ಪ್ರಾಚೀನ ಕಾಲದಿಂದಲೂ ಭಾರತ ವಿಶ್ವಗುರುವೇ-ಜಡ್ಜ್ ಶ್ರೀಶಾನಂದ-Since ancient times, India has had a Vishwaguru-Judge Sreesananda

 SUDDILIVE || SHIVAMOGGA

ಪ್ರಾಚೀನ ಕಾಲದಿಂದಲೂ ಭಾರತ ವಿಶ್ವಗುರುವೇ-ಜಡ್ಜ್ ಶ್ರೀಶಾನಂದ-Since ancient times, India has had a Vishwaguru-Judge Sreesananda

Ancient, judge

ಭಾರತ ಪ್ರಾಚೀನ ಕಾಲದಿಂದಲೂ ವಿಶ್ವಗುರು ಆಗಿತ್ತು. ಆದರೆ ಬದಲಾದ ಸಂದರ್ಭದಲ್ಲಿ ಆ ಸ್ಥಾನವನ್ನ ಕಳೆದುಕೊಂಡಿತು. ಬಟ್ಟೆಯೇ ಹಾಕಿಕೊಳ್ಳದ ಕಾಲದಲ್ಲಿಯೇ ನಾಗರೀಕತೆಯನ್ನ ತೋರಿಸಿದ್ದು ಭಾರತ ದೇಶವೆಂದು ಹೈಕೋರ್ಟ್ ನ್ಯಾಯಮೂರ್ತಿ ಶ್ರೀಶಾನಂದ ಅಭಿಪ್ರಾಯಪಟ್ಟರು.

ನಗರದ ಕುವೆಂಪು ರಂಗ ಮಂದಿರದಲ್ಲಿ ಶ್ರೀಗಂಧ ಸಂಸ್ಥೆವತಿಯಿಂದ ಪ್ರಾಚೀನ ಭಾರತದ ನ್ಯಾಯಾಂಗ ವ್ಯವಸ್ಥೆ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದರು. 

ಶ್ರೀಗಂಧ ಮರವನ್ನ‌ಅತಿಹೆಚ್ಚಾಗಿ ಬೆಳೆದ ನಾಡು ಕರ್ನಾಟಕ. ಆದರೆ ಇಂದು ಮರವನ್ನೇ ಕಳೆದುಕೊಂಡಿದೆ. ಆ ಸ್ಥಳವನ್ನ ಮನೆಗಳಲ್ಲಿ ಪಿಒಪಿ ತುಂಬಿದೆ. ಇದು ನ್ಯಾಯಾಲಯದಲ್ಲಿ ನ್ಯಾಯದ ವ್ಯವಸ್ಥೆ ಸಹ ಶ್ರೀಗಂಧ ಮರದ ಸ್ಥಿತಿ ತಲುಪಿದೆ. ಬ್ರಿಟಿಶ್ ಟೂರಿಸ್ಟ್ ಕೆನ್ನಿ 14 ನೇ ಶತಮಾನದಲ್ಲಿ ಕ್ರಿಮಿನಲ್ ಪ್ರೊಸಿಜರ್ ಕೋಡ್ ಗೊತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.  ಭಾರತದಲ್ಲಿ 3 ನೇ ಶತಮಾನದಲ್ಲಿ ನ್ಯಾಯತತ್ವವಿದ್ದಿದ್ದು ನಮ್ಮ ಗುರುಗಳಿಂದ ತಿಳಿದುಬಂದಿದೆ.  ಕ್ರಿಮಿನಲ್ ಪೊಸಿಜರ್ ನ ಕ್ರೈಂ ಪ್ರಾಚೀನಕಾಲದಲ್ಲಿತ್ತು ಎಂದು ಮೂರನೇ ಶತಮಾನದ ಶ್ರೀಧರ ಮತ್ತು ಮಹಿದರನ ಸಾಲದ ಕಥೆ ಹೇಳಿದರು. 

ಮೈಸೂರಿನಲ್ಲಿ ಮಹರಾಜ ಓರಿಯಂಟಲ್ ನೋಡಿಕೊಂಡು ಬರಬೇಕು. ಮೂರನೇ ಶತಮಾನದಲ್ಲಿ ಡೆವೆಲಪ್ಡ್ ಕಂಟ್ರಿ ಭಾರತ ಆಗಿತ್ತು ಎಂಬುದನ್ನ ಹೇಳುತ್ತದೆ. ಬ್ರಿಟಿಶ್ ಸಿಸ್ಟಮ್ 16 ನೇ ಶತಮಾನದ್ದನ್ನ ನಾವು ಓದಿತ್ತೀವಿ.ಸೋಲೋಮನ್ vs ಸೋಲೋಮನ್ ಪಾಠವನ್ನ ಕಾನೂನು ವಿದ್ಯಾರ್ಥಿಗಳು ಓದುತ್ತಾರೆ. ಅದರ ಜಾಗವನ್ನ ಶ್ರೀಧರ ಮತ್ತು ಮಹಿದರನ ಜಡ್ಜ್ ಮೆಂಟ್ ಓದುವಂತಾಗಬೇಕು ಎಂದರು. 

