SUDDILIVE || SHIVAMOGGA
ಬಾಬ್ರಿ ಮಸೀದಿ ಕಟ್ಟಿದರೆ ಧ್ಚಂಸ-ಈಶ್ವರಪ್ಪ-If Babri Masjid is built, it will be a disaster - Eshwarappa
ಭಗವದ್ಗೀತೆಯನ್ನ ಶಾಲಾ ಪಠ್ಯದಲ್ಲಿ ಸೇರಿಸಬೇಕು ಎಂದು ಪತ್ರ ಬರೆದಿರುವ ಕೇಂದ್ರ ಸಚಿವ ಕುಮಾರ ಸ್ವಾಮಿಯನ್ನ ಮನುವಾದಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿರುವುದಕ್ಕೆ ಮಾಜಿ ಡಿಸಿಎಂ ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನುಕೂಲ ಆದರೆ ಆಸಕ್ತಿ ಇದ್ದರೆ ಸಿಎಂ ಸಿದ್ದರಾಮಯ್ಯ ಒಮ್ಮೆ ಭಗವದ್ಗೀತೆಯನ್ನ ಓದಲಿ. ಮಾನವಕುಲಕ್ಕೆ ಸಮಸ್ಯೆ ಬಗೆಹರಿಸಲು ಉದ್ಗ್ರಂಥವಾದ ಭಗವದ್ಗೀತೆಯನ್ನ ಓದಲಿ. ಎಲ್ಲಾ ಧರ್ಮದ ಕ್ಷಮೆ ಕೇಳಬೇಕು ಎಂದರು.
ಸಮಾರೋಪ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆಯಿಂದ ಪಿಯು ಕಾಲೇಜಿನ ವರೆಗೆ ಪಠ್ಯ ಪುಸ್ತಕ ಮಾಡಲು ಕೋರಿದ್ದೆ. ಕುಮಾರ ಸ್ವಾಮಿಯವರು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರ ಬರೆದಿದ್ದಾರೆ. ಸ್ವಾಗತಿಸುವೆ. ಇದನ್ನಮನುವಾದಿಗಳೆಂದು ಸಿಎಂ ಹೇಳಿರುವುದು ಬೇಸರ ತಂದಿದೆ ಎಂದರು.
ಭಗವದ್ಗೀತ ಅಭಿಯಾನ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಎಲ್ಲಾಕಾರ್ಯಕರ್ತರಿಗೆ ಅಭಿನಂದಿಸುವೆ. ಸಿದ್ದರಾಮಯ್ಯನವರು ಭಗವದ್ಗೀತೆ ಬಗ್ಗೆ ಹಗೂರವಾಗಿ ಮಾತನಾಡುತ್ತಾರೆ ಹಾಗೆ ಕುರಾನ್ ಬಗ್ಗೆ ಮಾತನಾಡಲಿ ಎಂದು ಈಶ್ವರಪ್ಪ ಸವಾಲು ಹಾಕಿದರು.
ಕುರಾನ್ ನತ್ತು ಬೈಬಲ್ ಬಗ್ಗೆ ಮಾತನಡಿದರೆ ಸಿಎಂ ಸ್ಥಾನದಲ್ಲಿ ಕೂರಲು ಬಿಡುತ್ತಿರಲಿಲ್ಲ. ಹಾಗಾಗಿ ಭಗವದ್ಗೀತೆ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದರು. ಅಭಿವೃದ್ಧಿ ಕಾರ್ಯವನ್ನ ಬಿಟ್ಟು ಮುಸ್ಲೀಂ ಸಂತೃಪ್ತಿ ಪಡಿಸುತ್ತಲೇ ಬಂದ್ರಿ ಈಗಲಾದರೂ ಬದಲಾಗಿ ಎಂದರು.
ಬಾಬರಿ ಮಸೀದಿ ಕಟ್ಟೇ ಕಟ್ಟುವುದಾಗಿ ಮುಸ್ಲೀಂ ಸಮುದಾಯ ಹೇಳುತ್ತಿದೆ. ಮುಸ್ಲೀಂಗೂ ಬಾಬರ್ ಗೂ ಏನು ಸಂಬಂಧ, ಹೆಸರು ಇಟ್ಟರೆ ಯಾವಕಾರಣಕ್ಕೂ ಹಿಂದೂ ಸಮಾಜ ಸುಮ್ಮನಿರಲ್ಲ. ಈ ದೇಶದಲ್ಲಿ ಹಲವಾರು ಮುಸ್ಲೀಂರು ಇದ್ದಾರೆ. ಸ್ವಾತಂತ್ರ್ಯಕ್ಜಾಗಿ ಹೋರಾಡಿದವರು ಇದ್ದಾರೆ. ಅವರ ಹೆಸರು ಇಡಿ ಎಂದು ಸಲಹೆ ಮಾಡಿದರು.
