ಸೊರಬ-ದತ್ತ ಮಾಲಾ ಅಭಿಯಾನಕ್ಕೆ ಚಾಲನೆ- Datta Mala campaign launched

SUDDILIVE || SORABA

ಸೊರಬ-ದತ್ತ ಮಾಲಾ ಅಭಿಯಾನಕ್ಕೆ ಚಾಲನೆ- Datta Mala campaign launched   

Datta, Mala

ದತ್ತ ಭಕ್ತರು ದತ್ತಮಾಲೆ ಧರಿಸುವ ಮೂಲಕ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ವತಿಯಿಂದ ಹಮ್ಮಿಕೊಂಡಿರುವ ದತ್ತ ಜಯಂತಿ ಕಾರ್ಯಕ್ರಮ ನಿಮಿತ್ತ ದತ್ತ ಪಾದುಕೆಗಳ ದರ್ಶನಕ್ಕೆ ಗುರುವಾರ ದತ್ತಪೀಠಕ್ಕೆ ತೆರಳಿದರು. 

ದತ್ತ ಮಾಲಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಮಾಜ ಸೇವಕ ಹಾಗೂ ಜಿಜೆಪಿ ಯುವ ಮುಖಂಡ ಡಾ. ಎಚ್.ಇ. ಜ್ಞಾನೇಶ್ ಮಾತನಾಡಿ, ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳ್ಳುವ ದತ್ತಪೀಠ ಹಿಂದೂಗಳಿಗೆ ಸಲ್ಲಬೇಕು. ಈ ನಿಟ್ಟಿನಲ್ಲಿ ಕಳೆದ‌ ಐದು ದಶಕಗಳಿಂದ ನಿರಂತರ ಹೋರಾಟ ನಡೆಯುತ್ತಿದೆ. ದತ್ತಪೀಠಕ್ಕೆ ಪೌರಾಣಿಕ ಇತಿಹಾಸ ಹಾಗೂ ದಾಖಲೆಗಳ ಆಧಾರವಿದೆ. ಇಷ್ಟಿದ್ದರೂ ಹೋರಾಟ ಮಾಡಿ ತೆಗೆದುಕೊಳ್ಳುವ ಪರಿಸ್ಥಿತಿ ಬಂದಿರುವುದು ದುರ್ದೈವದ ಸಂಗತಿ ಎಂದರು.


ದತ್ತ ಪೀಠ ಹಿಂದೂಗಳದ್ದೆ ಎಂದು ನ್ಯಾಯಾಲಯದಲ್ಲಿ ಹೋರಾಟ ಮಾಡಲಾಗುತ್ತಿದೆ. ಈಗಲೂ ಸರ್ಕಾರದಿಂದ ನ್ಯಾಯ ಕೊಡಲು ಅವಕಾಶವಿದೆ. ಕೂಡಲೇ ಒಂದು ಸಮಿತಿ ರಚಿಸಿ ದಾಖಲೆಗಳನ್ನು ಪರಿಶೀಲಿಸಿ, ಅದರ ಆಧಾರಗಳ ಮೇಲೆಯೇ ನಿರ್ಣಯ ತೆಗೆದುಕೊಳ್ಳಲಿ ಎಂದು ಆಗ್ರಹಿಸಿದರು. 


ಇದಕ್ಕೂ ಮೊದಲು ಪಟ್ಟಣದ ಚಿಕ್ಕಪೇಟೆಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಮಹೇಶ್ ಗೋಖಲೆ ಅವರಿಂದ ಮಾಲೆ ಧರಿಸಿದ ದತ್ತ ಭಕ್ತರು ಪುರಸಭೆ ಸದಸ್ಯ ಮಧುರಾಯ್ ಜಿ. ಶೇಟ್, ಸಮಾಜ ಸೇವಕ ನಾಗರಾಜ ಗುತ್ತಿ, ಸುಧಾಕರ್ ಭಾವೆ ಮತ್ತು ಇತರಡೆ ಮನೆಗಳಿಗೆ ತೆರಳಿ ಪಡಿ ಸಂಗ್ರಹಿಸಿದರು.


ವಿಹಿಂಪ ಜಿಲ್ಲಾ ಸಹಕಾರ್ಯದರ್ಶಿ ಎಚ್.ಎಲ್. ಚಂದನ್, ತಾಲೂಕು ಅಧ್ಯಕ್ಷ ಜೆ. ನಿರಂಜನ್, ಬಜರಂಗದಳ ಜಿಲ್ಲಾ ಸಹ ಸಂಚಾಲಕ ಬಿ. ಶಶಿಕುಮಾರ್, ತಾಲೂಕು ಸಂಚಾಲಕ ಉಮೇಶ್, ತಾಲೂಕು ಸಹ ಕಾರ್ಯದರ್ಶಿ ಜಿ. ನಂದನ್, ಹಿಂದೂ ಯುವ ಕೇಸರಿ ಗೌರವಾಧ್ಯಕ್ಷ ಉಮಾಶಂಕರ, ಉಡುಗಣಿ, ಪ್ರಮುಖರಾದ ರವಿ ಗುಡಿಗಾರ್, ಅಶೋಕ್ ಚಲ್ಲೂರು, ಸುರೇಶ್ ಭಂಡಾರಿ, ರಾಘವೇಂದ್ರ, ಸುರೇಶ್ ಶಿಗ್ಗಾ, ದತ್ತ ಸೊರಬ, ಪ್ರದೀಪ್, ಪ್ರಶಾಂತ್ ಚಿಕ್ಕಮಾಕೊಪ್ಪ, ವೀರೇಶ್, ಆನಂದ, ಮಣಿಕಂಠ, ಪ್ರಜ್ವಲ್, ಶರತ್, ಗಣೇಶ್, ಸೇರಿದಂತೆ ಇತರರಿದ್ದರು.

Datta Mala campaign launched 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close