ತಾಕ್ಕತ್ತಿದ್ದರೆ ವಿಪಕ್ಷದವರು ಅವಿಶ್ವಾಸ ಮಂಡಿಸಲಿ, ರಾಜಣ್ಣ ಬಿಜೆಪಿಗೆ ಹೋದರೂ ಹೋಗಬಹುದು-ಬೇಳೂರು-even if Rajanna joins the BJP, he can go - Belur

 SUDDILIVE || SHIVAMOGGA

ತಾಕ್ಕತ್ತಿದ್ದರೆ ವಿಪಕ್ಷದವರು ಅವಿಶ್ವಾಸ ಮಂಡಿಸಲಿ, ರಾಜಣ್ಣ ಬಿಜೆಪಿಗೆ ಹೋದರೂ ಹೋಗಬಹುದು-ಬೇಳೂರು- If they can, let the opposition move a no-confidence motion, even if Rajanna joins the BJP, he can go - Belur

Beluru, rajanna

ಬೆಳೆ ವಿಮೆ ಕುರಿತಂತೆ ಅಧಿಕಾರಿಗಳು ಸರಿಯಾಗಿ ವರದಿ ನೀಡಿಲ್ಲ. ರಾಜ್ಯ ಸರ್ಕಾರ ಸರಿಯಾಗಿ ಪರಿಹಾರ ನೀಡಿಲ್ಲ ಎಂದು ಸಂಸದ ರಾಘವೇಂದ್ರ ಆರೋಪಿಸಿದ್ದಾರೆ. ಆದರೆ ಅವರ ಆರೋಪ ಸರಿಯಲ್ಲ. ಸರ್ಕಾರದ ಬಳಿ ಪರಿಹಾರ ನೀಡಲು ಅನುದಾನವಿದೆ - ಸೂಕ್ತ ಹಣ ಇದೆ ಎಂದು ಹೇಳಿದ್ದಾರೆ. 

ಮಾಧ್ಯಮಗಳ ಜೊತೆ ಶಿವಮೊಗ್ಗದಲ್ಲಿ ಮಾತನಾಡಿದ  ಅವರು, ಇದರಲ್ಲಿ ಪರಿಹಾರ ಬರಲಿಲ್ಲ ಎನ್ನುವ ಸಂಸದ ರಾಘವೇಂದ್ರ ನರೇಗಾ ಮತ್ತು ಜೆಜೆಎಂ ನಲ್ಲಿ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ ಎಂಬುದು ಅರಿಯಲಿ. ಬೆಳೆ ವಿಮೆ ಪರಿಹಾರದಲ್ಲಿ ವಿಮಾ ಕಂಪೆನಿಗಳು ಬಹಳಷ್ಟು ವ್ಯತ್ಯಾಸ ಮಾಡಿವೆ ಎಂದರು. 

ಕೆಲ ಗ್ರಾಮಗಳಲ್ಲಿ ಮಳೆ ಮಾಪನ ಕೇಂದ್ರಗಳು ಇಲ್ಲ ಎಂದು ಸಾಕಷ್ಟು ಕಡೆ ವ್ಯತ್ಯಾಸ ಮಾಡಿದ್ದಾರೆ. ವ್ಯತ್ಯಾಸ ಆಗಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಸಚಿವರು, ತೋಟಗಾರಿಕೆ ಇಲಾಖಾಧಿಕಾರಿಗಳು, ಡಿಸಿ ಜೊತೆಗೆ ಸಭೆ ಮಾಡಿದ್ದೆನೆ. ವಿಮಾ ಕಂಪೆನಿಗಳ ತಪ್ಪನ್ನು ಮುಖ್ಯಮಂತ್ರಿಗಳು ಹಾಗೂ ತೋಟಗಾರಿಕೆ ಮಂತ್ರಿಗಳ ಗಮನಕ್ಕೂ ತಂದಿದ್ದೆನೆ ಎಂದರು.

ಸರಿಯಾಗಿ ವಿಮಾ ಕಂಪೆನಿಗಳು ಸರ್ವೆ ನಡೆಸಿಲ್ಲ ಎಂಬುದು ಗಮನಕ್ಕೆ ತಂದಿದ್ದೆನೆ. ಸೊರಬ, ಶಿಕಾರಿಪುರ ಭಾಗದಲ್ಲಿ ಸರ್ವೆ ಚೆನ್ನಾಗಿ ಆಗಿದೆ. ಆದರೆ ಸಾಗರ, ತೀರ್ಥಹಳ್ಳಿ, ಹೊಸನಗರ ಭಾಗಗಳಲ್ಲಿ ಸರ್ವೆ ವ್ಯತ್ಯಾಸವಾಗಿದೆ ಎಂದರು.


ಕ್ರಾಂತಿ ಮತ್ತು ಶಾಂತಿಯಾಗಿ ಬಗೆಹರಿದಿದೆ. 


ಸಿಎಂ ಪವರ್ ಶೇರಿಂಗ್ ವಿಚಾರದಲ್ಲಿ ಮಾಧ್ಯಮದಲ್ಲಿ ಹೇಳುವ ಕ್ರಾಂತಿಯನ್ನು ನಮ್ಮ ನಾಯಕರು ಶಾಂತಿಯನ್ನಾಗಿ ಮಾಡಿದ್ದಾರೆ. ಈಗ ಕ್ರಾಂತಿ ಇಲ್ಲ ಈಗ ಕೇವಲ ಶಾಂತಿಯಾಗಿದೆ ಎಂದ ಬೇಳೂರು

ಅವರ ಮನೆಗೆ ಇವರು ತಿಂಡಿಗೆ, ಇವರ ಮನೆಗೆ ಅವರು ತಿಂಡಿಗೆ ಹೋಗಿ ರಾಜ್ಯದ ರಾಜಕೀಯ ಪರಿಸ್ಥಿತಿ ಶಾಂತಿಯುತವಾಗಿಸಿದ್ದಾರೆ. ಈ ಬೆಳವಣಿಗೆ ನಮ್ಮ ನಾಯಕರಿಗೆ, ನಮ್ಮ ಕಾರ್ಯಕರ್ತರಿಗೆ ಖುಷಿಯಾಗಿದೆ ಎಂದರು. 

