ಸೊರಬ-ಮೂರು ಸಂಘಟನೆಗಳಿಂದ ವಿಶೇಷ ರಾಷ್ಟ್ರೀಯ ರೈತ ದಿನಾಚರಣೆ-Special National Farmers' Day celebration by Soraba-Three organizations

SUDDILIVE || SHIVAMOGGA

ಸೊರಬ-ಮೂರು ಸಂಘಟನೆಗಳಿಂದ ವಿಶೇಷ ರಾಷ್ಟ್ರೀಯ ರೈತ ದಿನಾಚರಣೆ-Special National Farmers' Day celebration by Soraba-Three organizations

Celebration, soraba


ಪಟ್ಟಣದ ಪುರಸಭೆ ಮುಂಭಾಗದ ವೃತ್ತಕ್ಕೆ ರೈತ ವೃತ್ತ ಎಂದು ನಾಮಕರಣ ಮಾಡಬೇಕು, ರೈತ ದಿನಾಚರಣೆಯನ್ನು ಹಬ್ಬದಂತೆ ಆಚರಿಸಬೇಕು ಹಾಗೂ ಹೋರಿ ಹಬ್ಬಕ್ಕೆ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿ ಮಂಗಳವಾರ ಸಾರ್ವಜನಿಕ ಹಿತರಕ್ಷಣಾ ಹೋರಾ ಟ ಸಮಿತಿ, ಗೋ ಸಂರಕ್ಷಣಾ ಹೋರಾಟ ಸಮಿತಿ ಹಾಗೂ ಜನಪದ ಕ್ರೀಡೆ ಹೋರಿ ಹಬ್ಬ ಆಚರಣಾ ಸಮಿತಿ ವತಿಯಿಂದ  ಹಬ್ಬದ ಹೋರಿಗಳೊಂದಿಗೆ ವಿಶೇಷವಾಗಿ ರಾಷ್ಟ್ರೀಯ ರೈತ ದಿನಾಚರಣೆ ಆಚರಿಸಲಾಯಿತು.

ನೇತೃತ್ವ ವಹಿಸಿದ್ದ ಸಮಿತಿಯ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಮಾತನಾಡಿ, ನಾಡಿಗೆ ಅನ್ನ ನೀಡುವ ರೈತರನ್ನು ಗೌರವಿಸುವುದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರೀಕರ ಕರ್ತವ್ಯವಾಗಿದೆ. ಈಗಾಗಲೇ ಕಳೆದ ಒಂದು ದಶಕದಿಂದ ಹೋರಾಟ ಮಾಡಲಾಗುತ್ತಿದ್ದು, ಪಟ್ಟಣದ ಪುರಸಭೆ ಮುಂಭಾಗದ ವೃತ್ತಕ್ಕೆ ರೈತ ವೃತ್ತ ಎಂದು ನಾಮಕರಣ ಮಾಡಬೇಕು ಹಾಗೂ ಜನಪದ ಕ್ರೀಡೆ ಹೋರಿ ಹಬ್ಬಕ್ಕೆ ಸರ್ಕಾರ ಮಾನ್ಯತೆ ನೀಡಬೇಕು. ವಿದೇಶಿ ಕ್ರೀಡೆಗಳಿಗೆ ಕ್ರೀಡಾಂಗಣ ಮಾಡುವ ಸರ್ಕಾರ ರೈತರ ಜನಪದ ಕ್ರೀಡೆಯಾದ ಹೋರಿ ಹಬ್ಬಕ್ಕೂ ಪ್ರತಿ ತಾಲೂಕಿನಲ್ಲಿ ಕ್ರೀಡಾಂಗಣ ಮಾಡಬೇಕು ಎಂದು ಆಗ್ರಹಿಸಲಾಗುತ್ತಿದೆ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶಿಕಾರಿಪುರದ ಅವರ ನಿವಾಸಕ್ಕೆ ತೆರಳಿ ಸಹ ಮನವಿ ಸಲ್ಲಿಸಲಾಗಿದೆ. ಮಾತ್ರವಲ್ಲದೆ, ರೈತ ದಿನಾಚರಣೆಗೆ ಆಗ್ರಹಿಸಿ ಇತ್ತೀಚೆಗೆ ಬೆಳಗಾವಿ ಅಧಿವೇಶನಕ್ಕೆ ತೆರಳಿ ಕೃಷಿ ಸಚಿವರಾದ ಚಲುವರಾಯ ಸ್ವಾಮಿ ಅವರಿಗೂ ಮನವಿ ಮಾಡಲಾಗಿದೆ. ರೈತರಿಗೆ ಗೌರವಿಸುವ ನಿಟ್ಟಿನಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಸಮಿತಿಯ ಗೌರವಾಧ್ಯಕ್ಷ ಕೆ. ಪ್ರಭಾಕರ ರಾಯ್ಕರ್ ಮಾತನಾಡಿ, ದೇಶದಲ್ಲಿ ವಿವಿಧ ಆಚರಣೆಗಳನ್ನು ನಡೆಸಲಾಗುತ್ತಿದೆ. ಆದರೆ, ರೈತ ದಿನಾಚರಣೆಗೆ ತಾತ್ಸರದ ಮನೋಭಾವ ಸಲ್ಲದು. ಸಮಿತಿಯಿಂದ ಹಲವಾರು ಹೋರಾಟಗಳನ್ನು ಮಾಡಲಾಗುತ್ತಿದೆ. ರೈತ ವೃತ್ತ ಹಾಗೂ ರೈತ ದಿನಾಚರಣೆಗೆ ಆಗ್ರಹಿಸಿ ಅನೇಕ ಮನವಿಗಳನ್ನು ಸಲ್ಲಿಸಲಾಗಿದೆ. ರೈತರು ಕೃಷಿ ಚಟುವಟಿಕೆಗಳು ಮುಗಿದ ಮೇಲೆ ದೀಪಾವಳಿ ನಂತರದಲ್ಲಿ ಹೋರಿ ಹಬ್ಬ ಮಾಡುತ್ತಾರೆ. ಅದಕ್ಕೆ ಸರ್ಕಾರ ಅನುಮತಿ ನೀಡಬೇಕು ಎಂದರು.

