ಸತ್ಯವನ್ನ ಅರಗಿಸಿಕೊಳ್ಳಲಾಗದ ಕಾಂಗ್ರೆಸಿಗರು ನಿರ್ವೀರ್ಯರು-ಶಾಸಕ ಚೆನ್ನಿ- Congressmen who cannot digest the truth are impotent - MLA Chenni

 SUDDILIVE || SHIVAMOGGA

ಸತ್ಯವನ್ನ ಅರಗಿಸಿಕೊಳ್ಳಲಾಗದ ಕಾಂಗ್ರೆಸಿಗರು ನಿರ್ವೀರ್ಯರು-ಶಾಸಕ ಚೆನ್ನಿ-Congressmen who cannot digest the truth are impotent - MLA Chenni

Congress, impotent

ಜನವಿರೋಧಿ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ  ಕಾಯ್ದೆ ಜಾರಿಗೊಳಿಸದಂತೆ ಆಗ್ರಹಿಸಿ ಇಂದು ಜಿಲ್ಲಾ ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ನಗರದ ಶಿವಪ್ಪ ನಾಯಕ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿತು. 

ದ್ವೇಷ ಭಾಷಣದ ಕಾಯ್ದೆಯನ್ನ ಜಾರಿಗೊಳಿಸುವ ಮೂಲಕ ಕಾಂಗ್ರೆಸ್ ವಿಪಕ್ಷ ಹಾಗೂ ಪತ್ರಿಕೆಗಳನ್ನ ನಿರ್ಬಂಧಿಸಲು ಹೊರಟಿದೆ ಎಂದು ಬಿಜೆಪಿ ಆರೋಪಿಸಿದೆ. ಈ ವೇಳೆ ಮಾತನಾಡಿದ ಶಾಸಕ ಚೆನ್ನಬಸಪ್ಪ, ಮಾಡಬಾರದ್ದನ್ನ ಕಾಂಗ್ರೆಸ್ ಮಾಡುವುದನ್ನ ಹೇಳದರೆ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ಕಾನೂನು ಜಾರಿಗೊಳ್ಳುತ್ತದೆ. ಈ ಕಾಯ್ದೆ ವಿಧಾನ ಸಭೆಯಲ್ಲಿ ಮಂಡನೆಯಾಗಿದೆ. ಬಿಜೆಪಿ ಇದರ  ವಿರುದ್ದ ಮಾತನಾಡಬೇಕು ಎಂದು ತೀರ್ಮಾನಿಸಿದಾಗ ಸದನ ಚರ್ಚೆಗೆ ಅವಕಾಶ ನೀಡದೆ ಮಸೂದೆಯನ್ನ ಅಂಗೀಕಾರ ಮಾಡಲಾಗಿದೆ ಎಂದು ದೂರಿದರು. 

ಸದನದಲ್ಲಿ ಮಸೂದೆ ಚರ್ಚೆಯಾಗದಂತೆ ವ್ಯವಸ್ಥಿತವಾಗಿ ನೋಡಿಕೊಳ್ಳಲಾಗಿದೆ. ಮಂತ್ರಿಒಬ್ಬರು ದಕ್ಷಿಣ ಕನ್ನಡದಲ್ಲಿ ಬಿಜೆಪಿ ಬೆಂಕಿ ಹಚ್ಚಿದ್ದೀರಿ ಎಂದಾಗ ದ್ವೇಷ ಅನಿಸದ ಕಾಂಗ್ರೆಸ್ ಗೆ ಬಿಜೆಪಿ ವಿರೋಧಿಸಿದ್ದನ್ನ ದ್ವೇಷ ಎನಿಸಿದೆ. ಸಭಾಧ್ಯಕ್ಷರು ವಿಪಕ್ಷವನ್ನ ಪರಿಗಣಿಸದೆ ವಿಧೇಯಕವನ್ನ ಅಂಗೀಕರಿಸಿದೆ. ಇದನ್ನ ದಿಕ್ಕಾರ ಮಾಡಬೇಕು. ಸತ್ಯ ಸಂಗತಿಯನ್ನ ಹೇಳುತ್ತೇವೆ. ಇದು ನಿಮಗೆ ದ್ವೇಷ ಭಾಷಣ ಎನಿಸಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಈ ದೇಶವನ್ನ ತುಂಡು ಮಾಡಿದ್ದ ಕಾಂಗ್ರೆಸ್ ಎಂದು ಹೇಳಿದರೆ ಇದು ದ್ವೇಷ ಭಾಷಣವೆನಿಸಿಕೊಳ್ಳಲಿದೆ. ಇದೆ ಸತ್ಯ ಸಂಗತಿ ಅಲ್ವ. ಭಯೋತ್ಪಾದಕರೆಲ್ಲ ಮುಸ್ಲೀಂರು ಎಂದರೆ ಕಾಂಗ್ರೆಸ್ ಗೆ ಉರಿ ಬೀಳುತ್ತೆ. ಇದು ಸತ್ಯ ಅಲ್ವಾ? ದೆಹಲಿಯಲ್ಲಿ ನಡೆದ ಬಾಂಬ್ ಸ್ಪೋಟ ಕಾಂಗ್ರೆಸ್ ಕಾರ್ಯಕರ್ತರು ಎನ್ನಲಾಗುತ್ತಾದಾ? ಬಾಂಬಿಟ್ಟವರೆಲರೂ ಮುಸ್ಲೀಂರು. ಇದು ಸತ್ಯಸಂಗತಿಯಾಗಿದೆ. ಶಿವಮೊಗ್ಗದ ತುಂಗ ನದಿಯಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಿದವರೂ ಮುಸ್ಲೀಂ ಯುವಕರು. ಈ ರೀತಿ ದೇಶದ್ರೋಹಿ ಕೆಲಸ ಮಾಡಿದ್ದು ಮುಸ್ಲೀಂರೇ ಅಲ್ವೇ? ಇದನ್ನ ಹೇಳಿದರೆ ಕಾಂಗ್ರೆಸ್ ಗೆ ಸಹಿಸಿಕೊಳ್ಳಲು ಆಗೊಲ್ಲ ಎಂದು ಗುಡುಗಿದರು. 

