ಪತ್ತೆಯಾದ ಮೊಬೈಲ್ ನ್ನ ವಾರಸುದಾರರಿಗೆ ಹಂಚಿಕೆ-Distribution of recovered mobile phone to heirs

SUDDILIVE || SHIVAMOGGA

ಪತ್ತೆಯಾದ ಮೊಬೈಲ್ ನ್ನ ವಾರಸುದಾರರಿಗೆ ಹಂಚಿಕೆ-Distribution of recovered mobile phone to heirs    

Mobile, distribution

ಶಿವಮೊಗ್ಗದಲ್ಲಿ ಕಳೆದು ಹೋಗಿದ್ದ  ಮೊಬೈಲ್ ಗಳನ್ನ ಸೆನ್ ಪೊಲೀಸರು ಪತ್ತೆಹಚ್ಚಿ ವಾರಸುದಾರರಿಗೆ ನೀಡಿದ್ದಾರೆ. 6445 ಮೊಬೈಲ್ ಗಳು ಕಳೆದುಹೋಗಿವೆ ಎಂದು ಈ ವರ್ಷ ದಾಖಲಾಗಿದ್ದು ಅದರಲ್ಲಿ 1194 ಮೊಬೈಲ್ ಗಳ ಪತ್ತೆಯಾಗಿವೆ.  18% ಕಳೆದುಹೊದ ಮೊಬೈಲ್ ಪತ್ತೆಯಾಗಿವೆ. 

ದಿನಾಂಕಃ 03-12-2025 ರಂದು ಎಸ್ಪಿ  ಮಿಥುನ್ ಕುಮಾರ್ ಜಿ. ಕೆ,  ಮತ್ತು ಅಡಿಷನಲ್ ಎಸ್ಪಿ ಎ ಜಿ ಕಾರಿಯಪ್ಪ, ಹಾಗೂ  ರಮೇಶ್ ಕುಮಾ‌ರ್ ಎಸ್, ಮಾರ್ಗದರ್ಶನದಲ್ಲಿ, ಸೆನ್ ಪೊಲೀಸ್ ಡಿವೈಎಸ್ಪಿ ಕೃಷ್ಣಮೂರ್ತಿ ಕೆ ಮತ್ತು ಪಿಐ ಮಂಜುನಾಥ್  ನೇತೃತ್ವದಲ್ಲಿ ಸಿಬ್ಬಂಧಿಗಳ ತಂಡವು ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದು ಹೋದ ಮೊಬೈಲ್ ಗಳನ್ನು ಸೈಬರ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಯವರು CEIR Portal ಮೂಲಕ ಜಿಲ್ಲೆಯಾದ್ಯಂತ ಇದುವರೆಗೂ ಸುಮಾರು 6445 ಕಳೆದು ಹೋದ ಮೊಬೈಲ್ ಗಳು ವರದಿಯಾಗಿತ್ತು, 

ಇವುಗಳಲ್ಲಿ ದೇಶದ ವಿವಿಧ ರಾಜ್ಯಗಳಾದ ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಕೇರಳ ಮತ್ತು ತೆಲಂಗಾಣ ಹಾಗೂ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಪತ್ತೆ ಮಾಡಿ ಸುಮಾರು 1194 ಕ್ಕೂ ಹೆಚ್ಚು ಮೊಬೈಲ್ ಗಳನ್ನು ವಾರಸುದಾರರಿಗೆ ನೀಡಿದ್ದು, ನಂತರ ಇದೆ ರೀತಿ ಕಳೆದ 02 ತಿಂಗಳಲ್ಲಿ 110 ಮೊಬೈಲ್ ಗಳನ್ನು ಪತ್ತೆ ಮಾಡಲಾಗಿದೆ.  ಪತ್ತೆಯಾದ ಮೊಬೈಲ್ ಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಕುರಿತು ದಿನ ಸಂಜೆ 05-00 ಗಂಟೆಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 

Distribution of recovered mobile phone to heirs

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close