ಹೃದಯಾಘಾತದಿಂದ ನಿರ್ದೇಶಕ ಸಾವು-Director dies of heart attack

 SUDDILIVE || SHIVAMOGGA

ಹೃದಯಾಘಾತದಿಂದ ನಿರ್ದೇಶಕ ಸಾವು-Director dies of heart attack

ಚಿತ್ರೀಕರಣದ ಸಂದರ್ಭ ಹೃದಯಾಘಾತವಾಗಿ  ಸಂಗೀತ್‌ ಸಾಗರ್‌ ಅವರು ಶಿವಮೊಗ್ಗದ ಮ್ಯಾಕ್ಸ್‌ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕೊಪ್ಪ ತಾಲೂಕು ಹರಿಹರಪುರದಲ್ಲಿ ‘ಪಾತ್ರಧಾರಿʼ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಸಂಗೀತ್‌ ಸಾಗರ್‌ ಕುಸಿದು ಬಿದ್ದಿದ್ದರು. ಕೂಡಲೆ ಅವರನ್ನು ಕೊಪ್ಪ ಆಸ್ಪತ್ರೆಗೆ ರವಾನಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ನಿರ್ದೇಶಕ ಸಂಗೀತ್‌ ಸಾಗರ್‌ ಅವರನ್ನು ಶಿವಮೊಗ್ಗಕ್ಕೆ ಕರೆತರಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.

ಪರಿಸರ ಸಂರಕ್ಷಣೆಯ ಕತೆಯುಳ್ಳ ಪಾತ್ರಧಾರಿ ಸಿನಿಮಾವನ್ನು ಸಂಗೀತ್‌ ಸಾಗರ್‌ ನಿರ್ದೇಶಿಸುತ್ತಿದ್ದರು. ಕಳೆದ ಎರಡು ತಿಂಗಳಿಂದ ತೀರ್ಥಹಳ್ಳಿ ಮತ್ತು ಕೊಪ್ಪ ತಾಲೂಕಿನ ವಿವಿಧೆಡೆ ಚಿತ್ರೀಕರಣ ಮಾಡುತ್ತಿದ್ದರು. ಗುರುವಾರ ಬೆಳಗ್ಗೆ ಸಿನಿಮಾದ ಕೊನೆಯ ಶಾಟ್‌ ಚಿತ್ರೀಕರಣಕ್ಕೆ ಯೋಜಿಸಲಾಗಿತ್ತು.



ಇಂದು ಮಧ್ಯಾಹ್ನ ಹಾಸ್ಯ ಕಲಾವಿದ ಸಂಜು ಬಸಯ್ಯ ಅವರಿಗೆ ಆ್ಯಕ್ಷನ್‌ ಹೇಳಿದ್ದರು. ಆ ವೇಳಗಾಗಲೇ ಸುಸ್ತಾಗಿ ಸಂಗೀತ್‌ ಸಾಗರ್‌ ಕುಸಿದಿದ್ದಾರೆ. ಕೂಡಲೆ ಸಿನಿಮಾ ತಂಡ ಅವರ ಆರೈಕೆ ಮಾಡಿ ಕೊಪ್ಪ ತಾಲೂಕಿನ ಆಸ್ಪತ್ರೆಗೆ ಕರೆದೊಯ್ದಿದ್ದರು.

ಚಿತ್ರತಂಡದಿಂದ ಅಂತಿಮ ದರ್ಶನ

ನಿರ್ದೇಶಕ ಸಂಗೀತ್‌ ಸಾಗರ್‌ ನಿಧನರಾದ ವಿಷಯ ತಿಳಿದು ಪಾತ್ರಧಾರಿ ಚಿತ್ರತಂಡ ಶಿವಮೊಗ್ಗದ ಮ್ಯಾಕ್ಸ್‌ ಆಸ್ಪತ್ರೆಗೆ ಧಾವಿಸಿದೆ. ನಿರ್ಮಾಪಕ ಡೇವಿಡ್‌, ನಟ ಸಂಜು ಬಸಯ್ಯ ಸೇರಿದಂತೆ ನಟ, ನಟಿಯರು, ಸಿನಿಮಾ ತಂಡ ಅಂತಿಮ ದರ್ಶನ ಪಡೆಯಿತು.

ನಿರ್ದೇಶಕ ಸಂಗೀತ್‌ ಸಾಗರ್‌ ಅವರು ಸ್ನೇಹಿತ, ಕೋಟೆ ಹುಡುಗರು ಸೇರಿ ಎಂಟು ಸಿನಿಮಾಗಳನ್ನು ನಿರ್ದೇಶಿಸಿದ್ದರು. ಮೂಲತಃ ಹಾಸನ ಜಿಲ್ಲೆ ಸಕಲೇಶಪುರದವರು. ಇವರಿಗೆ ಪತ್ನಿ ಮತ್ತು ಪುತ್ರಿ ಇದ್ದಾರೆ.

Director dies of heart attack

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close