ಸದನದ ಸದಸ್ಯರನ್ನ ಪ್ರಚೋದಿಸಿ ದ್ವೇಷ ಭಾಷಣದ ಬಿಲ್ ಪಾಸ್ ಆಗಿದೆ, ಸಭಾಧ್ಯಕ್ಷರ ನಡೆ ಪ್ರಶ್ನೆಗೊಳಪಡಿಸುತ್ತೇವೆ-ಚೆನ್ನಿ

 SUDDILIVE || SHIVAMOGGA

ಸದನದ ಸದಸ್ಯರನ್ನ ಪ್ರಚೋದಿಸಿ ದ್ವೇಷ ಭಾಷಣದ ಬಿಲ್ ಪಾಸ್ ಆಗಿದೆ, ಸಭಾಧ್ಯಕ್ಷರ ನಡೆ ಪ್ರಶ್ನೆಗೊಳಪಡಿಸುತ್ತೇವೆ-ಚೆನ್ನಿ-Hate speech bill passed by inciting members of the House, we will question the Speaker's action - Chenni

Chenni, hatespeech


ಬೆಳಗಾವಿ ಅಧಿಕವೇಶನ ರಾಜ್ಯಕ್ಕೆ ತುರ್ತು ಪರಿಸ್ಥಿತಿಯನ್ನ ಹೇರಿದ ಪರಿಸ್ಥಿತಿಯನ್ನ  ನಿರ್ಮಿಸಲಾಗಿದೆ. ದ್ವೇಷ ಭಾಷಣದ ಕಾಯ್ದೆ ಜಾರಿಗೆ ತರುವ ಮೂಲಕ ಕಾಂಗ್ರೆಸ್ ತನ್ನ ಚಾಳಿ ಮುಂದುವರೆಸಿದೆ ಎಂದು ಶಾಸಕ ಚೆನ್ನಬಸಪ್ಪ ದೂರಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ್ವೇಷ ಭಾಷಣದ ಕಾಯ್ದೆಯನ್ನ ಚರ್ಚೆಗೆ ಒಳಪಡಿಸದೆ ಮಸೂದೆ ಅಂಗೀಕಾರ ಮಾಡಲಾಗಿದೆ. ಇದು ಸಂವಿಧಾನ ಹತ್ಯೆಯಾಗಿದೆ. ಅಂದು ಇಂಧಿರಾಗಾಂಧಿ ತುರ್ತು ಪರಿಸ್ಥಿತಿ ಹಾಕಿದ್ದರು. ಇಂದು ಸಿದ್ದರಾಮಯ್ಯ ಅದನ್ನೇ ಅನುಸರಿಸಿದ್ದಾರೆ. ಕಾಂಗ್ರೆಸ್ ಗೆ ಪ್ರಜಾಪ್ರಭುತ್ವದ ಉಳಿವು ಕಾಂಗ್ರೆಸ್ ಗೆ ಬೇಕಿಲ್ಲ. ಸುಪ್ರೀಂನ ಕಾನೂನನ್ನ ಗಾಳಿಗೆ ತೂರಲಾಗಿದೆ ಎಂದು ದೂರಿದರು.

ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಕ ವ್ಯಕ್ತಿ ತನ್ನ ಭಾಷಣ ಮಾಡುತ್ತಾನೆ. ಅಭಿವ್ಯಕ್ತಿ ಸ್ವಾತಂತ್ರ್ಯದ ನಡುವಳಿಕೆ ಪ್ರಕ್ರಿಯೆಗೆ ಕಡಿವಾಣ ಹಾಕುವ ಬಿಲ್ ಇದಾಗಿದೆ. ದ್ವೇಷ ಭಾಷಣದ ಬಿಲ್ ಬದಲಾಗಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದಕ್ಕೆ ತರುವ ಬಿಲ್ ನ್ಯಾಯಾಲಕ್ಕೂ ಸವಾಲಾಗಿ ಪರಿಣಮಿಸಿದೆ. ಎಲ್ಲಿ ಸರಿ ಮಾಡಬೇಕಿತ್ತೋ ಸಂವಿಧಾನವನ್ನ ಸರಿಯಾಗಿ ಜಾರಿಗೊಳಿಸುವ ಜಾಗದಲ್ಲಿ ದಾದಾಗಿರಿ ಮಾಡುವಂತಹ ಬಿಲ್ ಜಾರಿಯಾಗಿದೆ ಎಂದು ದೂರಿದರು. 