ಜನಪದ ಕ್ರೀಡೆ ಹೋರಿ ಹಬ್ಬ ಆಚರಣಾ ಸಮಿತಿ ಜಿಲ್ಲಾ ಕಾರ್ಯದರ್ಶಿ ಷಣ್ಮುಖಪ್ಪ ಹರಗಿ ಮಾತನಾಡಿ, ರೈತರು ಹೋರಿಗಳನ್ನು ತಮ್ಮ ಮಕ್ಕಳಂತೆ ಸಾಕುತ್ತಾರೆ. ಈಗಾಗಲೇ ತಮಿಳುನಾಡಿನಲ್ಲಿ ಜಲ್ಲಿಕಟ್ಟು, ಕರಾವಳಿ ಭಾಗದಲ್ಲಿ ಕಂಬಳಕ್ಕೆ ಮಾನ್ಯತೆ ನೀಡಲಾಗಿದೆ. ಆದರೆ, ರೈತರ ಜನಪದ ಕ್ರೀಡೆಯಾದ ಹೋರಿ ಹಬ್ಬಕ್ಕೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದೆ. ಸಮಿತಿಯಿಂದ ಹೈಕೋರ್ಟ್ ಮೊರೆ ಸಹ ಹೋಗಲಾಗಿದೆ. ರೈತ ದಿನಾಚರಣೆ ಆಚರಿಸುವ ಜೊತೆಗೆ ಹೋರಿ ಹಬ್ಬಕ್ಕೆ ಸರ್ಕಾರ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಇದಕ್ಕೂ ಮೊದಲು ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಮುಂಭಾಗದಿಂದ ಮುಖ್ಯರಸ್ತೆ ಮಾರ್ಗವಾಗಿ ಪುರಸಭೆ ಮುಂಭಾಗದ ವರೆಗೆ ಮೆರವಣಿಗೆ ನಡೆಸಲಾಗಯಿತು. ಮೆರವಣಿಗೆಯಲ್ಲಿ ಕೊಡಕಣಿ ಡೇಂಜರ್ ಬಸವ, ಹಳೇಸೊರಬದ ಜೀವದ ಒಡೆಯ, ಮರೂರು ತಾರಕಾಸುರ, ಪುಟ್ಟನಹಳ್ಳಿ ಮಲೆನಾಡ ಸಿರಿ, ಹಳೇಸೊರಬ ಶ್ರೀಕೃಷ್ಣ ಹೆಸರಿನ ಹೋರಿಗಳು ಪಾಲ್ಗೊಂಡಿದ್ದವು. ಪುರಸಭೆ ಮುಖ್ಯಾಧಿಕಾರಿ ಚಂದನ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.  

ಪ್ರತಿಭಟನೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ವೀರೇಂದ್ರಗೌಡ ಜೇಡಗೇರಿ, ಉಪಾಧ್ಯಕ್ಷರಾದ ನಾಗಪ್ಪ ಬಿದರಗೇರಿ, ಶರತ್ ಸ್ವಾಮಿ, ಕುರುಬ ಸಮಾಜದ ಮುಖಂಡ ತಿಪ್ಪಣ್ಣ, ವೀರಶೈವ ಸಮಾಜದ ಮುಖಂಡ ಡಿ. ಶಿವಯೋಗಿ, ಯುವ ಮುಖಂಡರಾದ ಅರುಣ ಬೆಳಕು, ರವಿ ಕೇಸರಿ ಯಡಗೊಪ್ಪ, ಧರ್ಮಪ್ಪ, ಕುಮಾರ, ನಾಗರಾಜ ಜೇಡಗೇರಿ, ಲಿಂಗರಾಜ ಹಳೇಸೊರಬ, ಮುಕುಂದಪ್ಪ ಕೊಡಕಣಿ, ಜನಾರ್ಧನ, ಮೋಹನ, ಈಶ್ವರ, ಅಭಿಷೇಕ್, ಶ್ರೀಕಾಂತ, ಪ್ರಮೋದ, ಲಕ್ಷ್ಮಣ, ಕಿರಣ್ ಮರೂರು, ಸಂತೋಷ್, ಅವಿನಾಷ್, ಆದರ್ಶ, ಪ್ರವೀಣ್ ಪುಟ್ಟನಹಳ್ಳಿ, ಮಂಜುನಾಥ, ನಿತೀನ್, ಹೇಮಂತ್, ರೋಹಿತ್, ಜಗದೀಶ್ ಹಳೇಸೊರಬ, ಡಿ. ಗಿರೀಶ್ ಮಡಿವಾಳ ಇತರರಿದ್ದರು.

Special National Farmers' Day celebration by Soraba-Three organizations

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close