ಬಾಲಿವುಡ್ ಒಲ್ಲೆ ಎಂದ ಝೈದ್ - Zayd said No Bollywood

 SUDDILIVE || SHIVAMOGGA

ಬಾಲಿವುಡ್ ಒಲ್ಲೆ ಎಂದ ಝೈದ್ - Zayd said No Bollywood  

Zayd, bollywood


ಸಚಿವ ಜಮೀರ್ ಅವರ ಪುತ್ರ ಝೈದ್ ಅವರು ಅಭಿನಯಿಸಿರುವ ಕಲ್ಟ್ ಸಿನಿಮಾ ಜನವರಿ 23 ರಂದು ಬಿಡುಗಡೆಯಾಗಲಿದ್ದು ಪ್ರಮೋಷನ್ ಗೆ ಶಿವಮೊಗ್ಗಕ್ಕೆ ಬಂದಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಝೈದ್, ಕಲ್ಟ್ ರೊಮಾಂಟಿಕ್ ತ್ರಿಲ್ ಸಿನಿಮಾ, ಫೈಟ್ ಕಮರ್ಷಿಯಲ್ ಸಾಂಗ್ ಎಮೋಷನ್, ಪ್ರೀತಿಯಲ್ಲಿ ಮೋಸವಾಗುವ ಕಥೆ ಕಲ್ಟ್ ಸಿನಿಮಾವಾಗಿದೆ. ಯೂಥ್ ಗಳಲ್ಲಿ ಕಲ್ಟ್ ಎಂಬ ಪದ ಬಳಕೆಯಿದೆ. ಕಲ್ಟ್ ಪದ ಹುಟ್ಟಿರುವುದು ಕಲ್ಚರ್ ನಿಂದ ಕಲ್ಟ್ ಬಂದಿದೆ ಮಾಸ್ ಗೂ ಕಲ್ಟ್ ಎಂದು ಕರೆಯುತ್ತಾರೆ. ರವಿವರ್ಮ ಮೂರು ಫೈಟ್ ಇದೆ ಎಂದರು. 

ಪ್ರತಿಯೊಬ್ಬರ ಜೀವನದಲ್ಲಿ ನಡೆದಿರುವ ಸಿನಿಮಾ ಟಚ್ ಆಗಲಿದೆ. ಒಳ್ಳೆಯ ಕಥೆಗಾಗಿ ಕಾಯ್ತಾಯಿದ್ದೆ. ಕನ್ನಡ ಇಂಡಸ್ಟ್ರೀಸ್ ಕಷ್ಟದಲ್ಲಿದೆ. ಅನಿಲ್ ಕುಮಾರ್ ಕಥೆ ಮತ್ತು ನಿರ್ದೇಶಿಸಿದ್ದಾರೆ. ಗಂಗಾಧರ್ ಡಿಸ್ಟ್ರಿಬ್ಯೂಷನ್ ನಮ್ಮ ಸಿನಿಮಾ ಮಾಡ್ತಾಯಿದ್ದಾರೆ. 

2017 ರಲ್ಲಿ ಬಾಂಬೆಯಲ್ಲಿ ತರಬೇತಿ ಮಾಡಿರುವೆ. ಸಿನಿಮಾವನ್ನ ನಾನು ಆಯ್ಕೆಮಾಡಿಕೊಂಡಿದ್ದೇವೆ. ತಂದೆಗೆ ನಾನು ಈ ಫೀಲ್ಡ್ ಆಯ್ಕೆ ಮಾಡಿಕೊಂಡಿರುವುದು ಇಷ್ಟವಿಲ್ಲ ರಾಜಕೀಯನೂ ಇಷ್ಟವಿಲ್ಲ ಉದ್ಯಮಿ ಆಗಿರಲಿ ಎಂಬ ಆಸೆ ಇತ್ತು. ಆದರೆ ನಾನು ಈ ಸಿನಿಮಾ ಕ್ಷೇತ್ರ ಆಯ್ಕೆ ಮಾಡಿಕೊಂಡಿರುವೆ ಎಂದರು. 

ರಚಿತಾ ಅವರದ್ದು ತೂಕ ವಾದ ಪಾತ್ರವಾಗಿದೆ. ಸ್ಟಾರ್ ವಾರ್ ಮಾಧ್ಯಮಗಳ ಆಯ್ಕೆಯಾಗಿದೆ. ನಮ್ಮಲ್ಲಿ ಇಲ್ಲ. ದೊಡ್ಡವರು ಏನೇನು ಮಾಡ್ತಾರೆ  ನಮಗೆ ಬೇಡ. ನಾನು ಬಾಲಿವುಡ್ ನಲ್ಲಿ ನಟಿಸಬಹುದಿತ್ತು. ಕನ್ನಡ ಸಿನಿಮಾದ ಬಗ್ಗೆ ಬಹಳ ಪ್ರೀತಿ ಇತ್ತು ಹಾಗಾಗಿ ಬಾಲಿವುಡ್ ಬಿಟ್ಟು ಸ್ಯಾಂಡಲ್ ವುಡ್  ಎಂದರು. ನಾಯಕಿ ಮಲೈಕಾ ಮಾತನಾಡಿಸೀರಿಯಲ್ ನಲ್ಲಿ ಅಭಿನಯಿಸಿದ್ದೆ ಟೇಕ್ ಆಫ್ ಬೇಕಿತ್ತು ಸಿನಿಮಾದಲ್ಲಿ ಅಭಿನಯಿಸಿರುವೆ. ನಾನು ದಾವಣಗೆರೆಯಲ್ಲಿ ಹುಟ್ಟಿದ್ದೇನೆ. ಪಾತ್ರದ ಹೆಸರು ಹೇಳಲು ಆಗೊಲ್ಲ. ಪ್ಯಾಥೋ ಸಾಂಗ್ ಇದೆ. ಗೀತಾ ಹಾಡಲ್ಲಿ ಕನ್ಫೂಸನ್ ಇರಲಿ ಎಂದು ಮಾಡಿರುವೆ. 

ಸಿನಿಮಾಗೆ ಕಥೆ ಬರವಣೆಗೆ ಬೇಕು. ಕಲ್ಟ್ ನೋಡಲು ಎಮಷನ್ ಮತ್ತು ಮನಂಜನೆಯ ಸಿನಿಮಾ ಆಗಿದೆ ಎಂದರು. ಆದರೆ ನಟಿ ರಚಿತಾ ರಾಮ್ ಸುದ್ದಿಗೋಷ್ಠಿಗೆ ಬರಬೇಕಿತ್ತು ಬರಲಿಲ್ಲ. ಸಂಜೆ ರಾಯಲ್ ಆರ್ಕಿಡ್ ನಿಂದ ಶಿವಪ್ಪ ನಾಯಕನ ಪ್ರತಿಮೆಯವರೆಗೆ ಮೆರವಣಿಗೆ ನಡೆಯಲಿದ್ದು ನಟ ಝೈದ್ ಪ್ರತಿಮೆಗೆ ಹಾರಹಾಕಲಿದ್ದಾರೆ. 

Zayd said No Bollywood  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close