ವಿಧಾನ ಸಭೆಯಲ್ಲಿ ಕಾನೂನು ಜಾರಿ ಮಾಡುವ ಜಾಗದಲ್ಲಿ ಕಾಂಗ್ರೆಸ್ ನಾಯಕರ ನಡುವಳಿಕೆಯೂ ಬಹಳ ಮುಖ್ಯವಾಗಿದೆ. ಸಾಹಿತಿಗಳು ಪುಸ್ತಕವನ್ನ ಬರೆಯುತ್ತಾರೆ. ಸಾಹಿತಿಗಳಿಗೆ ಪುಸ್ತಕ ಬರೆಯಲು  ಸಂವಿಧಾನ ಹಕ್ಕು ನೀಡಿದೆ. ಅದಕ್ಕೂ ಕಡಿವಾಣ ಹಾಕಿದಂತಾಗುತ್ತದೆ. ಅರ್ಟಿಕಲ್ 19ಎಗೆ ಅಪಮಾನವಾಗಿದೆ. ಸಂವಿಧಾನವನ್ನ ಮೂಲ ಸಂವಿಧಾನ ಬದಲಿಸುವ ಹಕ್ಕು ರಾಜ್ಯ ಸರ್ಕಾರಕ್ಕೆಯಿಲ್ಲ. ಇದರ ಹಕ್ಕಿರೋದು ಕೇಂದ್ರ ಸರ್ಕಾರಕ್ಕೆ ಸಂವಿಧಾನಕ್ಕೆ ತಿದ್ದುಪಡಿ ತಂದು ಜಾರಿಗೊಳಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಅದನ್ನ ಗಾಳಿಗೆ ತೂರಿ ಬಿಲ್ ಪಾಸ್ ಮಾಡಿಕೊಳ್ಳಲಾಗಿದೆ. 

ದ್ವೇಷ ಭಾಷಣ ಕಾಯ್ದೆ ವಿಧೇಯಕವನ್ನ ಮಂಡನೆ ಮಾಡಲಾಗಿದೆ. ಕಾನೂನು ದುರುಪಯೋಗಕ್ಕೆ ಅನುವು ಮಾಡಿಕೊಡಲಿದೆ. ನೋಟೀಸ್ ನೀಡದೆ ಬಂಧಿಸಬಹುದಾಗಿದೆ. ಟಾಡಾ, ವೀಸಾ, ತುರ್ತು ಪರಿಸ್ಥಿತಿಯಲ್ಲಿ ಇದೇ ಆಗಿದ್ದು. ಈ ಕಾಯ್ದೆಯಿಂದ ಪತ್ರಿಕಾ ಧರ್ಮ ಉಳಿಸಲಾಗದು, ಪ್ರತಿಪಕ್ಷವನ್ನ ಕಟ್ಟಿಹಾಕಲಾಗುತ್ತದೆ ಎಂದು ದೂರಿದರು. 

ಬಾಂಬ್ ಸ್ಪೋಟಿಸುವ ಮೂಲಕ ಭಯೋತ್ಪಾದಕ ಕೃತ್ಯವನ್ನ ನಡೆಸಿರುವುದನ್ನ ಹೇಳಿದರೆ ದ್ವೇಷದ ಭಾಷಣವಾಗುತ್ತದೆ? ಸತ್ಯ ಹೇಳಿದಕ್ಕೆ ಜೈಲ್ ಆಗಲಿದೆ. ಧರ್ಮಸ್ಥಳಕ್ಕೆ ಅಪಮಾನವಾಗಿದೆ ಎಂದರೆ ಅದನ್ನ ಕಟ್ಟಿಹಾಕಲಾಗಿದೆ. ಬಾಂಗ್ಲಾದಲ್ಲಿ ಹಿಂದೂಗಳ ನರಮೇಧ ನಡೆಯುತ್ತಿದೆ. ಇದನ್ನ ಮಾಡುತ್ತಿರುವುದು ಮುಸ್ಲೀಂ ಎಂದರೆ  ದ್ವೇಷ ಭಾಷಣದ ಕಾಯ್ದೆ ಜಾರಿಯಾಗುತ್ತದೆ.  ಹಿಂದೂಗಳ ಪರ ಮಾತನಾಡಿದರೆ ಮುಸ್ಲೀಂ ದ್ವೇಷಿಗಳು ಎನ್ನುವ ವಾತಾವರಣ ನಿರ್ಮಾಣವಾಗಲಿದೆ. ಕೃತ್ಯ ನಡೆದಿರುವುದನ್ನ ಹೇಳುದರೆ ಕಾಂಗ್ರೆಸ್ ಗೆ ಉರಿಹತ್ತುಕೊಳ್ಳುತ್ತದೆ. ಇದು ಸಂವಿಧಾನ ವಿರೋದಿ ಮಾನಸಿಕತೆ ಬಿಲ್ ಆಗಿದೆ. ಸಂಘಟನೆ, ಪತ್ರಿಕಾ ರಂಗ, ವಿಪಕ್ಷಗಳನ್ನ ಕಟ್ಟಿಹಾಕುವ ಪ್ರಯತ್ನವಾಗಿದೆ.   ಇಂತಹ ಕಾನೂನಿನ ಮೂಲಕ ಹಿಂದೂಗಳನ್ನ ನಿಯಂತ್ರಿಸಲು ಕಾಂಗ್ರೆಸ್ ಹೊರಟಿದೆ ಎಂದು ದೂರಿದರು. 