ಮೂರನೇ ಶತಮಾನದ ಶ್ರೀಧರ vs ಮಹಿದರನ ಕಥೆಯನ್ನ  ಐದನೇ ಶತಮಾನದ ಕವಿತೆಯಲ್ಲಿ ಕವಿಯೊಬ್ಬ ಹೇಳುತ್ತಾನೆ. ಆಗಿನ ಕಾಲದಲ್ಲಿ ಹಣ ಸಾಲ ನೀಡಿದ ಕಥೆ ಅದು. ಕೋವಿಡ್ ತರಹ ಸಾಂಕ್ರಮಿಕ ರೋಗದ ವೇಳೆ ಶ್ರೀಧರ ನೀಡಿದ ಸಾಲವನ್ನ ಆತನ ತಾತ ನೀಡಿದ ಹಣವನ್ನ‌ನೀಡಿದ್ದನ್ನ ಹೇಗೆ ಯಾಮಾರಿಸಿ ಹಣ ಸಿಗದಂತೆ ಮಾಡಲಾಗಿತ್ತು ಎಂಬುದನ್ನ ಹೇಳಲಾಗಿದೆ. ರಾಜ ಹೇಗೆ ಜಡ್ಜ್ ನೀಡಿದ್ದಾರೆ ಎಂಬುದನ್ನ ವಿವರಿಸಲಾಗಿದೆ. ಬ್ರಿಟೀಶ್ ಕಾನೂನಿನಲ್ಲಿ ಇಂತಹ ಜಡ್ಜ್ ಮೆಂಟ್ ಇಲ್ಲ ಎಂದರು. 

ನ್ಯಾಯ ಸಮಾಜಮುಖಿಯಾಗಿರಬೇಕು. ನ್ಯಾಧೀಶರ ತೀರ್ಪುನ್ನ ನಾಲ್ಕುಜನ ಒಪ್ಪುವಂತಾಗಬೇಕು. 2500 ಬಿಸಿಯ ಹಿಂದೆಯೇ ಕಲ್ಬುರ್ಗಿಯ ವಿಜ್ಞಾನೇಶ್ವರ ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಭಾಗಕೊಡಬೇಕು ಎಂದು ಬರೆದಿದ್ದರು. ಕ್ರೈಂನ್ನ ಡಿಫೈನ್ ಮತ್ತು ಕ್ಲಾಸಿಫಿಕೇಷನ್ ಮಾಡಲಾಗಿತ್ತು. ಪಾತಕ ನಡೆಯೋದು ಹೆಣ್ಣು ಮತ್ತು ಮಣ್ಣಿಗೆ ಎಂಬುದನ್ನ ಆಗಲೇ ಭಾರತ ಹೇಳಿತ್ತು. ದೇಶದ ಮೇಲಿನ ದಾಳಿಯಿಂದ ದೇಶದ ವ್ಯವಸ್ಥೆ ಹಾಳಾಯಿತು ಎಂದರು. 

ಖಾಸಗಿ ತನ ವ್ಯವಸ್ಥೆಯನ್ನ ಹಾಳು ಮಾಡಿತು. ಬಡ್ಡಿಗೆ ಕಾಸುಕೊಡುವುದನ್ನ ಭ್ರೂಣಹತ್ಯೆ ಎಂದು ಹೇಳಲಾಗುತ್ತಿತ್ತು. ಇಂದು ಭ್ರೂಣಕ್ಕೆ ಹಣಕಟ್ಟಲಾಗುತ್ತಿದೆ. ಪಾಪಪ್ರಜ್ಞೆಯಿಂದ ಅಪರಾಧಗಳನ್ನ ತಡೆಹಿಡಿಯಲಾಗಿತ್ತು. ನಾರದಸ್ಮೃತಿ ಕ್ರಿ.ಶ 200 ರಲ್ಲಿ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಬರೆಯಲಾಗಿದೆ. ನಾಲ್ಕುಜನ ಒಪ್ಪುವಂತೆ ಇರಬೇಕು ಎನ್ನಲಾಗಿದೆ. ಹಸುವಿನ ಬಾಲಹಿಡಿದು ಮತ್ತು ಮಗುವಿನ ಮೇಲೆ ಆಣೆ ಮಾಡಲಾಗುತ್ತಿತ್ತು. ನ್ಯಾಯಾಲಯ ಸತ್ಯಾನ್ವೇಷಣೆ ಮೂಲಕ ಪ್ರತಿಯೊಂದು ನ್ಯಾಯವನ್ನ ಒದಗಿಸಬೇಕು ಎಂದಿದೆ ಎಂದರು. 

