ಎಸ್ಕೆಎಂ ಪ್ಲಾಜಾ ಕಟ್ಟಡವನ್ನ ತಕ್ಷಣವೇ ವಶಕ್ಕೆ ಪಡೆಯುವಂತೆ ಹೈಕೋರ್ಟ್ ಆದೇಶ-High Court orders immediate seizure of SKM Plaza building

SUDDILIVE || SHIVAMOGGA

ಎಸ್ಕೆಎಂ ಪ್ಲಾಜಾ ಕಟ್ಟಡವನ್ನ ತಕ್ಷಣವೇ ವಶಕ್ಕೆ ಪಡೆಯುವಂತೆ ಹೈಕೋರ್ಟ್ ಆದೇಶ-High Court orders immediate seizure of SKM Plaza building    

Highcourt, seizure


ದುರ್ಗಿಗುಡಿಯಲ್ಲಿರುವ ಮಹಾನಗರ ಪಾಲಿಕೆಯ ಮಾಜಿ ಮೇಯರ್ S.K ಮರಿಯಪ್ಪನವರ ಮಾಲಿಕತ್ವದಲ್ಲಿರುವ SKM ಪ್ಲಾಜಾ ಕಟ್ಟಡವನ್ನ ಪಾಲಿಕೆಯವರು ತಕ್ಷಣವೇ ವಶಕ್ಕೆ ಪಡೆಯುವಂತೆ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಈ ಆದೇಶದ ವಿರುದ್ಧ ಮಾಜಿ ಮೇಯರ್ ಮತ್ತೆ ಸುಪ್ರೀಂ ಮೆಟ್ಟಲು ಹತ್ತಲಿದ್ದಾರಾ? ಅಥವಾ ಕಟ್ಟಡವನ್ನ ಪಾಲಿಕೆ ಹೇಗೆ ವಶಕ್ಕೆ ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

skm plaza ಮಹಾನಗರ ಪಾಲಿಕೆಯ ಆಸ್ತಿಯಾಗಿದ್ದು ಪಾಲಿಕೆಯ ಆಸ್ತಿಯನ್ನ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದೆ ಎಂದು ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆ ಹೋರಾಟ ನಡೆಸಿತ್ತು. ನಾಗರೀಕ ಹಿತರಕ್ಷಣ ವೇದಿಕೆಗೆ ಈ ಹೋರಾಟದಲ್ಲಿ ಜಯ ಸಿಕ್ಕಿದೆ. ಆಸ್ತಿ ಪಾಲಿಕೆ ಪಾಲಾಗಿದೆ. 

ಮೊದಲಿಗೆ ನಾಗರೀಕ ಹಿತರಕ್ಷಣ ವೇದಿಕೆಯು ಎಸ್ಕೆಎಂ ಪ್ಲಾಜಾವನ್ನ ಪಾಲಿಕೆ ಒತ್ತುವರಿ ಜಾಗದಲ್ಲಿ ನಿರ್ಮಿಸಲಾಗಿದೆ ಎಂದು ಆಡಿಟರ್ ವಸಂತ್ ಕುಮಾರ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಡಿಸಿ ಡಿಎಂಎ (ಡೈರೆಕ್ಟರ್ ಆಫ್ ಮುನ್ಸಿಪಲ್ ಅಡ್ಮಿನಿಸ್ಟ್ರೇಷನ್) ಗೆ ಪತ್ರ ಬರೆದಿದ್ದರು. 

ಡಿಎಂಎಯಲ್ಲೂ ಎಸ್ಕೆಎಂ ಪ್ಲಾಜಾ ಜಾಗ ಪಾಲಿಕೆ ಜಾಗದಲ್ಲಿದೆ ಎಂದು ತೀರ್ಪು ಹೊರಬಿದ್ದಿತ್ತು. ಈ ತೀರ್ಪಿನ ವಿರುದ್ಧ ಮರಿಯಪ್ಪನವರೆ ರಾಜ್ಯ ಹೈಕೋರ್ಟ್ ಗೆ ರಿಟ್ ಪಿಟಿಷನ್ ಹಾಕಿದ್ದರು. ಈಗ ನ್ಯಾಯಾಲಯ ನಾಗರೀಕ ಹಿತರಕ್ಷಣ ವೇದಿಕೆಯ ಪರವಾಗಿ ಪಾಲಿಕೆಯ ಜಾಗ ಎಂದು ತೀರ್ಪು ನೀಡಿದೆ. ಜೊತೆಗೆ  ಪಾಲಿಕೆ ತಕ್ಷಣವೇ ಬಿಲ್ಡಿಂಗ್ ನ್ನು ಸ್ವಾದಿನಕ್ಕೆ ಪಡೆದು ಕೊಳ್ಳಲು ಸೂಚಿಸಿದೆ.  

ಈ ಜಾಗದ ಸಂಬಂದ ನಗರದಲ್ಲಿ ಬಹಳ ದೊಡ್ಡ ಸದ್ದು ಮಾಡಿತ್ತು. ಎಸ್ಕೆ ಮರಿಯಪ್ಪ ನವರು ಮೇಯರ್ ಆಗಿದ್ದಾಗ ವಿಷಯ ಬಹಳ ಗಂಭೀರ ಸ್ವರೂಪ ಪಡೆದಿತ್ತು. ಮರಿಯಪ್ಪನವರು ಈ ತೀರ್ಪಿನ ವಿರುದ್ಧ ಏನು ಕ್ರಮ ಕೈಗೊಳ್ಳುತ್ತಾರೆ ಹಾಗೂ ಪಾಲಿಕೆ ಜಾಗವನ್ನ ಹೇಗೆ ವಶಕ್ಕೆ ಪಡೆದುಕೊಳ್ಳಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.

High Court orders immediate seizure of SKM Plaza building

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close