ಮಥುರಾ ಮತ್ತು ಕಾಶಿಯಲ್ಲಿ ಅಯೋಧ್ಯ ರೀತಿಯ ಮಂದಿರ ಕಟ್ಟುವುದಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ ಅದನ್ನ ಸ್ವಾಗತಿಸಿದ ಈಶ್ವರಪ್ಪ, ಗೋಹತ್ಯೆ ಮತ್ತು ದ್ವೇಷ ಭಾಷಣಕ್ಕೆ ಜೈಲು ಶಿಕ್ಷೆ ಕಾಂಗ್ರೆಸ್ ನ ಕೆಟ್ಟ ಆಡಳಿತದ ಪರಂಪರೆಯಾಗಿದೆ. ಕಾಂಗ್ರೆಸ್ ನಾಯಕರ ಮನೆಯ ಹೆಣ್ಮಕ್ಕಳನ್ನ ಪ್ರಶ್ನಿಸಿ ನಂತರ ಕಾನೂನು ಜಾರಿಗೆ ತರಲಿ. ಗೋಹತ್ತೆ ಮಾಡಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಿ ಎಂದರು.
ಗೊಡ್ಡು ಬೆದರಿಕೆಗೆ ಹಿಂದೂ ಸಮಾಜ ಹೆದರಲ್ಲ.ಕಾಂಗ್ರೆಸ್ ಮೂರು ರಾಜ್ಯಗಳಲ್ಲಿವೆ ಗೋಹತ್ಯೆ ಬಿಲ್ ಸಡಿಲಗೊಳಿಸಿದರೆ ಕಾಂಗ್ರೆಸ್ ರಾಜ್ಯದಲ್ಲೂ ವಿಸರ್ಜನೆಯಾಗಲಿದೆ ಎಂದು
ಕುಮಾರ ಸ್ವಾಮಿ ಅವರು ಈ ಹಿಂದೆ ಭಗವದ್ಗೀತೆ ವಿರುದ್ಧ ಮಾತನಾಡಿದ್ದರು. ಅದನ್ನ ಸಿಎಂ ವಿರೋಧಿಸಿದ್ದರು. ಆಗ ಅವರಿಗೆ ಹುಚ್ಚು ಹಿಡಿದಿತ್ತು. ಈಗ ಆ ಹುಚ್ಚು ಬಿಟ್ಟಿದೆ. ಬಿಜೆಪಿ ಜೊತೆ ಹೋದ ಮೇಲೆ ಹುಚ್ಚು ಬಿಟ್ಟಿದೆ ಎಂದ ಅವರು, ಸಿಎಂ ಸಿದ್ದರಾಮಯ್ಯ ನಿರ್ಮಲ ಸೀತರಾಮನ್ ವಿರುದ್ಧ ಏಕವಚನ ಬಳಕೆ ಮಾಡಿರುವುದನ್ನ ವಿರೋಧಿಸಿದರು. ನಿರ್ಮಲ ಸೀತಾರಾಮನ್ ಅವರನ್ನ ಏಕವಚನ ಬಳಕೆಯ ಪದ ಕ್ಷಮೆಯಾಚಿಸ ಬೇಕು. ಅವರ ಕೊನೆಗಾಲದಲ್ಲಿ ಸಿಎಂಗೆ ಈ ಹೇಳಿಕೆ ಶೋಭೆ ತರಲ್ಲ.
ದ್ವೇಷದ ಭಾಷಣದಲ್ಲಿ ಮೊದಲು ಜೈಲಿಗೆ ಹೋಗುವುದು ಸಿಎಂ ಮತ್ತು ಡಿಸಿಎಂ ಅವರೇ ಹೋಗಪಿದ್ದಾರೆ. ಮುಸ್ಲೀಂ ಓಲೈಕೆ ಮಾಡುವ ನಿಟ್ಟಿನಲ್ಲಿ ದ್ವೇಷದ ಭಾಷಣ ಮೊದಲು ಇವರೆ ಮಾಡಿ ಜೈಲಿಗೆ ಹೋಗಲಿದ್ದಾರೆ ಎಂದರು.
If Babri Masjid is built, it will be a disaster - Eshwarappa
