ಅಡಿಕೆ ಕಳವು ಪ್ರಕರಣದಲ್ಲಿ ಚಿತ್ರದುರ್ಗ ಪೊಲೀಸರು ನಡೆಸಿದ್ದು ಘನಘೋರ ಅಪರಾಧ ಅಲ್ವಾ? Wasn't the Chitradurga police's conduct in the areca nut theft case a heinous crime?

SUDDILIVE || SHIVAMOGGA

ಅಡಿಕೆ ಕಳವು ಪ್ರಕರಣದಲ್ಲಿ ಚಿತ್ರದುರ್ಗ ಪೊಲೀಸರು ನಡೆಸಿದ್ದು ಘನಘೋರ ಅಪರಾಧನಾ? Wasn't the Chitradurga police's conduct in the areca nut theft case a heinous crime?    

Chitradurga, Police


ಉತ್ತರ ಪ್ರದೇಶ ಹಾಗೂ ಬಿಹಾರಿನಂತೆ ಕರ್ನಾಟಕದಲ್ಲಿಯೂ ಪೊಲೀಸ್‌ ಇಲಾಖೆ ಕಾನೂನು ಪಾಲನೆ ಮಾಡುವಲ್ಲಿ ಎಡೆವಿದೆಯಾ ಎಂಬ ಅನುಮಾನಕ್ಕೆ ಈ ಪ್ರಕರಣ ಕಾರಣವಾಗಿದೆ. ಅಡಿಕೆ ಕಳುವಿನ‌ ಆರೋಪಿಯ್ನ ಪತ್ತೆ ಮಾಡುವ ನೆಪದಲ್ಲಿ ಆತನ ಸಹೋದರನಿಗೆ ಇಲಾಖೆ ಎತ್ತಾಕಿಕೊಂಡು ಹೋಗಿ ಧರ್ಮದೇಟು ನೀಡಿತಾ ಎಂಬ ಶಂಕೆಗಳು ಮೂಡಿದೆ. 

ಇಂತಹ ಒಂದು ಗಂಭೀರ ಘಟನೆ ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದ್ದು, ಚಿತ್ರದುರ್ಗದ ಪೊಲೀಸ್‌ ಸಿಬ್ಬಂದಿ ದಿನದ ಬೆಳಕಿನಲ್ಲೇ ಒಬ್ಬ ಯುವಕನನ್ನು ಎತ್ತಾಕಿಕೊಂಡು ಹೋಗಿ, ಚಿತ್ರದುರ್ಗದ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.


ವಿವರಗಳ ಪ್ರಕಾರ, ವೃತ್ತಿಯಿಂದ ಚಾಲಕರಾಗಿರುವ ಸಯ್ಯದ್ ಬಾಷಾ ಎಂಬ ಯುವಕನನ್ನು ಚಿತ್ರದುರ್ಗ ಪೊಲೀಸರು ವಿಚಾರಣೆ ಹೆಸರಿನಲ್ಲಿ ಎತ್ತಾಕಿಕೊಂಡು ಹೋಗಿದ್ದಾರೆ. ಪೊಲೀಸ್‌ ಹೇಳಿಕೆಯಂತೆ, ಬಾಷಾರ ಸಹೋದರನೊಬ್ಬ ಪ್ರಕರಣದಲ್ಲಿ ಆರೋಪಿಯಾಗಿದ್ದು, ಕಳೆದ ನಾಲ್ಕು ತಿಂಗಳಿಂದ ನಾಪತ್ತೆಯಾಗಿದ್ದಾನೆ. ಆತನ ಕುರಿತು ಮಾಹಿತಿ ಪಡೆಯುವ ಸಲುವಾಗಿ ಸಾದಾ ವಸ್ತ್ರದಲ್ಲಿ ಬಂದ ಪೊಲೀಸರು ಬಾಷಾವನ್ನು ಬಲವಂತವಾಗಿ ಕರೆದೊಯ್ದಿದ್ದಾರೆ ಎಂಬ ಆರೋಪವನ್ನ ಭಾಷಾನ ಕುಟುಂಬ ಮಾಡಿದೆ. ನಂತರ ಚಿತ್ರದುರ್ಗಕ್ಕೆ ಕರೆದೊಯ್ದು ಹಲ್ಲೆ ನಡೆಸಿ, ಬಳಿಕ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಇದರ ನಡುವೆ ಬಾಷಾರ ಇನ್ನೊಬ್ಬ ಸಹೋದರಿಗೆ ಸ್ಥಳೀಯರಿಂದ, ಬಾಷಾನನ್ನು ಕೆಲವರು ಬಲವಂತವಾಗಿ ಜೀಪಿನಲ್ಲಿ ಕರೆದೊಯ್ದಿದ್ದಾರೆ ಎಂಬ ಮಾಹಿತಿ ನೀಡಿರುವುದು ಈ ಅನುಮಾನಕ್ಕೆ ಕಾರಣವಾಗಿದೆ. ತಕ್ಷಣವೇ ಬಾಷಾರ ಕುಟುಂಬದವರು ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಕಾಣೆಯಾದ ಕುರಿತು ದೂರು ನೀಡಲು ಮುಂದಾದರೂ. ಪೊಲೀಸರು ದೂರು ಸ್ವೀಕರಿಸಲು ತಡಮಾಡಿರುವ ಆರೋಪವನ್ನ ಕುಟುಂಬ ಮಾಡಿದೆ. 