ರಾಜಶಾನಕ್ಕೆ ಮಾನ್ಯತೆ ಕೊಡಬೇಕಿದೆ ಎಂದು ನಾರದಸ್ಮೃತಿಯಲ್ಲಿದೆ. ಅದನ್ನ ಅಂಬೇಡ್ಕರ್ ಸಂವಿಧಾನದಲ್ಲಿ ತೆಗೆದುಕೊಂಡಿದ್ದಾರೆ. ಶೋಷಿತರಿಗೆ ದೀನದಲಿತರಿಗೆ ರಾಜನಲ್ಲಿ ಅನುಕಂಪವಿರಬೇಕು ಎಂಬುದಿದೆ. ಅದರ ಪಾಲನೆಯಾಗಿದೆಯಾ ಎಂಬುದು ಪರಾಮರ್ಶಿಸಬೇಕಿದೆ. ನಾರದ ನಂತರ ಬೃಹಸ್ಪೃತಿ ಸಹ ಬರೆದಿದ್ದಾರೆ. ರಾಜ ಪ್ರಕೃತಿ ರಂಜನಾಥ್ ಎಂಬ ಸ್ಮೃತಿಇದೆ. ಮೊಘಲರು ಭಾರತದಲ್ಲಿ 150 ವರ್ಷ ಆಳ್ವಿಕೆ ಮಾಡಿದಾಗ ಕ್ರಿಮಿನಲ್ ಅಪರಾಧಕ್ಕೆ ತಮ್ಮ ಕಾಯ್ದೆ ಹೇರುತ್ತಿದ್ದರು. ಸಿವಿಲ್ ಬಂದಾಗ ಭಾರತೀಯರ ಸುದ್ದಿಗೆ ಬರಲಿಲ್ಲ.‌ ಮೆಣಸು ಖರೀದಿಗೆ ಬಂದ ಬ್ರಿಟೀಶರು ಭಾರತದವರನ್ನ ಗುಲಾಮಗಿರಿಯನ್ನಾಗಿಸಲು ಆಳಿದರು ಎಂದರು.

ಸಂಸ್ಕೃತ ಹೋದ ನಂತರ ನಮ್ಮ ಸಂಸ್ಕೃತಿಯೂ ಹೋಯಿತು. ಪಾಶ್ಚಿಮತ್ಯ ದೇಶಗಳು ನಮ್ಮ ಸಂಸ್ಕೃತಿಯ ದಾಳಿಯಾಗಿದೆ ಜೀವನ ಶೈಲಿಯಲ್ಲಿ ಬದಲಾಗಿದೆ. ಅನ್ಯಾಯವನ್ನ ಅನ್ಯಾಯವೆಂದು ಹೇಳುವ ಮನಸ್ಥಿತಿ ಹೊಂದಿರಬೇಕು. ದಂಡವನ್ನ ವಿಧಿಸುವಾಗ ಪ್ರಮಾಣದಲ್ಲಿ ನೀಡಬೇಕು. ಹಳೆಯದೆಲ್ಲ ಸರಿಯಿದೆ ಎಂದು ಹೆಳಲ್ಲ. ಆದರೆ ಉತ್ತಮ ಸಧೃಡ ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯಾಕ್ಕಾಗಿ ಅಲೆದಾಡುತ್ತಿದ್ದೇವೆ. ನ್ಯಾಯವನ್ನ ಸುಳ್ಳು ಓವರ್ ಟೇಕ್ ಮಾಡಿದರೆ ಜಡ್ಜ್ ಗೆ ಪಾಪ ಬರುತ್ತೆ ಎಂಬ ಮಾತಿದೆ.  ಇದರಲ್ಲಿ ಜಡ್ಜ್ ಒಬ್ಬರೆ ನ್ಯಾಯ ಒದಗಿಸದೆ ಇರುವ ಪ್ರಕರಣದಲ್ಲಿ ಪಾಪಪಡುವುದಿಲ್ಲ. ಇದರಲ್ಲಿ ನ್ಯಾಯ ನಾಲ್ಕು ಜನ ಭಾಗಿಯಾಗುತ್ತಾರೆ. ಹಾಗಾಗಿ ಜಡ್ಡುಗಳು ಪಾಪದ ಪ್ರಜ್ಞೆಯಿಂದ ನ್ಯಾಯವನ್ನ ಮಾಡಬೇಕು. ನೊಂದವರಿಗೆ ನ್ಯಾಯೊದಗಿಸಬೇಕು‌ ಎಂದರು. 

Since ancient times, India has had a Vishwaguru-Judge Sreesananda    

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close