ವಿಧಾನ ಸಭೆಯ ಒಳಗೆ ಯಾರಿಗೆ ಬೇಕಾದರೆ ತಲ್ವಾರ್ ತೋರಿಸಬಹುದು ಪಾಕಿಸ್ತಾನ್ ಜಿಂದಾಬಾದ್ ಎಂದರೆ ದ್ವೇಷದ ಭಾಷಣವಾಗಬಹುದು. ಕಾಂಗ್ರೆಸ್ ನ ನೀತಿ ದರ್ನೀತಿಯಾಗಿದೆ ಹಾಗಾಗಿ ಬಿಜೆಪಿ ಖಂಡಿಸಿದೆ. ಸಾಮಾಜಿಕ ಜಾಲಾತಾಣದಲ್ಲಿ ಪದ ವ್ಯತ್ಯಾಸವಾದರೆ ಬಂಧನವಾಗಲಿದೆ. ದೇಶ ದ್ರೋಹಿಗಳಿಗೆ ಕುಮ್ಮಕ್ಕು ನೀಡುವ ವಿಧೇಯಕವನ್ನ ಕಾಂಗ್ರೆಸ್ ಜಾರಿ ಮಾಡಲಿದೆ. ಪುಸ್ತಕದ ಮೇಲೆ ನಿರ್ಬಂಧಿಸಲಾಗುತ್ತದೆ. ಸತ್ಯ ಹೇಳಿದರೆ ಕಾಂಗ್ರೆಸ್ ಗೆ ಉರಿಯೇಕೆ ಎಂದು ಪ್ರಶ್ನಿಸಿದರು. 

ನಿಮ್ಮಪ್ಪರಾಣೆ ಈ ದ್ವೇಷ ಭಾಷಣದ ಬಿಲ್ ಜಾರಿತರಲು ಸಾಧ್ಯವಿಲ್ಲ. ಬಿಲ್ ಪಾಸ್ ಆಗಿದೆ. ಮೂರು ವರ್ಷ ಆದ ನಂತರ ಯಾರೇ ಬಂದರೂ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಬಿಲ್ ನಲ್ಲಿ ಉಲ್ಲೇಖಿಸಲಾಗಿದೆ. ಯಾರೂ ಈ ರೀತಿ ತರಲು ಸಾಧ್ಯವಿಲ್ಲ. ಮೂರು ವರ್ಷ ಆದ ನಂತರ ಈ ಬಿಲ್ ಬದಲಾಯಿಸಲಾಗದು ಎಂದು ಬರೆದಿರುವುದು ವಿಪಕ್ಷಗಳನ್ನ‌ಕಟ್ಟಿಹಾಕುವ ನೀತಿಯಾಗಿದೆ. ರಾಜ್ಯಪಾಲರು ಕುಕೃತ್ತಯದ ಬಿಲ್ ಪಾಸ್ ಮಾಡಿದರೆ ರಾಷ್ಟ್ರಪತಿಗಳಿಗೆ ಕಳಯಹಿಸಿ ತಿರಸ್ಕರಿಸಬೇಕಿದೆ ಎಂದು ಒತ್ತಾಯಿಸಿದರು. 

ಸಭಾಧ್ಯಕ್ಷರು ಸದನದ ಸದಸ್ಯರ ಕಣ್ಣು ಮುಚ್ಚಿ ಬಿಲ್ ಪಾಸ್ ಮಾಡಿದ್ದಾರೆ. ಚರ್ಚೆ ಆಗಲೇ ಇಲ್ಲ. ದಕ್ಷಿಣ ಕನ್ನಡದ ಶಾಸಕರು ಬೆಂಕಿ ಹಚ್ಚಲಿಕ್ಕೆ ಇರೋದು ಎಂದು ಆಡಳಿತದ ಪಕ್ಷದ  ಸಚಿವರು ಹೇಳಿದರು. ಅಲ್ಲಂದ ಬೆಂಕಿ ಹತ್ತಿತ್ತು. ಪ್ರಚೋದನೆ ನಡೆಸಿ ಬಿಲ್ ಪಾಸ್ ಮಾಡಲಾಗಿದೆ. ದ.ಕ ಶಾಸಕರೆ ಸಭಾಧ್ಯಕ್ಷರಾಗಿದ್ದಾರೆ. ಕುತಂತ್ರದಿಙದ ಬಿಲ್ ಪಾಸ್ ಮಾಡಲಾಯಿತು. ಪ್ರತಿಭಟಿಸಿದ ವೇಳೆ ಬಿಲ್ ಪಾಸ್ ಆಗಿದೆ. ಸಭಾಧ್ಯಕ್ಷರ ನಡುವಳಿಕೆ ಪ್ರಶ್ನಾತೀತವಾಗಬೇಕಿತ್ತು. ಆದರೆ ಪ್ರಶ್ನೆಗೆ ಒಳಪಡಿಸಬೇಕಿದೆ. ಸಭಾಧ್ಯಕ್ಷರ ನಡೆ ಪ್ರಶ್ನೆ ಹಾಕಲಾಗುತ್ತದೆ. 

