

The thief's path is also jam-jam...! 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close