ಹಿಂಸಾಚಾರಕ್ಕೆ ಹಿಂಸಾಚಾರದಿಂದ ಉತ್ತರಿಸಬೇಕಾ-ವಾಸುದೇವ್ ಪ್ರಶ್ನೆ-Should violence be answered with violence - Vasudev's question

 SUDDILIVE ||  SHIVAMOGGA

ಹಿಂಸಾಚಾರಕ್ಕೆ ಹಿಂಸಾಚಾರದಿಂದ ಉತ್ತರಿಸಬೇಕಾ-ವಾಸುದೇವ್ ಪ್ರಶ್ನೆ-Should violence be answered with violence - Vasudev's question  

Vhp, violence


ಬಾಂಗ್ಲಾದೇಶದಲ್ಲಿ ಹಿಂದೂಗಳ ಕ್ರೂರ ಹತ್ಯೆ ಹಾಗೂ ಹಿಂದೂ ಸಮಾಜವನ್ನು ಗುರಿಯಾಗಿಟ್ಟುಕೊಂಡು ನಡೆಸಲಾದ ಹಿಂಸಾಚಾರವನ್ನು ಖಂಡಿಸಿ ಇಂದು ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದೂ ಜಾಗರಣ ವೇದಿಕೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಎರಡು ಸಂಘಟನೆಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸುವೆ.

ವಿಶ್ವ ಹಿಂದೂ ಪರಿಷತ್ ಬಾಂಗ್ಲಾದೇಶದ ಮಹಿಮಾನ್ಸಿಂಗ್ ನಲ್ಲಿ ಹಿಂದು ಯುವಕ ದೀಪು ಚಂದ್ರದಾಸ್ ಅವರ ಕೂರಹತ್ಯೆಯನ್ನು ತೀವ್ರವಾಗಿ ಖಂಡಿಸಿದೆ ಈ ಘಟನೆಯನ್ನು ಹಿಂದು ತಮ್ಮನ್ನು ಜಾತ್ಯಾತೀತ ಎಂದು ಕರೆದುಕೊಳ್ಳುವ ಶಕ್ತಿಗಳು ಕೆಲವು ಅಂತರಾಷ್ಟ್ರೀಯ ಮಾಧ್ಯಮಗಳು ಮತ್ತು ಪ್ರಪಂಚಾದ್ಯಂತ ಮಾನವ ಹಕ್ಕುಗಳ ವೇದಿಕೆಗಳು ಸಂಪೂರ್ಣವಾಗಿ ಮೌನವಾಗಿರುವುದು ಕಳವಳಕಾರಿ ಸಂಗತಿ ಆಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ ದೀಪು ಚಂದ್ರದಾಸ್ ಪೊಲೀಸ ರಕ್ಷಣೆಯಲ್ಲಿ ಇದ್ದರೂ ಅವರನ್ನು ಹತ್ಯೆ ಮಾಡಿರುವುದು ಬಾಂಗ್ಲಾದೇಶದ ಆಡಳಿತ ಉದ್ದೇಶಪೂರ್ವಕವಾಗಿ ದಾಳಿಕೋರರಿಗೆ ಬೆಂಬಲ ನೀಡುವಂತಿತ್ತು ಎಂದು ಸಂಘಟನೆ ತಿಳಿಸಿದೆ.

ಈ ವೇಳೆ ಮಾತನಾಡಿದ ವೇಳೆ ವಿಹೆಚ್ ಪಿಯ ಜಿಲ್ಲಾಧ್ಯಕ್ಷ ವಾಸುದೇವ್, ಭಾರತದಿಂದ ಬಾಂಗ್ಲವನ್ನ ವಿಮೋಚನೆಯಾಯಿತು. ಬಾಂಗ್ಲಕ್ಕೆ ಸಮಸ್ಯೆ ಬಂದರೆ ಭಾರತ ಧಾವಿಸುತ್ತದೆ ಎಂಬ ಮಾತುಕತೆಯೂ ನಸೆಯಿತು. ಆದರೆ ಇಂದು ಬಾಂಗ್ಲಾ ದೇಶದ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಹಿಂದೂ ಹತ್ಯೆಯನ್ನ ಬಾಂಗ್ಲಾ ತಡೆಯಬೇಕು.  ಮಾನವೀಯ ಮೌಲ್ಯಗಳ ಬಗ್ಗೆ ಬೊಬ್ಬೆ ಹೊಡೆಯುವ ಯಾವುದೇ ದೇಶ ದೀಪು ಚಂದ್ರ ದಾಸ್ ಹತ್ಯೆಯನ್ನ ಖಂಡಿಸದೆ ಇರುವುದು ದುರಂತ. ಹಿಂದೂ ಹತ್ಯೆಯಾದರೆ ಯಾರೂ ಮಾತನಾಡೊಲ್ಲ. ಪ್ರಧಾನಿಗೆ ಇದು ಎಚ್ಚರಿಕೆಯ ಕರೆಗಂಟೆ ನೀಡುತ್ತಿದ್ದೇವೆ. ಬಾಂಗ್ಲಾ ಹಿಂದೂಗಳಿಗೆ ರಕ್ಷಣೆ ನೀಡಬೇಕು. ಹಿಂಸಾಚಾರದ ಮೂಲಕವೇ ಉತ್ತರ ನೀಡಬೇಕು. 

ಭಾರತದ ಒಳಗೆ ಬಾಂಗ್ಲಾ ವಲಸಿಗರನ್ನ  ಔಅರತದಿಂದ ಓಡಿಸಿ ಬಾಂಗ್ಲಾ ಹಿಂದೂಗಳನ್ನ ಭಾರತಕ್ಕೆ ವಾಪಾಸ್ ಕರೆಯಿಸಿಕೊಳ್ಳಿ ಎಂದರು. 

Should violence be answered with violence - Vasudev's question  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close