ಜಾಮೀನು ಸಿಕ್ಕರೂ ಬಿಡುಗಡೆಯಾಗದೆ ಇರುವ ಚಿನ್ನಯ್ಯ- Chinnaiah, who has not been released despite being granted bail

 SUDDILIVE || SHIVAMOGGA

ಜಾಮೀನು ಸಿಕ್ಕರೂ ಬಿಡುಗಡೆಯಾಗದೆ ಇರುವ ಚಿನ್ನಯ್ಯ- Chinnaiah, who has not been released despite being granted bail   

Chinnaiah, bail

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಶಿವಮೊಗ್ಗದ ಜೈಲ್ ನಲ್ಲಿರುವ ಬುರುಡೆ ಚಿನಯ್ಯನಿಗೆ ಜಾಮೀನು ದೊರೆತರೂ ಬಿಡುಗಡೆಯ ಭಾಗ್ಯ ದೊರೆತಿಲ್ಲ. 

ಧರ್ಮಸ್ಥಳ ವಿರದ್ಧ ಷಡ್ಯಂತ್ರ ಪ್ರಕರಣದಲ್ಲಿ ಜಾಮೀನು ಸಿಕ್ಕಿದ್ರೂ ಚಿನ್ನಯ್ಯನಿಗೆ ಬಿಡುಗಡೆ ಭಾಗ್ಯವಿಲ್ಲವಾಗಿದೆ.  ನ.25ರಂದು ಚಿನ್ನಯ್ಯನಿಗೆ ಬೆಳ್ತಂಗಡಿ ಕೋರ್ಟ್ ನಿಂದ ಜಾಮೀನು ದೊರೆತಿದೆ, ಜಾಮೀನು ಸಿಕ್ಕಿ 9 ದಿನವಾದ್ರೂ ಚಿನ್ನಯ್ಯ ಬಿಡುಗಡೆ ಆಗಿಲ್ಲ. ಷರತ್ತು ಬದ್ಧ ಜಾಮೀನು ನೀಡಿದ್ದ ಕೋರ್ಟ್, 1 ಲಕ್ಷ ಬಾಂಡ್ ಸೇರಿ 12 ಷರತ್ತು, 1 ಲಕ್ಷ ಬಾಂಡ್ ನೀಡದೆ ಇರುವುದರಿಂದ ಚಿನ್ನಯ್ಯನಿಗೆ ಬಿಡುಗಡೆಯಾಗಿಲ್ಲ.  , 

ಸದ್ಯ ಶಿವಮೊಗ್ಗ ಜೈಲಿನಲ್ಲೇ ಇರುವ ಚಿನ್ನಯ್ಯ ಸೆಪ್ಟಂಬರ್ ನಲ್ಲಿ ಬಂದಿದ್ದ. ಭದ್ರತಾ ವಿಚಾರದಲ್ಲಿ ಚಿನ್ನಯ್ಯನನ್ನ ಶಿವಮೊಗ್ಗಕ್ಕೆ ಕರೆತರಲಾಗಿತ್ತು. 79 ದಿನಗಳ ನಂತರ ಚಿನ್ನಯ್ಯನಿಗೆ ಜಾಮೀನು ದೊರೆತಿತ್ತು. ಷರತ್ತು ಬದ್ದ ಜಾಮೀನು ದೊರೆತರೂ ಆತನನ್ನ ಬಿಡಿಸಿಕೊಳ್ಳಲು ಯಾರೂ ಮುಂದೆ ಬಾರದ ಕಾರಣ ಜೈಲಿನಲ್ಲಿ ಮುಂದುವರೆದಿದ್ದಾರೆ. 


Chinnaiah, who has not been released despite being granted bail



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close