ಚಾಲಕನ ನಿಯಂತ್ರಣ ತಪ್ಪಿ ಕೆರೆ ಬಿದ್ದ ಕಾರು-ಇಬ್ಬರು ಸಾವು-Driver loses control, car falls into lake, two dead

 SUDDILIVE || ANAVATTI

ಚಾಲಕನ ನಿಯಂತ್ರಣ ತಪ್ಪಿ ಕೆರೆ ಬಿದ್ದ ಕಾರು-ಇಬ್ಬರು ಸಾವು-Driver loses control, car falls into lake, two dead

Lake, car


ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ಕೆರೆಗೆ ಪಲ್ಟಿಯಾಗಿ ಬಿದ್ದ ಪರಿಣಾಮ  ಇಬ್ಬರು ಮೃತಪಟ್ಟಿದ್ದಾರೆ, ಮತ್ತಿಬ್ಬರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ, ಸೊರಬ ತಾಲೂಕಿನ ಆನವಟ್ಟಿ ಸಮೀಪದ ಕನೆಕೊಪ್ಪ ಹೊಸೂರು ಬಳಿ ಡಿಸೆಂಬರ್ 24 ರ ಮುಂಜಾನೆ ನಡೆದಿದೆ.

ಶಿಕಾರಿಪುರ ತಾಲೂಕಿನ ಪುನೇದಹಳ್ಳಿ ನಿವಾಸಿ ನವೀನ್ (21) ಮತ್ತು ರಾಮಚಂದ್ರ (37) ಎಂಬುವರು ನಾಪತ್ತೆಯಾಗಿದ್ದಾರೆ. ಮೊದಲಿಗೆ ಕೆರೆಗೆ ಬಿದ್ದ ಕಾರಿನಲ್ಲಿದ್ದ ರಾಮಚಂದ್ರ ನೀರುಪಾಲಾಗಿದ್ದು ನಾಪತ್ತೆಯಾಗಿದ್ದರು. ಇವರಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ. ರುದ್ರೇಶ್ (26) ಹಾಗೂ ಮಂಜುನಾಥ್ (21) ಎಂಬಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಬೆಳಗಿನ ಜಾವ 3.20 ರ ಸುಮಾರಿಗೆ ಶಿಕಾರಿಪುರದಿಂದ ಆನವಟ್ಟಿ ಕಡೆಗೆ ಇಕೋ ಕಾರಿನಲ್ಲಿ ನಾಲ್ವರು ಪ್ರಯಾಣಿಸಿದ್ದಾರೆ. ಕನೆಕೊಪ್ಪ ಹೊಸೂರು ರಸ್ತೆ ತಿರುವಿನ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಕೆರೆಗೆ ಉರುಳಿ ಬಿದ್ದಿದೆ ಎಂದು ಹೇಳಲಾಗಿದೆ.

ಘಟನಾ ಸ್ಥಳಕ್ಕೆ ಆನವಟ್ಟಿ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.

Driver loses control, car falls into lake, two dead

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close