ಮದುವೆ ನಡೆದು ಒಂದೇ ದಿನಕ್ಕೆ ವರ ಹೃದಯಾಘಾತಕ್ಕೆ ಬಲಿ-Groom dies of heart attack just one day after wedding

SUDDILIVE || SHIVAMOGGA

ಮದುವೆ ನಡೆದು ಒಂದೇ ದಿನಕ್ಕೆ ವರ ಹೃದಯಾಘಾತಕ್ಕೆ ಬಲಿ-Groom dies of heart attack just one day after wedding     

Groom, wedding


ಮದುವೆ ಆಗಿ ಒಂದೇ ದಿನಕ್ಕೆ ವರ ಹೃದಯಾಘಾತಕ್ಕೆ ಬಲಿಯಾ್ಇರುವ ಘಟನೆ ವರದಿಯಾಗಿದೆ. ಭದ್ರಾವತಿ ತಾಲೂಕಿನ ಹನುಮಂತಾಪುರದ ನವ ವಿವಾಹಿತ ವರ ರಮೇಶ್‌ (೨೮) ಹೃದಯಾಘಾತದಿಂದ ಸಾವನಪ್ಪಿದ್ದಾರೆ.

ಹರಪ್ಪನಹಳ್ಳಿಯ ಬಂಡ್ರಿಯ ಮಧುವನ್ನು ವರಿಸಿದ್ದ ವರ ರಮೇಶ್  ಸೋಮವಾರ ಹೃದಯಾಘಾತವಾಗಿ ಸಾವನಪ್ಪಿದ್ದಾರೆ. ಕಳೆದ ವರ್ಷ ನಿಶ್ಚಯವಾಗಿದ ವಧುವಿನೊಂದಿಗೆ ಭಾನುವಾರ ಶಿವಮೊಗ್ಗದ ಬಿ.ಹೆಚ್ ರಸ್ತೆಯ ಗಂಗಾ ಪ್ರಿಯಾ ಕಲ್ಯಾಣ ಮಂಟಪದಲ್ಲಿ ಸಪ್ತಪದಿ ತುಳಿದಿದ್ದರು.

ಸೋಮವಾರ ಹರಪನಹಳ್ಳಿಯ ಬಂಡ್ರಿಯ ವಧುವಿನ ಮನೆಗೆ ಹೋಗಿದ್ದಾರೆ. ದೇವಸ್ಥಾನದಿಂದ ಮೇರವಣಿಗೆ ಮೂಲಕ ವಧುವಿನ ಮನೆಗೆ ಕರೆದುಕೊ‌ಂಡು ಹೋಗಲಾಗಿತ್ತು.ವಧುವಿನ ಮನೆ ತಲುಪಿದ ರಮೇಶ್ ದಂಪತಿಗಳು ದೇವರ ಮನೆಯಲ್ಲಿ ಕೈ ಮುಗಿಯಲು ತೆರಳಿದ ವೇಳೆ ಕುಸಿದು ಬಿದ್ದಿದ್ದಾರೆ.

ರಮೇಶನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಪ್ರಯತ್ನ ನಡೆಸಿದರು ಅಷ್ಠರಲ್ಲೇ ರಮೇಶ್ ಕೊನೆಯು ಸಿರೆಳೆದಿದ್ದಾರೆ. ಮಂಗಳವಾರ ಹೊಸಕೊಪ್ಪಕ್ಕೆ ಮೃತ ದೇಹವನ್ನು ತಂದು ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. 

Groom dies of heart attack just one day after wedding

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close