ಭದ್ರಾವತಿ-ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಸಾವು, ಮತ್ತೋರ್ವ ಕೋಮಾದಲ್ಲಿ- Bhadravati-A youth dies, another in coma in road accident

 SUDDILIVE || BHADRAVATHI

ಭದ್ರಾವತಿ-ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಸಾವು, ಮತ್ತೋರ್ವ ಕೋಮಾದಲ್ಲಿ- Bhadravati-A youth dies, another in coma in road accident     

Bhadravathi, accident


ಮೂರು ನಾಲ್ಕು ದಿನಗಳ ಹಿಂದೆ ಭದ್ರಾವತಿಯ ತರೀಕೆರೆ ರಸ್ತೆಯ ಫ್ಲೈ ಓವರ್ ಮೇಲೆ ನಡೆದಿದ್ದ ರಸ್ತೆ ಅಪಘಾತದಲ್ಲಿ ತೀವ್ರತರನಾಗಿ ಗಾಯಗೊಂಡು ಹೆಚ್ಚಿನ ಚಿಕಿತ್ಸೆ ಪಡೆಯಲು ಮಣಿಪಾಲಿಗೆ ತೆರಳಿದ್ದ ಭದ್ರಾವತಿ ಯುವಕನ ಸಾವಾಗಿದೆ.  ಮತ್ತೋರ್ವ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ತರೀಕೆರೆ ರಸ್ತೆ fly over ಮೇಲೆ ಡಿ.19 ರಂದು ರಾತ್ರಿ 10-30 ಕ್ಕೆ ನಡೆದಿದ್ದ  ಬೈಕ್ ಮತ್ತು ಲಾರಿ ನಡುವಿನ ಅಪಘಾತದಲ್ಲಿ ಗಾಂಧಿನಗರದ ನಿವಾಸಿ ನಿತಿನ್(30) ಯಾನೆ ಕುಂಟ ತೀವ್ರತರನಾದ ಗಾಯಗೊಂಡಿದ್ದರು. 

ತರೀಕೆರೆ ರಸ್ತೆಯ ಮೂಲಕ ಗಾಂಧಿನಗರಕ್ಕೆ ಸ್ನೇಹಿತ ದಿನೇಶ್ ಜೊತೆ  ಬೈಕ್ ನಲ್ಲಿ ಹಿಂಬದಿಯಲ್ಲಿ ನಿತಿನ್  ಕುಳಿತಿದ್ದ,  ಈ ವೇಳೆ ಎದುರಿನಿಂದ ಬಂದ ಲಾರಿ  ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರನ್ನೂ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆತಂದು ನಂತರ ದಿನೇಶ್ ರನ್ನ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ಹಾಗೂ ನಿತಿನ್ ರನ್ನ ಮಣಿಪಾಲ್ ಗೆ ಕರೆದೊಯ್ಯಲಾಗಿತ್ತು. 

ಮಣಿಪಾಲಿನಲ್ಲಿ ಚಿಕಿತ್ಸೆ ಫಲಕಾರಿಯಾಗದ ಹಿನ್ನಲೆಯಲ್ಲಿ  ನಿತಿನ್ ನಿನ್ನೆ ಮಧ್ಯಾಹ್ನ ಸಾವನ್ನಪ್ಪಿದ್ದಾರೆ. ಇಂದು ಆತನ ಮೃತದೇಹವನ್ನ ಭದ್ರಾವತಿಗೆ ಕರೆತರಲಾಗಿದೆ. ನಾಳೆ ನಿತಿನ್ ಅವರ ಅಂತ್ಯಕ್ರಿಯೆ ನಡೆಯಲಿದೆ.  ಫೈನಾನ್ಸ್ ಮಾಡಿಕೊಂಡಿದ್ದ  ದಿನೇಶ್(30) ಇನ್ನೂ ಕೋಮಾದಲ್ಲಿದ್ದಾರೆ.

  Bhadravati-A youth dies, another in coma in road accident  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close