ಈ ಮಧ್ಯೆ ಬಾಷಾರ ಸ್ನೇಹಿತರು ರಸ್ತೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ನಡೆಸಿದಾಗ, ಪೊಲೀಸರು ಕರೆದುಕೊಂಡು ಹೋಗಿರುವ ದೃಶ್ಯಗಳು ದಾಖಲಾಗಿರುವುದು ಪತ್ತೆಯಾಗಿದೆ. ಈ ದೃಶ್ಯಗಳನ್ನು ಪೊಲೀಸರಿಗೆ ನೀಡಿದಾಗ, ಅವರು ಬಾಷಾ ಪೊಲೀಸ್‌ ವಶದಲ್ಲಿದ್ದಾನೆ, ಆದ್ದರಿಂದ ದೂರು ಸ್ವೀಕರಿಸಲಾಗುವುದಿಲ್ಲ ಎಂದು ಉತ್ತರಿಸಿದ್ದಾರೆ ಎನ್ನಲಾಗಿದೆ.

ಸ್ವಲ್ಪ ಸಮಯದ ನಂತರ ಚಿತ್ರದುರ್ಗದ ಬಡಾವಣೆ ಪೊಲೀಸ್ ಠಾಣೆಯಿಂದ ಬಾಷಾರ ಸ್ನೇಹಿತರಿಗೆ ಕರೆ ಬಂದು, ಬಾಷಾ ಅಲ್ಲಿಯೇ ಇದ್ದಾನೆ, ಬಂದು ಕರೆದುಕೊಂಡು ಹೋಗಿ ಎಂದು ತಿಳಿಸಿದ್ದಾರೆ. ಬಳಿಕ ಬಾಷಾರ ಸಹೋದರರು ಮತ್ತು ಸ್ನೇಹಿತರು ಚಿತ್ರದುರ್ಗಕ್ಕೆ ತೆರಳಿ, ಗಾಯಗೊಂಡ ಸ್ಥಿತಿಯಲ್ಲಿದ್ದ ಬಾಷಾವನ್ನು ವಾಪಸ್ ಕರೆತಂದಿದ್ದಾರೆ.

ಈ ಕುರಿತು ಬಾಷಾ ನೀಡಿದ ಹೇಳಿಕೆಯಲ್ಲಿ, ತನ್ನನ್ನು ಚಳ್ಳಕೆರೆ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಅಲ್ಲಿ ಬಟ್ಟೆ ತೆಗೆಸಿಸಿ, ಹಲ್ಲೆ ನಡೆಸಲಾಗಿದೆ ಎಂದು ಕುಟುಂಬ ಆರೋಪಿಸಿದೆ. ಪ್ರಸ್ತುತ ಬಾಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ, ಈವರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಲ್ಲ ಮತ್ತು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕುಟುಂಬ ಮತ್ತೊಂದು ಆರೋಪ ಮಾಡಿದೆ.

Wasn't the Chitradurga police's conduct in the areca nut theft case a heinous crime?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close