ಭದ್ರಾವತಿ-ಟ್ವಿಸ್ಟ್ ಪಡೆದುಕೊಂಡ ಸಾವಿನ‌ ಪ್ರಕರಣ- Bhadravati - A death case with a twist

 SUDDILIVE || BHADRAVATHI

ಭದ್ರಾವತಿ-ಟ್ವಿಸ್ಟ್ ಪಡೆದುಕೊಂಡ ಸಾವಿನ‌ ಪ್ರಕರಣ-  Bhadravati - A death case with a twist  

Death, case


ಮೈಮೇಲೆ ಯಾವುದೇ ಮಾರಕಾಸ್ತ್ರಗಳನ್ನ ಬಳಸಿರುವ ಗುರುತಿಲ್ಲ ಆದರೂ ಇದೊಂದು ಮರ್ಡರ್ ಎಂದು ಮೃತನ ಕುಟುಂಬ ಆರೋಪಿಸಿರುವುದು ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದೆ. ಅನುಮಾನಸ್ಪದ ಸಾವಿನ ಘಟನೆ ವರದಿಯಾಗಿದೆ.

ಭದ್ರಾವತಿ ತಾಲೂಕು ಉಕ್ಕುಂದದಲ್ಲಿ ಸುಬ್ರಹ್ಮಣ್ಯ ಎಂಬ 68 ವರ್ಷದ ವೃದ್ದನೋರ್ವ ಸಾವನ್ನಪ್ಪಿದ್ದು ಆತನ ಸಾವಿಗೆ ಮೃತ ಸುಬ್ರಹ್ಮಣ್ಯನ ಕುಟುಂಬ ಕೊಲೆ ಎಂದು ಆರೋಪಿಸಿ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ. 

ಈ ಪ್ರಕರಣ ಗೊಂದಲವೆನಿಸಿದ್ದರಿಂದ ಪೊಲೀಸರು ಏನು ಮಾಡಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಕೆಲ ಸ್ಥಳೀಯ ಮಾಹಿತಿ ಪ್ರಕಾರ ಸುಬ್ರಹ್ಮಣ್ಯರಿಗೆ ಶುಗರ್ ಕಾಯಿಲೆ ಹೆಚ್ಚಾಗಿದ್ದು  ಕುಸಿದು ಬಿದ್ದು ಸಾವಾಗಿದೆ ಎಂದು ಹೇಳುತ್ತಿದ್ದರೂ ಮೃತನ ಕುಟುಂಬದ ಹೇಳಿಕೆಯಿಂದಾಗಿ ಪ್ರಕರಣ ಕುತೂಹಲಘಟ್ಟ ತಲುಪಿದೆ.


ಮಾಹಿತಿ ಪ್ರಕಾರ ಸುಬ್ರಹ್ಮಣ್ಯರಿಗೆ ಮತ್ತು ಅವರ ಸಹೋದರಿಯ ಮಕ್ಕಳೊಂದಿಗೆ ಜಮೀನು ವಿಚಾರದಲ್ಲಿ ಗಲಾಟೆಯಿದ್ದು ಅವರಿಂದಲೇ ಮರ್ಡರ್ ಆಗಿದೆ ಎಂದು ಮೃತರ ಕುಟುಂಬ ಪೊಲೀಸ್ ಠಾಣೆಯ ಕದ ತಟ್ಟಿದೆ. ಪ್ರಕರಣ ದಾಖಲಾಗಬೇಕಿದೆ. ಮರಣೋತ್ತರ ಪರೀಕ್ಷೆಯಲ್ಲಿ ಸುಬ್ರಹ್ಮಣಿಯ ಸಾವು ಕೊಲೆನಾ ಅಥ ಸಹಜ ಸಾವಾ ಎಙಬು ತಿಳಿಯಲಿದೆ. ಅಲ್ಲಿಯ ವರೆಗೆ ಈ ಪ್ರಕರಣ ಕುತೂಹಲಕರವಾಗಿಯೇ ಉಳಿಯಲಿದೆ.

Bhadravati - A death case with a twist

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close