ಜೈಲು ಸುಧಾರಣಾ ವರದಿಗಳು ಧೂಳು ತಿನ್ನುತ್ತಿವೆ-ಡಾ.ಸರ್ಜಿ ಆಕ್ಷೇಪ-Prison reform reports are gathering dust - Dr. Sarji objects

SUDDILIVE || BELGAVI

ಜೈಲು ಸುಧಾರಣಾ ವರದಿಗಳು ಧೂಳು ತಿನ್ನುತ್ತಿವೆ-ಡಾ.ಸರ್ಜಿ ಆಕ್ಷೇಪ-Prison reform reports are gathering dust - Dr. Sarji objects


Prision, dust

ಧೂಳು ತಿಂತಿವೆ ಜೈಲು ಸುಧಾರಣೆ ಮತ್ತು ವರದಿಗಳು, 2014 ರಿಂದ 2024ರ ವರದಿಗಳು ಮೂಲೆಗುಂಪು ಎನ್ನುವ ಅಡಿಬರಹದ ಪತ್ರಿಕಾ ವರದಿಯು ಜೈಲು ಸುಧಾರಣೆಯ ಕುರಿತ ಸರ್ಕಾರದ ನಿರ್ಲಕ್ಷ ಹಾಗೂ ಆಡಳಿತಾತ್ಮಕ ವ್ಯಫಲ್ಯವನ್ನು ಎತ್ತಿ ತೋರಿಸುತ್ತದೆ ಸರ್ಕಾರವು ತನ್ನ ವಿಫಲತೆಯನ್ನು ಮರೆಮಾಚಲು ಸಮಿತಿಯ ಮೇಲೊಂದು ಸಮಿತಿ ನೇಮಕ ಮಾಡುವುದನ್ನು ಬಿಟ್ಟು ಈಗಾಗಲೇ ಸರ್ಕಾರವು ಬಂಧಿಖಾನೆಗಳ ಸುಧಾರಣೆ ಕುರಿತು ನೇಮಕ ಮಾಡಿರುವ ಸಮಿತಿಗಳ ವರದಿಗಳನ್ನು ಅದರಲ್ಲಿನ ಶಿಫಾರಸ್ಸುಗಳನ್ನು ಕಾಲಮಿತಿಯಲ್ಲಿ ಅನುಷ್ಠಾನ ಮಾಡಿ ಕಾರ್ಯರೂಪಕ್ಕೆ ತರಬೇಕು ಹಾಗೂ ಹೊಸ ಸಮಿತಿ ರಚಿಸಿ ತನ್ನ ತಪ್ಪನ್ನು ಮರೆಮಾಚಿ, ಜನರಿಂದ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಕೈಬಿಡಬೇಕೆಂದು ಸದನದಲ್ಲಿ ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಸರ್ಕಾರಕ್ಕೆ ಚಾಟಿ ಬೀಸಿದರು. 

ಒಂದೆಡೆ ಜೈಲಲ್ಲಿ ನಿಯಮ ಮೀರಿ ಮಾಂಸಾಹಾರ ಮದ್ಯ-ಸಿಗರೇಟು ಅಷ್ಟೇ ಅಲ್ಲದೇ ಗಾಂಜಾ - ಮೊಬೈಲ್ ಫೋನ್‌ಗಳು ಖೈದಿಗಳಿಗೆ ದೊರೆಯುತ್ತಿದ್ದು "ಖೈದಿಗಳಿಗೆ ರಾಜಾತಿಥ್ಯ'ದ ವಿಚಾರ ಜಗತ್ ಜಾಹಿರವಾಗಿ, ರಾಜ್ಯ ಸರ್ಕಾರದ ವೈಫಲ್ಯತೆ ಸಾಮಾಜಿಕ ಜಾಲತಾಣ ಮತ್ತು ಸಾರ್ವಜನಿಕ ವಲಯದಲ್ಲಿ ನಗೆಪಾಟಲಿಗಿಡಾಗಿದೆ. ಅದರೆ ಜೈಲುಗಳ ಸುಧಾರಣೆಗೆ ಸರ್ಕಾರವೇ ನೇಮಕಮಾಡಿದ ಸಮಿತಿಗಳು ವರದಿ ನೀಡಿ ವರ್ಷಗಳೇ ಕಳೆದರೂ ಸರ್ಕಾರದ ಕಪಾಟಿನಲ್ಲಿ ಧೂಳು ತಿನ್ನುತ್ತಿವೆ ಎಂದು ಪತ್ರಿಕೆಯಲ್ಲಿ ವರದಿಯಾಗಿವೆ. ಈ ಸಮಯದಲ್ಲಿ ಸರ್ಕಾರ ಮತ್ತೊಂದು ಹೊಸದಾಗಿ ಸಮಿತಿ ರಚನೆಮಾಡಿ ಆದೇಶಿಸಿದೆ.