ಮತ್ತೆ ದೆಹಲಿಗೆ ಹೋಗಿರುವ ವಿಚಾರವೇ ಬೇರೆ ಇದೆ. ಡಿ.8 ನೇ ತಾರೀಖಿಗೆ ದೆಹಲಿಗೆ ಬರಲು ಹೈಕಮಾಂಡ್ ಹೇಳಿದೆ. ಶಾಸಕರು ಬೇರೆ ಬೇರೆ ಕೆಲಸದ ಜೊತೆಗೆ ದೆಹಲಿಗೆ ತೆರಳಿದ್ದಾರೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ದೆಹಲಿಗೆ ಹೋಗುವುದು ಸಹಜ. ನಮ್ಮ ಕ್ರಾಂತಿ ಅನ್ನೋದು ವಿಪಕ್ಷದವರಿಗೆ ಆಹಾರವಾಗಿತ್ತು. ಆದರೆ ಅವರೇ ಈಗ ನಮಗೆ ಆಹಾರವಾಗಿದ್ದಾರೆ. 


ರಾಷ್ಟ್ರೀಯ ನಾಯಕರು ಬಾರದೆ ತೀರ್ಮಾನವಾಗಿದೆ


ರಾಷ್ಟ್ರೀಯ ನಾಯಕರು ಬಾರದೇ ಶಾಂತಿಯುತ ತೀರ್ಮಾನ ನಮ್ಮ ನಾಯಕರು ಮಾಡಿದ್ದಾರೆ. ಇಲ್ಲವಾಗಿದ್ದರೆ 8 ನೇ ತಾರಿಖಿನಿಂದ ಆರಂಭವಾಗುವ ಬೆಳಗಾವಿ ಅಧಿವೇಶನದಲ್ಲಿ ನಮ್ಮ ಮೇಲೆ ಮುಗಿ ಬೀಳುತ್ತಿದ್ದರು. ಈಗ ಕುಮಾರ್ ಬಂಗಾರಪ್ಪ ಮತ್ತು ರೆಬೆಲ್ ಶಾಸಕರು ದೆಹಲಿಗೆ ಹೋಗಿ ನಮಗೆ ಆಹಾರವಾಗಿದ್ದಾರೆ. ಹೀಗಾಗಿ ಬಿಜೆಪಿಯವರು ನಮಗೆ ಆಹಾರವಾಗಿದ್ದಾರೆ. ಬೆಳಗಾವಿ ಅಧಿವೇಶನ ಸುಸೂತ್ರವಾಗಿ ನಡೆಯಲಿದೆ ಎಂದು ಭರವಸೆ ಮಾತನಾಡಿದರು. 


ತಾಕ್ಕತ್ತಿದ್ದರೆ ವಿಪಕ್ಷಗಳು ಅವಿಶ್ವಾಸ ಮಂಡಿಸಲಿ


ಅವಿಶ್ವಾಸ ಮಂಡಿಸುವುದಾಗಿ ವಿಪಕ್ಷದವರು ಹೇಳಿದ್ದಾರಂತೆ. ಅವರಿಗೆ ತಾಕತ್ತಿದ್ದರೆ ಅವರು ಅವಿಶ್ವಾಸ ಮಂಡಿಸಲಿ ಎಂದು ಸವಾಲು ಹಾಕಿದ ಬೇಳೂರು136 ಪ್ಲಸ್ ಜನ ನಾವಿದ್ದೆವೆ. ಒಬ್ಬರೇ ಒಬ್ಬರ ಓಟು ಆಚೆ ಹೋದರೆ ನೋಡೋಣ ಎಂದು  ಸವಾಲು ಹಾಕಿದ ಬೇಳೂರು ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಯಾವುದೇ ತಂತ್ರಗಳು ನಡೆಯುತ್ತಿಲ್ಲ. ನಮ್ಮ ಶಾಸಕರು ಭಿನ್ನಮತದಿಂದ ಬಿಜೆಪಿ ಬಿಟ್ಟು ಹೋಗುತ್ತಾರೆಂಬ ಭಯವಿದೆ. 

ರಾಜಣ್ಣ ಬಿಜೆಪಿಗೆ ಹೋದರೂ ಹೋಗಬಹುದು

ಆದರೆ ರಾಜಣ್ಣ ವರ್ತನೆ ನೋಡಿದರೆ ಅವರು ಬಿಜೆಪಿಗೆ ಹೋಗುತ್ತಾರೆಂದು ಅನಿಸುತ್ತದೆ. ಎಷ್ಟು ದಿನ ಎಂದು ಅವರನ್ನು ಸಹಿಸಿಕೊಳ್ಳಲು ಆಗುತ್ತೆ ? ನಮ್ಮ ನಾಯಕರು ಅವರ ಹೇಳಿಕೆ ಗಮನಿಸುತ್ತಿದ್ದಾರೆ ಎಂದು ಅಚ್ಚರಿ ಮೂಡಿಸಿದ್ದಾರೆ.

even if Rajanna joins the BJP, he can go - Belur   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close