ಬಿಹಾರಿ ಟೈಲರ್ ಭದ್ರಾವತಿಯಲ್ಲಿ ನೇಣಿಗೆ ಶರಣು-Bihari tailor hangs himself in Bhadravati

 SUDDILIVE || BHADRAVATHI

ಬಿಹಾರಿ ಟೈಲರ್ ಭದ್ರಾವತಿಯಲ್ಲಿ ನೇಣಿಗೆ ಶರಣು-Bihari tailor hangs himself in Bhadravati

Tailor, Bhadravathi


ಭದ್ರಾವತಿಯ ಜನ್ನಾಪುರದಲ್ಲಿ ರೂಂ ಮಾಡಿಕೊಂಡಿದ್ದ ಬಿಹಾರ ಮೂಲದ ಬಲ್ಬಿರ್ ಸಿಂಗ್ ಎಂಬ 25 ವರ್ಷದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಜನ್ನಾಪುರದ ಗಣೇಶ್ ಬೇಕರಿ ಮೇಲಿರುವ ರೂಮ್ ನಲ್ಲಿ ಬಲ್ಬೀರ್ ಸಿಂಗ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ರೀಸೆಂಟ್ ಟೈಲರ್ ನಲ್ಲಿ ಕೆಲಸ ಮಾಡುತ್ತಿದ್ದ ಈತ ನಿನ್ನೆ ಕೆಲಸಕ್ಕೆ ರಜೆ ಮಾಡಿದ್ದ. ಇಂದು ಕೆಲಸಕ್ಕೆ ಬಾರದೆ ಇರುವ ಹಿನ್ನಲೆಯಲ್ಲಿ ರೀಸೆಂಟ್ ಟೈಲರ್ ನ ಮಾಲೀಕರು ರೂಮ್ ಗೆ ಹುಡುಕಿಕೊಂಡು ಹೋಗಿದ್ದರು. 

ರೂಮ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಲ್ಬೀರ್ ಪತ್ತೆಯಾಗಿದ್ದಾನೆ. ಕೌಟುಂಬಿಕ ಸಮಸ್ಯೆಯ ಹಿನ್ನಲೆಯಲ್ಲಿ ಈ ಘಟನೆ ನಡೆದಿದೆ ಎಂಬುದು ಸ್ಥಳೀಯವಾಗಿ ಮಾಹಿತಿ ಲಭ್ಯವಾಗಿದೆ. ಆತ್ಮಹತ್ಯೆ ಮಾಡಿಕೊಂಡ ಬಲ್ಬೀರ್ ಸಿಂಗ್ ಮದುವೆ ಸಹ‌ಆಗಿದ್ದ. ಆದರೆ ಒಬ್ಬನೇ ಭದ್ರಾವತಿಯಲ್ಲಿ ರೂಮ್ ಮಾಡಿಕೊಂಡಿದ್ದ.

ಎರಡು ವರ್ಷಗಳ ಹಿಂದೆ ಬಿಹಾರದಿಂದ ಟೈಲರಿಂಗ್  ಕೆಲಸಕ್ಕೆ ಬಂದು ಭದ್ರಾವತಿಯಲ್ಲೇ ಉಳಿದುಕೊಂಡಿದ್ದ. ಆಗಾಗೆ ಊರಿಗೆ ಹೋಗಿ ಬರುತ್ತಿದ್ದ ಈತನಿಗೆ ಮದ್ಯ ಸೇವನೆಯ ಚಟನೂ ಇತ್ತು.  ಈತ ನೇಣು ಬಿಗಿದುಕೊಳ್ಳುವ ಮೊದಲು ಮದ್ಯ ಸೇವಿಸಿದ್ದ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bihari tailor hangs himself in Bhadravati

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close