ಮುಸ್ಲೀಂರೆಲ್ಲ ಭಯೋತ್ಪಾದಕರಲ್ಲ ಆದರೆ ಭಯೋತ್ಪಾದಕರೆಲ್ಲ ಭಯೋತ್ಪಾದಕರೆ ಎಂದು ಸತ್ಯ ಹೇಳಿದರೆ ದ್ವೇಷಭಾಷಣವಾಗಲಿದೆ. ಪಾಕಿಸ್ತಾನ್ ಜಿಂದಾಬಾದ್ ಎಂದವರನ್ನ ಬಂಧಿಸಿ ಎಂದರೂ ದ್ವೇಷ ಭಾಣವಾಗಲಿದೆ. ಇವೆಲ್ಲದಕ್ಕೂ ಕಾನೂನು ಇದ್ದರೂ ಈ ಬಿಲ್ ಜಾರಿಗೊಳಿಸುವ ಅಗತ್ಯವಿತ್ತಾ? ಗೋಹತ್ಯೆ ನಿಷೇಧಿಸಿದನ್ನ ಪ್ರಶ್ನಿಸಿದ್ದಕ್ಕೆ ನನ್ನ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಕಾನೂನಿನ ಮೊರೆಹೋಗಲು ಸಾಧ್ಯವಿಲ್ಲ. ಪೊಲೀಸ್ ಮಾನಸಿಕ ಸ್ಥಿತಿ ಆಡಳಿತ ಪಕ್ಷದ ಜೊತೆಯಿರುತ್ತದೆ. ಇದು ಆಗಬಾರದು. ತುರ್ತುಪರಿಸ್ಥಿತಿ ಜಾರಿಯಾಗಿ 50 ವರ್ಷ ಕಳೆದಿದೆ. 50 ವರ್ಷದ  ಕೊಡುಗೆಯಾಗಿ ದ್ವೇಷ ಭಾಷಣ ಕಾಯ್ದೆ ಜಾರಿತರಲಾಗುತ್ತಿದೆ. ನಾವು ಸತ್ಯವನ್ನ ಹೇಳೇ ಹೇಳುತ್ತೇವೆ ಎಂದು ಹೇಳಿದರು. 

ಈ ಬಿಲ್ ನ್ನ ಬಿಜೆಪಿ ವಿರೋಧಿಸಲಿದೆ ಜನಾಂದೋಲನ ನಡೆಸಲಾಗುವುದು ಡಿ.26 ರಂದು ಪ್ರಜಾಪ್ರಭುತ್ವದ ಕಗ್ಗೊಲೆಯನ್ನ‌ ಖಂಡಿಸಿ ಶಿವಮೊಗ್ಗದಲ್ಲಿ ಬಿಜೆಪಿ ಪ್ರತಿಭಟಿಸಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಜಿಲ್ಲಾ ಪ್ರಧಾನಕಾರ್ಯದರ್ಶಿ ಹರಿಕೃಷ್ಣ, ಜಿಲ್ಲಾ‌ಮಾಧ್ಯಮ ಸಹಸಂಚಾಲಕ ಮಂಜುನಾಥ್ ಎನ್, ನಗರ ಅಧ್ಯಕ್ಷ ಅಧ್ಯಕ್ಷ ಮೋಹನ್ ರೆಡ್ಡಿ, ನಗರ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಧೀನದಯಾಳ್, ನಗರ ಸೋಷಿಯಲ್ ಮೀಡಿಯಾ ಮುರುಳಿ, ಮಾಧ್ಯಮ ಸಂಚಾಲಕ ಶ್ರೀನಾಗ್ ಉಪಸ್ಥಿತರಿದ್ದರು.

Hate speech bill passed by inciting members of the House, we will question the Speaker's action - Chenni

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close