ಪತ್ರಿಕಾಸ್ವಾತಂತ್ರ್ಯ ಹರಣವನ್ನ ಕಾಂಗ್ರೆಸ್  1975 ರಲ್ಲಿ ತುರ್ತುಪರಿಸ್ಥಿತಿಯನ್ನ ಹೇರುವ ಮೂಲಕ ಸಾರ್ವಭೌಮತ್ವನ್ನ ತರಲೆತ್ನಿಸಿತು.  ಗೋವಿನ ಕೆಚ್ಚಲನ್ನ ಕತ್ತರಿಕೊಂಡು, ಗೋವಿನ ಕುತ್ತಿಗೆ ಕತ್ತರಿಸಿದನ್ನ ಎಚ್ಚರಿಸಿದರೆ ದ್ವೇಷ ಭಾಷಣವಾಗಲಿದೆ. ಲಾ & ಆರ್ಡರ್ ಸಮಸ್ಯೆ ಗೋವನ್ನ ಕಡಿದವರ ವಿರುದ್ಧ ಜಾರಿಗೊಳಿಸದೆ ಪ್ರಶ್ನಿಸಿದವರನ್ನ ಕಾನೂನು ಅಡಿ ಸಿಲುಕಿಸುವ ಹುನ್ನಾರ ಈ ಬಿಲ್ ನಲ್ಲಿ ಅಡಗಿದೆ ಎಂದರು. 

ಈ ರೀತಿಯ ಸಂವಿಧಾನ ವಿರೋಧಿಯನ್ನ ಕೈಬಿಡಬೇಕು.  ದೇಶ ವಿಭಜನೆಯಾದ ಸಂದರ್ಭದಲ್ಪಿ ಲಕ್ಷಾಂತರ ಹೆಣ್ಣು ಮಕ್ಕಳ ಮಾನಾಪರಹಣ ನಡೆದಿದೆ. ಇದನ್ನ ಹೇಳಿದರೆ ದ್ವೇಷ ಭಾಷಣ ಎಂದರೆ ನಾವೇನು ಮಾಡೋಣ? ಟಿಪ್ಪುವಿನ ತಂದೆ ಹೈದರ್ ಈದೇಶದ ಮೇಲೆ ಆಕ್ರಮಣ ಕಾರಿ ಮಾಡಿದನು. ಸತ್ಯಹೇಳಿದರೆ ಸತ್ಯವನ್ನ ಅರಗಿಸಿಕೊಳ್ಳಲು ಆಗದ ಕಾಂಗ್ರೆಸ್ ಗರು ನಿರ್ವೀಯರ್ಯರು ಎಂದು ಘರ್ಜರಿಸಿದರು. 

ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್,  ಗ್ರಾಮಾಂತರ ಘಟಕದ ಅಧ್ಯಕ್ಷ ಶಿಂಗನಹಳ್ಳಿ ಸುರೇಶ್, ನಗರ ಪ್ರಧಾನ ಕಾರ್ಯದರ್ಶಿ ಧೀನ್ ದಯಾಳ್, ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಎನ್ ಜೆ ನಾಗರಾಜ್, ಜ್ಞಾನೇಶ್ವರ ಮೊದಲಾದವರು ಭಾಗಿಯಾಗಿದ್ದರು. ನಂತರ ಪ್ರಮುಖರು ಡಿಸಿ ಕಚೇರಿಗೆ ತೆರಳಿ ಬಿಲ್ ವಿರುದ್ಧ ಡಿಸಿ ಮೂಲಕ ರಾಜ್ಯಪಾಲರಿಗದ ಮನವಿ ಸಲ್ಲಿಸಲಾಯಿತು. 

Congressmen who cannot digest the truth are impotent - MLA Chenni  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close