ಪತ್ರಿಕೆಯ ಅಧಯ್ಯನದ ವರದಿಯಲ್ಲಿ ಪ್ರಕಟವಾಗಿರುವಂತೆ 2014 ರಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಕುಖ್ಯಾತ ಅತ್ಯಾಚಾರಿಯೊಬ್ಬ ಪರಾರಿಯಾಗಿ ಸಾರ್ವಜನಿಕರ ವಲಯದ ಭಾರಿ ಆಕ್ರೋಶಕ್ಕೆ ತುತ್ತಾದಾಗ "ಬಿಪಿನ್ ಗೋಪಾಲ ಕೃಷ್‌ಣ ಸಮಿತಿ" ರಚಿಸಲಾಗಿ ವರದಿ ಸ್ವೀಕೃತವಾಗಿದ್ದರೂ, ವರದಿಯ ಶಿಫಾರಸ್ಸುಗಳು ಕಾರ್ಯರೂಪಕ್ಕೆ ಬಂದಿಲ್ಲ. 2017ರಲ್ಲಿ ಅದೇ ಕೇಂದ್ರ ಕಾರಾಗೃಹದಲ್ಲಿ ತಮಿಳುನಾಡಿನ ರಾಜಕಾರಣಿಗೆ VIP ಸೌಲಭ್ಯ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಹೆಚ್ಚುವರಿ ಕಾರ್ಯದರ್ಶಿ ವಿನಯ್‌ ಕುಮಾರ್ ಸಮಿತಿ ರಚನೆಯಾಗಿ ವರದಿ ಸಲ್ಲಿಕೆಯಾಗಿ 8 ವರ್ಷಗಳೂ ಸಂದರೂ ವರದಿ ಗಂಟು ಬಿಚ್ಚಿಲ್ಲ ಎನ್ನಲಾಗಿದೆ, 2022ರಲ್ಲಿ ಶಂಕಿತ ಉಗ್ರರು ಹಾಗೂ ಖೈದಿಗಳು ಮೊಬೈಲ್ ಬಳಕೆ ಬಗ್ಗೆ, ವಿಡಿಯೋ ಬಯಲಾಗಿದ್ದಾಗ ADGP ಮುರುಗನ್ ಸಮಿತಿ ರಚನೆಯಾಗಿ ವರದಿ ನೀಡಿದರು. ಆದರೆ ಅಧಿಕಾರಗಳ ವರ್ಗಾವಣೆ ಬಿಟ್ಟು ಯಾವುದೇ ಸುಧಾರಣೆ ಆಗಲಿಲ್ಲ ಎಂದು ಹೇಳಿದರು 

ಮುಂದುವರೆದು ಮಾತನಾಡಿದ ಇವರು  ಕಳೆದ ವರ್ಷವೂ ನಟ ದರ್ಶನ್ ಹಾಗೂ ಅವರ ಸಹಚರರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರಾಜ್ಯಾತಿಥ್ಯ ನೀಡಲಾಗಿದೆ ಎಂಬ ಆರೋಪ ಬಂದಾಗ ಅಂದು ಸಿಸಿಬಿ ಮುಖ್ಯಸ್ಮರಾಗಿದ್ದ ಐಜಿಪಿ ಡಾ. ಚಂದ್ರಗುಪ್ತ ನೇತೃತ್ವದ ಸಮಿತಿಯನ್ನು ಇದೇ ಕಾಂಗ್ರೆಸ್ ಸರ್ಕಾರ ನೇಮಕ ಮಾಡಿದ್ದು, ಅವರು ಸುದೀರ್ಘ ಅಧ್ಯಯನದೊಂದಿಗೆ 4 ತಿಂಗಳ ಹಿಂದೆ ಸರ್ಕಾರಕ್ಕೆ ವರದಿ ಸಲ್ಲಿಸಿ ಅನೇಕ ಶಿಫಾರಸ್ಸುಗಳನ್ನು ಮಾಡಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ವರದಿ ಕಪಾಟು ಸೇರಿದೆ. 

ಸರ್ಕಾರವು ತನ್ನ ವಿಫಲತೆಯನ್ನು ಮರೆಮಾಚಲು ಸಮಿತಿಯ ಮೇಲೊಂದು ಸಮಿತಿ ನೇಮಕ ಮಾಡುವುದನ್ನು ಬಿಟ್ಟು ಈಗಾಗಲೇ ಸರ್ಕಾರವು ಬಂಧಿಖಾನೆಗಳ ಸುಧಾರಣೆ ಕುರಿತು ನೇಮಕ ಮಾಡಿರುವ ಸಮಿತಿಗಳ ವರದಿಗಳನ್ನು ಅದರಲ್ಲಿನ ಶಿಫಾರಸ್ಸುಗಳನ್ನು ಕಾಲಮಿತಿಯಲ್ಲಿ ಅನುಷ್ಠಾನ ಮಾಡಿ ಕಾರ್ಯರೂಪಕ್ಕೆ ತರಬೇಕು ಹಾಗೂ ಹೊಸ ಸಮಿತಿ ರಚಿಸಿ ತನ್ನ ತಪ್ಪನ್ನು ಮರೆಮಾಚಿ, ಜನರಿಂದ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಕೈಬಿಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.

Prison reform reports are gathering dust - Dr. Sarji objects

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close